ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಶಿಕ್ಷಣ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಮದ್ದು ಅರೆಯಲು ಅತ್ಯುತ್ತಮ ಸುಸಜ್ಜಿತ ಸಾರ್ವಜನಿಕ ಶಾಲೆಗಳನ್ನು ತೆರೆದರೆ ಸಾಕು, ಖಾಸಗಿ ಶಾಲೆಗಳು ಬಂದ್ ಆಗುತ್ತವೆ ಎಂಬುದನ್ನು ಶಿಕ್ಷಣತಜ್ಞ ವಿ.ಪಿ. ನಿರಂಜನಾರಾಧ್ಯ ಅವರು 25.5.2016 ರ ವಿಜಯಕರ್ನಾಟಕದ ತಮ್ಮ ‘ಪ್ರಸ್ತುತ’ ಅಂಕಣದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ.


    ಮುಂದೆ ನೋಡಿ
  • ಇವತ್ತು ಜಗತ್ತಿನ ಅತ್ಯಂತ ಪ್ರಭಾವಶಾಲಿ ಚಿಂತಕರಾದ ಚಾಮ್‌ಸ್ಕಿಯವರ ಇತ್ತೀಚಿನ ಪುಸ್ತಕ ‘ಬಿಕಾಸ್ ವಿ ಸೇ ಸೋ’ (ಪ್ರ: ಹ್ಯಾಮಿಷ್ ಹ್ಯಾಮಿಲ್ಟನ್, ಪೆಂಗ್ವಿನ್), ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಲು ಅಮೆರಿಕ ಮಾಡಿರುವ ಹೊಂಚು, ದಬ್ಬಾಳಿಕೆ, ಹುಸಿಪ್ರಚಾರಗಳ ಭಯಾನಕ ಮುಖಗಳನ್ನು ಅಂಕಿ-ಅಂಶ, ಆಧಾರಗಳ ಮೂಲಕ ತೋರಿಸಿಕೊಡುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಅದರ ಸಾರವನ್ನು ತಮ್ಮ 25.5.2016ರ ಪ್ರಜಾವಾಣಿ ಅಂಕಣ ‘ಕನ್ನಡಿ’ ಯಲ್ಲಿ ನಟರಾಜ್ ಹುಳಿಯಾರ್ ಅವರು ವಿಶ್ಲೇಷಿಸಿದ್ದಾರೆ.


    ಮುಂದೆ ನೋಡಿ
  • ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡರೂ ನಿರಪರಾಧಿಗಳು ಶಿಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ನಮ್ಮ ಕಾನೂನು ಬೋಧಿಸುತ್ತದೆ. ಆದರೆ ನಾವಿರುವ ಅನುಮಾನ ಮತ್ತು ಸಂಶಯಗಳ ಲೋಕದಲ್ಲಿ ಮತ್ತೆ ಮತ್ತೆ ನಿರಪರಾಧಿಗಳು ವಿನಾಕಾರಣ ಶಿಕ್ಷೆ ಅನುಭವಿಸಬೇಕಾಗಿ ಬಂದಿರುವುದು ವಿಪರ್ಯಾಸ. ಭಿನ್ನ ಪಕ್ಷ- ಧರ್ಮ-ವರ್ಣ-ವರ್ಗಗಳಿಗೆ ಸೇರಿದವರನ್ನು ‘ಅನ್ಯ’ರಂತೆ ಕಾಣುವುದು ಹಾಗೂ ಅವರ ಬಗ್ಗೆ ನಮ್ಮ ಸುಪ್ತಪ್ರಜ್ಞೆಯಲ್ಲಡಗಿರುವ ಸಂಶಯ-ಅಸಹನೆಗಳೇ ಈ ಬಗೆಯ ಅಮಾನವೀಯ ಪರಿಸ್ಥಿತಿಗೆ ಕಾರಣ ಎನ್ನುವುದನ್ನು ವಿಮರ್ಶಕ ಡಾ. ಸಿ. ಎನ್. ರಾಮಚಂದ್ರನ್ ಅವರು 19.5.2016ರ ತಮ್ಮ ಕನ್ನಡಪ್ರಭ ಅಂಕಣ ‘ಇತ್ಯಾದಿ’ ಯಲ್ಲಿ ವಿಶದವಾಗಿ ವಿವರಿಸಿದ್ದಾರೆ.


