ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ಸರ್ವೋದಯ ಕರ್ನಾಟಕ ಪಕ್ಷವು ಸ್ವರಾಜ್ ಇಂಡಿಯಾ ಜೊತೆ ವಿಲೀನವಾದ 25.3.2017ರಂದು ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿಯನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು ಅದು http://www.countercurrents.org ಎಂಬ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಮುಂದೆ ನೋಡಿ -
ಯಾಜಿ ಪ್ರಕಾಶನ ಪ್ರಕಟಿಸಿರುವ ಕವಿ, ವಿಮರ್ಶಕಿ ಡಾ.ಎಚ್.ಎಲ್. ಪುಷ್ಪಾ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಕೃತಿಯಲ್ಲಿ ‘ದೇವನೂರು ಮಹಾದೇವ ಅವರ ಕಥನ ಸಾಹಿತ್ಯದಲ್ಲಿ ಹೆಣ್ಣು’ ಎಂಬ ಈ ಲೇಖನ ಪ್ರಕಟವಾಗಿದೆ. ಪ್ರತಿಗಳಿಗಾಗಿ ಹಂಪಿಯ ಪ್ರಕಾಶ್ ಯಾಜಿ[9449922800]ಅವರನ್ನು ಸಂಪರ್ಕಿಸಬಹುದು
ಮುಂದೆ ನೋಡಿ -
ಕನ್ನಡ ಸಾಹಿತ್ಯ ಓದು: ದೇಶೀಯತೆಯ ಸವಾಲುಗಳು ಎಂಬ ವಿಮರ್ಶಕ ಡಾ. ಮೇಟಿ ಮಲ್ಲಿಕಾರ್ಜುನ ಅವರ ಈ ಲೇಖನವು ‘ಸಂಚಯ’ ಕನ್ನಡ ಸಾಹಿತ್ಯ, ಸಂಸ್ಕೃತಿ ಪತ್ರಿಕೆ (ಸಂಪಾದಕ: ಡಿ.ವಿ.ಪ್ರಹ್ಲಾದ್) ಸಂಚಿಕೆ 97ರಲ್ಲಿ ಪ್ರಕಟವಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ …
ಮುಂದೆ ನೋಡಿ -
‘ಯಾರ ಜಪ್ತಿಗೂ ಸಿಗದ ಸಾಕವ್ವ’ ಎಂಬ ವಿಮರ್ಶಕಿ ಎಂ.ಎಸ್. ಆಶಾದೇವಿಯವರ ಈ ಲೇಖನ 8.6.2014ರ ಪ್ರಜಾವಾಣಿಯ ಮುಕ್ತಛಂದ ಪುರವಣಿಯ ಅವರ ಅಂಕಣ ‘ನಾರಿಕೇಳಾ’ದಲ್ಲಿ ಪ್ರಕಟವಾಗಿದೆ ಮತ್ತು ಅವರ ‘ನಾರಿಕೇಳಾ’ ಕೃತಿಯಲ್ಲಿ ದಾಖಲಾಗಿದ್ದು ನಮ್ಮ ಮರು ಓದಿಗಾಗಿ …..
ಮುಂದೆ ಓದಿ -
ಪ್ರತಿಸಂಸ್ಕೃತಿಯನ್ನು ರೂಪಿಸುತ್ತಿರುವ ಕತೆಗಳು ಎಂಬ ರಹಮತ್ ತರೀಕೆರೆಯವರ ಈ ಬರಹ ಅವರ ಪ್ರತಿಸಂಸ್ಕೃತಿ ಎಂಬ ಕೃತಿಯಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ ….
ಮುಂದೆ ಓದಿ -
-
ಸಂವಾದ (ಸಾಹಿತ್ಯಿಕ, ಸಾಂಸ್ಕೃತಿಕ ಸಂಕಲನ) ಸಂಚಿಕೆ : 22, ಜುಲೈ-ಆಗಸ್ಟ್ 1991, [ಸಂಪಾದಕರು : ಡಿ.ಎಸ್.ನಾಗಭೂಷಣ, ರಾಘವೇಂದ್ರ ಪಾಟೀಲ, ಸ.ಉಷಾ.] ರ ಸಂಚಿಕೆಯಲ್ಲಿ ಲಕ್ಷ್ಮೀಶ ತೋಲ್ಪಾಡಿ ಅವರು ‘ಪುರಾಣ ಮತ್ತು ಆಧುನಿಕ ಕನ್ನಡ ಸಾಹಿತ್ಯ’, ಎಂಬ ವಿಷಯವನ್ನು ಕುರಿತು ಬರೆದ ಟಿಪ್ಪಣಿ.
ಮುಂದೆ ನೋಡಿ -
ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಎನ್.ಎಸ್. ಶಂಕರ್ ಅವರು ಜೂನ್ 2, 2014ರಂದು ‘ಅವಧಿ’ ಅಂತರ್ಜಾಲ ಪತ್ರಿಕೆಗೆ ಬರೆದ ಬರಹ.
ಮುಂದೆ ನೋಡಿ -
ದೇವನೂರರ ; ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕಥೆ ಕುರಿತು ಅರವಿಂದ ಮಾಲಗತ್ತಿ ಅವರು ಬರೆದ ಈ ಲೇಖನ ಅವರ ‘ಸಾಹಿತ್ಯ ಸಾಕ್ಷಿ’ ಲೇಖನಗಳ ಸಂಗ್ರಹದಲ್ಲಿ ಇದೆ.
ಮುಂದೆ ನೋಡಿ -
ದೇವನೂರ ಮಹಾದೇವರ ‘ಒಡಲಾಳ’ ಕುರಿತು ಯು.ಆರ್.ಅನಂತಮೂರ್ತಿಯವರು ಬರೆದ ಲೇಖನಗಳು – (ರುಜುವಾತು – 12, ಅಕ್ಟೋಬರ್-ಡಿಸೆಂಬರ್, 83.)
ಹಾಗೂ
– (ತ.ಸು.ಶಾಮರಾಯರ ಅಭಿನಂದನ ಗ್ರಂಥ ‘ಸ್ವಸ್ತಿ’ಯಲ್ಲಿ ಪ್ರಕಟವಾದ ಲೇಖನ (ತಳುಕಿನ ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ), ಮೈಸೂರು. 1983.) ಗಳಲ್ಲಿ ಪ್ರಕಟವಾಗಿದೆ
ಮುಂದೆ ಓದಿ