ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

 • ದೇವನೂರ ಮಹಾದೇವ ಅವರ  ಕುಸುಮಬಾಲೆ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅದು 12 ಹಾಗೂ 13 ರ ಜನವರಿ 2019ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದೆ. ಆ ಕುರಿತ ವರದಿಯನ್ನು 12.1.2019ರ ಪ್ರಜಾವಾಣಿಯಲ್ಲಿ, ಮಂಜುಶ್ರೀ ಕಡಕೊಳ ಅವರು ಮಾಡಿದ್ದಾರೆ.


  ಮುಂದೆ ನೋಡಿ
 • ಪ್ರಸ್ತುತ ಕೇಂದ್ರ ಸರ್ಕಾರವು ದಲಿತ ಪದವನ್ನು ನಿಷೇಧಿಸಲು ಕ್ರಮ ಕೈಗೊಳ್ಳುತ್ತಿರುವುದರಿಂದ, ಅದನ್ನು ವಿರೋಧಿಸಿ ದೇವನೂರ ಮಹಾದೇವ ಅವರ ನುಡಿಗಳು ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?’ ಅದರ ಕನ್ನಡಾನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಲೇಖನವು 17/9/2018ರ thewire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.https://thewire.in/caste/why-does-the-word-dalit-make-the-government-so-resentful ನಮ್ಮ ಮರು ಓದಿಗಾಗಿ ಇಲ್ಲಿದೆ.


  ಮುಂದೆ ನೋಡಿ
 • Short story Amasa witten by Devanura Mahadeva,
  – Translated by A.K.Ramanujan and Manu Shetty
  Published in- Knit India Through Literature, Volume-1, The South, 1998 
  ಕಥೆಯನ್ನು ಹುಡುಕಿ ಕಳಿಸಿಕೊಟ್ಟ ವಿ.ಎಲ್.ನರಸಿಂಹಮೂರ್ತಿಯವರಿಗೆ ಹಾಗೂ ಬೆರಳಚ್ಚು ಮಾಡಿಸಿಕೊಟ್ಟ ಅಭಿರುಚಿ ಗಣೇಶ್ ಅವರಿಗೆ ನಮ್ಮ ಬನವಾಸಿ ತಂಡದ ಕೃತಜ್ಞತೆಗಳು.


  ಮುಂದೆ ನೋಡಿ
 • ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಶಿವರಾಮ ಕಾರಂತ ಪ್ರಶಸ್ತಿ -3.2.2018ರಂದು ದೇವನೂರ ಮಹಾದೇವ ಅವರಿಗೆ ಪ್ರದಾನ ಮಾಡಲಾಯ್ತು. ಪ್ರಶಸ್ತಿ ಸ್ವೀಕರಿಸಿ ಅಂದು ಅವರು ಅಲ್ಲಿ ಮಾಡಿದ ಭಾಷಣದ ಬರಹ ರೂಪವನ್ನು ರಶ್ಮಿ ಮುನಿಕೆಂಪಣ್ಣ ಅವರು ಅನುವಾದಿಸಿದ್ದು ಅದು 22.7.2018ರ The Indian Express ಪತ್ರಿಕೆಯಲ್ಲಿ ಪ್ರಕಟವಾಗಿದೆ.


  ಮುಂದೆ ನೋಡಿ
 • ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 30.12.2017 ರಂದು http://www.countercurrents.org ಹಾಗೂ http://indianculturalforum.in ಎಂಬ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.


  ಮುಂದೆ ನೋಡಿ
 • ‘ಎದೆಗೆ ಬಿದ್ದ ಅಕ್ಷರ’ ಕುರಿತು ಪ್ರೊ.ಶಿವರಾಮಯ್ಯ ಅವರು ‘ಅರುಹು ಕುರುಹು’, ಜೂನ್ 2013ರ ಸಂಚಿಕೆಯಲ್ಲಿ ಬರೆದ ಲೇಖನ ನಮ್ಮ ಓದಿಗಾಗಿ ….


  ಮುಂದೆ ನೋಡಿ
 • ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕುರಿತು ನಾಗರಾಜು ತಲಕಾಡು ಅವರು ಬರೆದ ವಿಮರ್ಶೆ, ಅವರ ‘ಸೌಹಾರ್ದ ವಿಮರ್ಶೆ’ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಆ ಲೇಖನ ….


  ಮುಂದೆ ನೋಡಿ
 • 1992 ರ ಸಂಚಯ ಸಾಹಿತ್ಯ ಪತ್ರಿಕೆಯ ವಿಶೇಷಾಂಕ ‘ಬಗೆ ತೆರೆದ ಬಾನು’ ವಿನಲ್ಲಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಂದು ಮಾತುಕತೆ ನಡೆಸಿದ್ದಾರೆ ಪತ್ರಿಕೆಯ ಸಂಪಾದಕರೂ ಕವಿಯೂ ಆದ ಡಿ.ವಿ.ಪ್ರಹ್ಲಾದ್ ಅವರು. ಸಂದರ್ಶನದ ಮರು ಓದು, ಅಡಿಗರ ಕುರಿತ ನಮ್ಮ ಗ್ರಹಿಕೆಯ ವಿಸ್ತರಣೆಗಾಗಿ …


  ಮುಂದೆ ನೋಡಿ
 • ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಉಪನ್ಯಾಸಕರು ಹಾಗೂ ವಿಮರ್ಶಕರು ಆದ ನಾಗಣ್ಣ ಕಿಲಾರಿಯವರು ತಮ್ಮ ‘ನಕ್ಷತ್ರ ಮಾರ್ಗ’ ವಿಮರ್ಶಾ ಸಂಕಲನದಲ್ಲಿ ಬರೆದಿರುವುದು.


  ಮುಂದೆ ನೋಡಿ
 • ದೇವನೂರ ಮಹಾದೇವ ಅವರ ‘ಒಡಲಾಳ’ ವನ್ನು ಉರ್ದುವಿಗೆ ಪ್ರೊ.ಮಾಹೆರ್ ಮನ್ಸೂರ್ ಅವರು ಅನುವಾದಿಸಿದ್ದು ಅದನ್ನು ಕನ್ನಡದ ಇತರ ಉತ್ತಮ ಕೃತಿಗಳ ಅನುವಾದದ ಜೊತೆಗೆ ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಅದರ ಪ್ರತಿರೂಪ ಇಲ್ಲಿದೆ.


  ಮುಂದೆ ನೋಡಿ