    ಮುಂದೆ ಓದಿ
  • ಆಧುನಿಕ ತಂತ್ರಜ್ಞಾನವನ್ನು, ಅತ್ಯಂತ ಕಡಿಮೆ ಪ್ರಕೃತಿ ನಾಶದಿಂದ ಮಾನವನ ನಿಜವಾದ ಮೂಲಭೂತ ಅವಶ್ಯಕತೆಗಳನ್ನು ಉತ್ಪಾದಿಸಲು ಬಳಸಿಕೊಳ್ಳಲು ಏನೆಲ್ಲ ನವೀನ ಸಾಧ್ಯತೆಗಳಿವೆ ಎಂಬ ಕಡೆಗೆ ಸದಾ ಬೆಳಕು ಚೆಲ್ಲಲು ಪ್ರಯತ್ನಿಸುವ ನಾಗೇಶ್ ಹೆಗಡೆಯವರು 19.5.2016 ರ ತಮ್ಮ ಪ್ರಜಾವಾಣಿ ಅಂಕಣ ‘ವಿಜ್ಞಾನ ವಿಶೇಷ’ ದಲ್ಲಿ ಈ ಕುರಿತು ಇನ್ನೂ ಹೆಚ್ಚಿನ ಅವಕಾಶಗಳೆಡೆಗೆ, ಆವಿಷ್ಕಾರದೆಡೆಗೆ ನಮ್ಮ ಗಮನ ಸೆಳೆದಿದ್ದಾರೆ.


    ಮುಂದೆ ಓದಿ
  • ನಮ್ಮ ಕೃಷಿ ಲೋಕ ಎಡವಿರುವುದೆಲ್ಲಿ? ಅನಿಯಮಿತ ಮಳೆಯಿಂದ ಆಗುವ ಏರುಪೇರು ಒಂದು ಕಾರಣವಷ್ಟೇ. ಆದರೆ ಅಭಿವೃದ್ಧಿ ಮತ್ತು ಅಧಿಕ ಉತ್ಪಾದನೆಯ ಹೆಸರಿನಲ್ಲಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಆಧುನಿಕ ಕೃಷಿ ತೆಗೆದುಕೊಂಡ ಅವೈಜ್ಞಾನಿಕ ಹೆಜ್ಜೆಗಳು ಮತ್ತು ನಿರ್ಧಾರಗಳು ನಮ್ಮ ದೇಶೀ ಮೂಲ ಮಾದರಿಗಳನ್ನು ನಾಶ ಮಾಡಿ ರೈತರನ್ನು ದಿಕ್ಕೆಡಿಸುತ್ತಿವೆ. ಭೂಮಿಯನ್ನು ಬರಡು ಮಾಡಿವೆ. ಇದರ ಆಳ ಅಗಲಗಳನ್ನು ಹಲವು ವಿಭಾಗಗಳಿಂದ, ಅಧ್ಯಯನ, ಅನುಭವಗಳ ಮೂಲಕ ಕೆ.ಪಿ.ಸುರೇಶ ಅವರು 17.5.2016 ರ ತಮ್ಮ ವಿಜಯಕರ್ನಾಟಕ ಅಂಕಣ ‘ಅಗೇಡಿ’ಯಲ್ಲಿ ಪ್ರಸ್ತುತ ಪಡಿಸಿದ್ದಾರೆ.


