ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ಗಾಂಧಿವಾದದ ಹಿನ್ನೆಲೆಯಲ್ಲಿ ಸ್ತ್ರೀವಾದ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳಾ ಪಾತ್ರದ ವಸ್ತು ನಿರ್ವಹಣೆಯ ಕುರಿತು ವಿಮರ್ಶಾತ್ಮಕವಾಗಿ ಡಾ.ಪ್ರೀತಿ ಶುಭಚಂದ್ರ ಈ ಲೇಖನದಲ್ಲಿ ನಿರೂಪಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹೊರತರುತ್ತಿದ್ದ ‘ಮಹಿಳಾ ಅಧ್ಯಯನ’-ಉತ್ತರಾಯಣ ಸಂಚಿಕೆ ಜನವರಿ 1999, ಸಂಪುಟ 1, ಸಂಚಿಕೆ 1ರಲ್ಲಿ ಈ ಲೇಖನ ದಾಖಲಾಗಿದೆ. ಈ ಸಂಚಿಕೆಯ ಸಂಪಾದಕರು ಡಾ.ಎಚ್.ಎಸ್.ಶ್ರೀಮತಿಯವರು. ನಮ್ಮ ಮರು ಓದಿಗಾಗಿ ಈ ಲೇಖನ.
ಮುಂದೆ ಓದಿ -
-
-
ವಿಮರ್ಶಕರಾದ ವಿ.ಎನ್.ಲಕ್ಷ್ಮೀನಾರಾಯಣ ಅವರು ದೇವನೂರ ಮಹಾದೇವ ಅವರ ‘ದ್ಯಾವನೂರು’ ಕಥಾ ಸಂಕಲನದ ಕುರಿತು ಬರೆದ ವಿಮರ್ಶೆ ಅವರ ‘ನಿರಂತರ’ ಸಂಕಲನದಲ್ಲಿ ದಾಖಲಾಗಿದೆ ಆ ಬರಹ ನಮ್ಮ ಮರು ಓದಿಗಾಗಿ.
ಮುಂದೆ ನೋಡಿ -
‘ಎದೆಗೆ ಬಿದ್ದ ಅಕ್ಷರ’ ಕುರಿತು ವಿಮರ್ಶಕ, ಕಥೆಗಾರ ಮೊಗಳ್ಳಿ ಗಣೇಶ್ ಅವರು ಈ ಹಿಂದೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗಾಗಿ ಬರೆದ ಬರಹವನ್ನು ನಮ್ಮ ಬನವಾಸಿಗಾಗಿ ನೀಡಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು.
ಮುಂದೆ ನೋಡಿ -
ಹುಲಿಕುಂಟೆ ಮೂರ್ತಿ ಅವರು ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬಗೆಗಿನ ಪುಸ್ತಕಕ್ಕೆ ಬರೆದ ಲೇಖನ -ಡಿಸೆಂಬರ್ 2013
ಮುಂದೆ ನೋಡಿ -
ವಿಮರ್ಶಕ ವಿ.ಎನ್. ಲಕ್ಷ್ಮೀನಾರಾಯಣ ಅವರು ‘ಒಡಲಾಳ’ ಕೃತಿಯನ್ನು ಕೇಂದ್ರದಲ್ಲಿರಿಸಿಕೊಂಡು ದೇವನೂರರ ಇತರ ಕಥೆಗಳು ಮತ್ತು ಕುಸುಮಬಾಲೆಯನ್ನು ವಿಮರ್ಶಿಸಿದ್ದು ಅದು ಅವರ ‘ನಿರಂತರ’ ಸಂಕಲನದಲ್ಲಿ ದಾಖಲಾಗಿದೆ
ಮುಂದೆ ಓದಿ -
ಸದಾಶಿವ ಎಣ್ಣೆಹೊಳೆಯವರು ‘ಒಡಲಾಳ’ ಕೃತಿಯ ಕುರಿತು ಬರೆದ ವಿಮರ್ಶೆ ಪ್ರೊ.ಅರವಿಂದ ಮಾಲಗತ್ತಿಯವರು ಕರ್ನಾಟಕ ಸಾಹಿತ್ಯಅಕಾಡೆಮಿ : ಸಾಹಿತ್ಯ ವಿಮರ್ಶೆ– 1985 ಕ್ಕಾಗಿ ಸಂಕಲಿಸಿರುವ ಕೃತಿಯಲ್ಲಿದೆ.
ಮುಂದೆ ಓದಿ -
ಮಾರ್ಚ್ 2013 ರ ‘ಸಂವಾದ’ ಮಾಸಪತ್ರಿಕೆ ‘ಎದೆಗೆ ಬಿದ್ದ ಅಕ್ಷರ’ ಕುರಿತು ಸಂಕಲಿಸಿದ ಒಂದಷ್ಟು ಟಿಪ್ಪಣಿಗಳಲ್ಲಿ ಪ್ರಕಟವಾದ ಕವಿ, ವಿಮರ್ಶಕ ಆರ್.ಸುಧೀಂದ್ರಕುಮಾರ್ ಅವರ ಕಿರು ಟಿಪ್ಪಣಿ.
ಮುಂದೆ ಓದಿ -
‘ಸಮಾನತೆಗಾಗಿ ಮತ್ತೆ ಕನಸು ಕಾಣುತ್ತ’-ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಪುಸ್ತಕದಲ್ಲಿರುವ ಈ ಲೇಖನವನ್ನು ಶ್ರೀಧರಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿ ALJAZEERA ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಆಗಸ್ಟ್ 15, 2016ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.
ಮುಂದೆ ನೋಡಿ