ಹೆಜ್ಜೆಗುರುತು

ದೇವನೂರ ಮಹಾದೇವ ಅವರ ಬದುಕು-ಬರಹದ ಕುರಿತು ಕಿರು ಪರಿಚಯ ಹಾಗೂ ಮುಖ್ಯ ಘಟ್ಟಗಳ ದಾಖಲೀಕರಣ ಈ ಹೆಜ್ಜೆಗುರುತು.

ಮೈಲಿಗಲ್ಲುಗಳು

ಹುಟ್ಟಿದ್ದು-1948ರ ಏಪ್ರಿಲ್ ತಿಂಗಳಿನ ಯಾವುದೋ ಒಂದು ಸೋಮವಾರ, [ಶಾಲಾ ದಾಖಲಾತಿಗಳಲ್ಲಿ 10 ಜೂನ್ 1948]

ಹುಟ್ಟೂರು- ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮ.
ಹೆತ್ತವರು-ನಂಜಮ್ಮ ಮತ್ತು ಸಿ,ನಂಜಯ್ಯ
ಕುಟುಂಬ– ಪತ್ನಿ ಪ್ರೊ.ಕೆ. ಸುಮಿತ್ರಾಬಾಯಿ
ಹಿರಿಯ ಮಗಳು ಉಜ್ವಲ, ಅಳಿಯ ವೆಂಕಟೇಶ್, ಮೊಮ್ಮಗ ಅರವಿಂದ
ಕಿರಿಯ ಮಗಳು ಡಾ.ಮಿತಾ, ಅಳಿಯ ಅವಿನಾಶ್, ಮೊಮ್ಮಗಳು ರುಹಾನಿ

ಪ್ರೀತಿಯ ಕೃಷಿ ಭೂಮಿ-ಬನವಾಸಿ

ಪ್ರಾಥಮಿಕ ಶಿಕ್ಷಣ-ಚಿಕ್ಕ ಕವಲಂದೆ, ಹುಣಸೂರು

ಮಾಧ್ಯಮಿಕ-ಹೊಮ್ಮರಗಳ್ಳಿ, ಹುಣಸೂರು

ಪ್ರೌಢಶಾಲೆ-ದೇವನೂರು, ಸಾಲಿಗ್ರಾಮ

ಪಿ ಯು ಸಿ-ಯುವರಾಜ ಕಾಲೇಜು, ಮೈಸೂರು

ಬಿ.ಎ-ಮಹಾರಾಜ ಕಾಲೇಜು, ಮೈಸೂರು

ಕನ್ನಡ ಎಂ.ಎ- 1973-74[ಕನ್ನಡ ಅಧ್ಯಯನ ಸಂಸ್ಥೆ, ಗಂಗೋತ್ರಿ, ಮೈಸೂರು]

ವೃತ್ತಿ- ಭಾರತೀಯ ಭಾಷಾ ಸಂಸ್ಥಾನ, ಮೈಸೂರು,[ಸಿಐಐಎಲ್‌]ನಲ್ಲಿ ಅಧ್ಯಾಪಕ 1975-1989

ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ಸಹಜ ಕೃಷಿಯಲ್ಲಿ ತೊಡಗಿದ್ದು -1989

ಸಾಹಿತ್ಯ ಕುರಿತು

ಮೊದಲಕತೆ- “ಕತ್ತಲ ತಿರುವು” ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದು-1967
ದ್ಯಾವನೂರು-[ಕಥಾಸಂಕಲನ]-1973
ಒಡಲಾಳ-[ನೀಳ್ಗತೆ]- 1979
ಕುಸುಮಬಾಲೆ– [ಕಾದಂಬರಿ]-1984

ಸಮಗ್ರ ಕೃತಿ ಪ್ರಕಟಣೆ-1992 [ಲಂಕೇಶ್ ಪ್ರಕಾಶನ]
ಯಾರ ಜಪ್ತಿಗೂ ಸಿಗದ ನವಿಲುಗಳು-1999 [ಪರಿಷ್ಕೃತ ಮುದ್ರಣ 2013]ಮಹಾದೇವರ ಸಾಹಿತ್ಯ ಕುರಿತು ಅಭಿನವ ಪ್ರಕಾಶನ ವಿಶೇಷ ಸಂಚಿಕೆ
ಎದೆಗೆ ಬಿದ್ದ ಅಕ್ಷರ-[ಲೇಖನಗಳ ಸಂಕಲನ]- 2012 [ಇದುವರೆಗೆ 25 ಮುದ್ರಣ ಕಂಡಿದೆ]

ನೋಡು ಮತ್ತು ಕೂಡು-[ವಯಸ್ಕರ ಶಿಕ್ಷಣ ಪಠ್ಯ]

ಗಾಂಧಿ ಮತ್ತು ಮಾವೋ-[ಅನುವಾದ]

ಈಗ ಭಾರತ ಮಾತಾಡುತ್ತಿದೆ-2020

ಆರ್.ಎಸ್.ಎಸ್. ಆಳ ಮತ್ತು ಅಗಲ-2022 [ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ಹಾಗೂ ಇಂಗ್ಲಿಷ್, ಉರ್ದು, ಮರಾಠಿ, ತೆಲುಗು, ತಮಿಳು, ಮಲಯಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ]