    ಮುಂದೆ ಓದಿ
  • ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದ್ದರೂ ಹಳ್ಳಿಗಾಡಿನ ಜನರು ಕೆಲಸವಿಲ್ಲದೆ ಸಾವಿರದ ಸಂಖ್ಯೆಯಲ್ಲಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕೆಲಸವಿದ್ದರೂ ಅದನ್ನು ಕೊಡುವ, ಅವರಿಂದ ಮಾಡಿಸಿಕೊಳ್ಳುವ, ಮಾನವ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಮನಸ್ಸು ಸರ್ಕಾರಗಳಿಗೆ ಇಲ್ಲದಿದ್ದಾಗ, ಆಡಳಿತಶಾಹಿ ಭ್ರಷ್ಟಗೊಂಡಿದ್ದಾಗ ಬಡಜನರಿಗೆ ದಿಕ್ಕಾಗುವರಾದರೂ ಯಾರು? ಜನರು ಮಾಡಿ ತೋರಿರುವ ಯಶಸ್ಸಿನ ನೂರಾರು ಉದಾಹರಣೆಗಳಿದ್ದರೂ ಜನರ ಕೆಲಸಗಳಿಗೆ ಯಂತ್ರಗಳನ್ನು ಅಳವಡಿಸಿಕೊಳ್ಳುವ ಕಾನೂನು ರೂಪಿಸುವ ಅಮಾನವೀಯತೆಗೂ ಸರ್ಕಾರಗಳು ಮುಂದಾದರೆ ….. ಇದನ್ನು 18.5.2016 ರ ಪ್ರಜಾವಾಣಿಯ ವಿಶ್ಲೇಷಣೆ ಅಂಕಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ ಅವರು ಮನಮುಟ್ಟುವಂತೆ ಬರೆದಿದ್ದಾರೆ.


    ಮುಂದೆ ನೋಡಿ
  • ‘ಹುಡುಗ ಬೆಳೆದ ನಂತರ ಗಂಡಸು, ಆದರೆ ಹುಡುಗಿ ಹುಟ್ಟುತ್ತಲೇ ತಾಯಿ’ ಎಂಬ ಮಾತೊಂದು ನಮ್ಮಲ್ಲಿ ಪ್ರಚಲಿತವಿದೆ. ಇದು ಹೆಣ್ಣಿನಲ್ಲಿರುವ ಜೈವಿಕ ಅಂಶವನ್ನು ಪರಿಗಣಿಸಿ ಜನಜನಿತವಾದ ಮಾತು. ಆದರೆ ಹೆಣ್ಣು ಮಕ್ಕಳ ಕುರಿತು ಇಂದಿಗೂ ‘taken for granted’ ಎಂಬ ಅನಾದರವಿರುವ ನಮ್ಮ ಸಮಾಜದಲ್ಲಿ ಈ ಮಾತು ಸಾಮಾಜಿಕವಾಗಿಯೂ, ಸಾಂಸಾರಿಕವಾಗಿಯೂ ನಿಜವಾಗಿಬಿಡುವುದು ವಿಪರ್ಯಾಸ. ಕುಟುಂಬದ ಹೊಣೆಯನ್ನು ಹೊತ್ತು ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಪುಟ್ಟ ಹೆಣ್ಣುಮಕ್ಕಳು ನಮ್ಮ ಸುತ್ತಲೂ ಇದ್ದರೂ ನಮಗೆ ಜಾಣ ಕುರುಡು. ಈ ಕುರಿತು ವಿಶ್ವ ತಾಯಂದಿರ ದಿನವಾದ 8.5.2016 ರಂದು ಪ್ರಜಾವಾಣಿಯ ಮುಕ್ತಚಂದ ಪುರವಣಿಯಲ್ಲಿ ಪತ್ರಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಅವರು ಮನೋಜ್ಞವಾಗಿ ವಿವರಿಸಿದ್ದಾರೆ.


    ಮುಂದೆ ಓದಿ
  • ಪ್ರತಿ ವರ್ಷ ಬೇಸಿಗೆಯ ಕಾಲ ಬರುತ್ತಿದ್ದಂತೆ ಬರದ ಮಾತು ಕೇಳಿ ಬರುತ್ತದೆ. ಎಲ್ಲೆಡೆಯೂ ನೀರಿಗೆ ಹಾಹಾಕಾರ. ನೀರಿಗಾಗಿ ಸಂಘರ್ಷಕ್ಕ ಇಳಿಯುವ ದುಃಸ್ಥಿತಿ. ಯಾಕಿಂತ ಜಲಕ್ಷಾಮ? ಹಿಂದೆ ಇಂಥ ಬರಗಳು ಬಂದಾಗ ನಮ್ಮ ಹಿರಿಯರು ಹೇಗೆ ಎದುರಿಸಿದರು? ಅವರ ಕ್ರಿಯೆಗಳಿಂದ ಹುಟ್ಟಿದ ವಿವೇಕ ನಮ್ಮ ಕಾಲದ ಸಮಸ್ಯೆಗೆ ಪರಿಹಾರವಾಗಬಲ್ಲದೆ? ಮನುಷ್ಯನ ದುರಾಸೆ ಹುಟ್ಟು ಹಾಕಿದ ಸಮಸ್ಯೆಗೆ ಸಾಂಸ್ಕೃತಿಕ ನೆನಪುಗಳು ಪರಿಹಾರವಾಗಬಲ್ಲವು ಎನ್ನುತ್ತದೆ 24.4.2016 ರ ಕನ್ನಡಪ್ರಭ ಸಾಪ್ತಾಹಿಕ ಪುರವಣಿಯ ಕೆ. ವೈ. ನಾರಾಯಣಸ್ವಾಮಿ ಅವರ ಈ ಲೇಖನ.


    ಮುಂದೆ ಓದಿ
  • ಭೀಕರ ಬರಗಾಲವೊಂದೆ ನಮ್ಮ ರೈತರನ್ನು ಕಾಡುತ್ತಿಲ್ಲ. ಬೇಸಾಯದಲ್ಲಿ ಗುಣಾತ್ಮಕವಾಗಿ ತೊಡಗಿಕೊಳ್ಳಲು ಬೇಕಾದ ಯಾವ ಪೂರ್ವ ತಯಾರಿಯ ಬಗ್ಗೆಯೂ ನಮ್ಮ ರೈತರಿಗೆ ಮಾಹಿತಿ, ಅರಿವು ನೀಡುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಜಡ್ಡುಗಟ್ಟಿರುವ ಆಡಳಿತ ಯಂತ್ರ ಮತ್ತು ಸರ್ಕಾರದಿಂದ ಭರವಸೆಯನ್ನು ರೈತರು ಏಕೆ ಕಳೆದುಕೊಳ್ಳುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು 3.5.2016 ರ ವಿಜಯ ಕರ್ನಾಟಕದ ತಮ್ಮ ಅಂಕಣ ‘ಅಗೇಡಿ’ ಯಲ್ಲಿ ಕೆ.ಪಿ. ಸುರೇಶ ಅವರು ಮನಮುಟ್ಟುವಂತೆ ವಿವರಿಸಿದ್ದಾರೆ.


    ಮುಂದೆ ಓದಿ
  • ತ್ರಿಪುರಾದ ಮುಖ್ಯಮಂತ್ರಿ ತಮ್ಮ ಸರಳತೆ ಮತ್ತು ಶುದ್ಧ ಹಸ್ತದಿಂದ ಮನೆಮಾತಾದವರು. ನಡೆ ನುಡಿ ಒಂದೆಂಬಂತೆ ಬದುಕುತ್ತಿರುವವರು. ಅವರಂಥ ರಾಜಕೀಯ ಧುರೀಣರು, ಆಡಳಿತಾಧಿಕಾರಿಗಳು ನಮಗಿಂದು ಬೇಕು ಎಂಬುದಕ್ಕೆ ಒಂದು ಮಾದರಿಯಾಗಿರುವವರು. ಅವರ ಕುರಿತು 16.4.2016 ರ ತಮ್ಮ ಭೂಮಿಗೀತ ಅಂತರ್ಜಾಲ ತಾಣದಲ್ಲಿ ಜಗದೀಶ್ ಕೊಪ್ಪ ಅವರು ಮನ ತಟ್ಟುವಂತೆ ಬರೆದಿದ್ದಾರೆ.


    ಮುಂದೆ ಓದಿ