ಪ್ರಶಸ್ತಿ-ಗೌರವಗಳು

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-1984

ಒಡಲಾಳಕ್ಕೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ-1984

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿರಾಕರಣೆ -1983

ಅಮೇರಿಕಾದ ಅಯೋವಾದಲ್ಲಿ ಅಂತರಾಷ್ಟ್ರೀಯ ಬರಹಗಾರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು-1989

ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1990 [ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕನ್ನಡಿಗ] [14.11.2015 ರಂದು ಹಿಂದಿರುಗಿಸಲಾಗಿದೆ. ]

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-1995

ಕರ್ನಾಟಕ ರಾಜ್ಯ ಅಂಬೇಡ್ಕರ್ ಪ್ರಶಸ್ತಿ

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸಾಹಿತ್ಯ ಸಾಧನೆಗಾಗಿ-2011   [14.11.2015 ರಂದು ಹಿಂದಿರುಗಿಸಲಾಗಿದೆ.]

ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ನಿರಾಕರಣೆ-2012

ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -14.4.2012

ಅವಧಿ ವೆಬ್ ವತಿಯಿಂದ ಮಹಾದೇವರ ಕುರಿತ ವಿಶೇಷ ಸಂಚಿಕೆ-11.12.2012

ಅಲ್ಲಮಪ್ರಭುವಿನ ಹೆಸರಿನಲ್ಲಿ ನೀಡುವ ದಾವಣಗೆರೆಯ ಶಿವಯೋಗಾಶ್ರಮ ವಿರಕ್ತಮಠದ ಶೂನ್ಯಪೀಠ ಪ್ರಶಸ್ತಿ-2012

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ-2013

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್-2013

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವಿ.ಎಮ್.ಇನಾಂದಾರ್ ಪ್ರಶಸ್ತಿ-2013

ಬೆಂಗಳೂರು ಸ್ಪೂರ್ತಿಧಾಮದ ಬೋಧಿವೃಕ್ಷ ಪ್ರಶಸ್ತಿ-2013

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ನಿರಾಕರಣೆ-2014

ಕುವೆಂಪು ರಾಷ್ಟ್ರೀಯ ಪುರಸ್ಕಾರ 2016- 29.12.2016ರಂದು ಪ್ರದಾನ.

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ  ಶಿವರಾಮ ಕಾರಂತ ಪ್ರಶಸ್ತಿ -3.2.2018ರಂದು  ಪ್ರದಾನ.

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ನಡೆಸುವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದ್ದಾರೆ.

ಇತರೆ

ಜೆ.ಪಿ. ಸ್ವಾಗತ ಸಮಿತಿ ಅಧ್ಯಕ್ಷ

ದಲಿತ ಸಂಘರ್ಷ ಸಮಿತಿ ಸಂಚಾಲಕ

ಕನ್ನಡ ಕಾವಲು ಸಮಿತಿ ಸದಸ್ಯ

ಹಂಪಿ, ಕನ್ನಡ ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕ

ಕನ್ನಡಕ್ಕೆ ಅಂಬೇಡ್ಕರ್ ಅನುವಾದ ಸಂಪಾದಕ ಮಂಡಳಿ ಸದಸ್ಯ

ಸಮುದಾಯದೊಂದಿಗೆ-ಕಳೆದ ಐದು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ, ನಾಲ್ಕು ದಶಕಗಳಿಂದ ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳೊಡಗೂಡಿ 2005ರಲ್ಲಿ ಹುಟ್ಟಿಕೊಂಡ ಪರ್ಯಾಯ ರಾಜಕಾರಣದ ಪ್ರಯೋಗವಾದ ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದರು. 2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ಯಲ್ಲಿ ಮುಖ್ಯರು. 25.3.2017ರಲ್ಲಿ ಸರ್ವೋದಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ ವಿಲೀನಗೊಂಡ ನಂತರ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.

ಅನುವಾದಗಳು
ಕುಸುಮಬಾಲೆ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಇಂಗ್ಲಿಷ್‌ಗೆ ಸೂಸಾನ್
ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ.
ಮರಾಠಿಗೆ  ರಾಜಶ್ರೀ ಜಯರಾಮ ಅವರಿಂದ,
ಬೆಂಗಾಲಿಗೆ ಮೀರಾ ಚಕ್ರವರ್ತಿಯವರಿಂದ,
ಮಲೆಯಾಳಿಗೆ ಸಿ.ಕಮಲಾದೇವಿಯವರಿಂದ ತರ್ಜುಮೆಗೊಂಡಿದೆ.

ಒಡಲಾಳ ಮತ್ತು ಕೆಲ ಸಣ್ಣ ಕಥೆಗಳು-
ಇಂಗ್ಲಿಷ್‌ಗೆ ಎ.ಕೆ.ರಾಮಾನುಜನ್ ಮತ್ತು ಮನುಶೆಟ್ಟಿ
ಒಡಲಾಳ ತೆಲುಗಿಗೆ ವೆಂಕಟಸುಬ್ಬಯ್ಯ
ಒಡಲಾಳ ತಮಿಳಿಗೆ ಪವನನ್- ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಣೆ