ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಜನ ಸಂಗ್ರಾಮ ಪರಿಷತ್, ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಕರ್ನಾಟಕ ಪಕ್ಷ, ಸ್ವರಾಜ್ ಅಭಿಯಾನ,  ಸಮಾನತೆಗಾಗಿ ಜನಾಂದೋಲನ, ಕರ್ನಾಟಕ ಜನಶಕ್ತಿ, ಕರ್ನಾಟಕ ಸ್ವರಾಜ್, ಗ್ರಾಮ ಸ್ವರಾಜ್ ಅಭಿಯಾನ ಹಾಗು ಇತರೆ ಸಮಾನ ಮನಸ್ಕ ಸಂಘಟನೆಗಳು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಜುಲೈ 9 ಮತ್ತು 10, 2016 ರಂದು “ಭಾರತ ಮತ್ತು  ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ” ಹಮ್ಮಿಕೊಂಡಿದ್ದ ಸಂದರ್ಭದಲ್ಲಿನ  ಉದ್ಘಾಟನಾ ಸಮಾರಂಭದ  ಕೆಲ…


    ಮುಂದೆ ನೋಡಿ
  • ರೈತರ ಕಷ್ಟಕ್ಕೆ ಮರುಗಿ ವಿದೇಶದಿಂದ ತನ್ನ ಹುಟ್ಟೂರು ಮಂಡ್ಯಕ್ಕೆ ಹಿಂದಿರುಗಿ ರೈತರು ಮತ್ತು ಕೊಳ್ಳುವವರ ಮಧ್ಯೆ ಒಂದು ಕೊಂಡಿಯಂತೆ ‘ಆರ್ಗಾನಿಕ್ ಮಂಡ್ಯ’ ಎಂಬ ಕಲ್ಪನೆಯೊಂದಿಗೆ ಪ್ರಾರಂಭವಾದ ಯುವಕ ಮಧುಚಂದನ್ ಅವರ ಕನಸಿನ ದಾರಿಯ ಕಥೆ http://social.yourstory.com/ ಎಂಬ ಅಂತರ್ಜಾಲ ಪತ್ರಿಕೆಯಲ್ಲಿ 11.3.2016 ರಂದು ಪ್ರಕಟವಾಗಿದೆ. ಇದನ್ನು ಶ್ವೇತ ವಿಟ್ಟ ಎಂಬ ಯುವ ಪತ್ರಕರ್ತೆ ಬರೆದಿದ್ದಾರೆ. ಪರ್ಯಾಯ ಮಾದರಿಯ ಈ ಬರಹ ನಮ್ಮ ಬನವಾಸಿ ಓದುಗರಿಗಾಗಿ …


    ಮುಂದೆ ಓದಿ
  • ಬಾಲ್ಯ ವಿವಾಹವೆಂಬ ಪಿಡುಗನ್ನು ಇಂದಿಗೂ ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಿಯೇ ಇಲ್ಲಾ.ನಿಜಕ್ಕೂ ಅದೊಂದು ‘ಒಪ್ಪಿತ ಅತ್ಯಾಚಾರ’ವೆಂದೇ ಪರಿಗಣಿಸಲ್ಪಡಬೇಕು. ಇಂತಹ ವಿವಾಹಗಳ ಮುಲಕ ಆಗುತ್ತಿರುವ ದುರಂತಗಳ ವಾಸ್ತವ ಚಿತ್ರಣ, ಮತ್ತು ಅದನ್ನು ಮೀರಿ ವಿಧವಾ ವಿವಾಹಗಳ ಮೂಲಕ ಅಂಚಿಗೆ ತಳ್ಳಲ್ಪಟ್ಟ ಹೆಣ್ಣಿನ ಬದುಕಿಗೊಂದು ಆಶಾಕಿರಣದ ಬಗ್ಗೆ ಪತ್ರಕರ್ತ ಪಿ. ಓಂಕಾರ್ ಅವರು 20.7.2016ರ ತಮ್ಮ ಕನ್ನಡಪ್ರಭದ ‘ಪರ್ಯಾಯ’ ಅಂಕಣದಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.


    ಮುಂದೆ ನೋಡಿ
  • ಪತ್ರಕರ್ತರ ಮೇಲೆ ಪ್ರಭಾವ
    ಮುಖ್ಯವಾಹಿನಿಯ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಗ್ರಾಮೀಣ ಬದುಕಿನ ನಾಡಿಮಿಡಿತಕ್ಕೆ ಸ್ಥಾನ ದೊರಕಿಸಿಕೊಟ್ಟ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ (ಪಾಲಗುಮ್ಮಿ ಸಾಯಿನಾಥ್, ಜನನ 1957). ಪ್ರಸ್ತುತ ‘ಪರಿ’ (People’s Archive of Rural India) ಯೋಜನೆಯ ಸಂಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಮಾಧ್ಯಮ ಶಿಕ್ಷಕರಾಗಿಯೂ ಸಾಯಿನಾಥ್‌ ಅವರದು ಬಹುದೊಡ್ಡ ಸಾಧನೆ. ಪ್ರತ್ಯಕ್ಷವಾಗಿ 2000 ಮಂದಿಗೆ ಪಾಠ ಹೇಳಿದ್ದರೂ, ಪರೋಕ್ಷವಾಗಿ ದೇಶದ ಸಾವಿರಾರು ಪತ್ರಕರ್ತರನ್ನು ಅವರು ಪ್ರಭಾವಿಸಿದ್ದಾರೆ. ‘Everybody Loves a Good Drought’ (ಬರ ಅಂದ್ರೆ ಎಲ್ಲರಿಗೂ ಇಷ್ಟ) ಅವರ ಮಹತ್ವದ ಕೃತಿ.
    ಪ್ರಜಾವಾಣಿ 10.7.2016ರ ಪತ್ರಿಕೆಯ ವಿಶೇಷ ಅಂಕಣದಲ್ಲಿ ಅವರ ಸಂದರ್ಶನವನ್ನು ಡಿ.ಎಂ. ಘನಶ್ಯಾಮ್ ಅವರು ಮಾಡಿದ್ದಾರೆ.


    ಮುಂದೆ ಓದಿ
  • ಓದುವವರೂ, ಪ್ರಕಟಿಸುವವರೂ ಇಲ್ಲವೆ೦ಬ ಕೊರಗಿನ ನಡುವೆ “ವಿರಾಮ’ ತನ್ನ ಮೊದಲ ಸ೦ಚಿಕೆಯಿ೦ದಲೂ ಕವಿತೆಗಳನ್ನು ದ೦ಡಿಯಾಗಿ ಪ್ರಕಟಿಸುತ್ತಾ ಬ೦ದಿದೆ. ಒಳ ಪುಟದಲ್ಲಿದ್ದ “ಕವನದ ಭಾಗ್ಯ’ವನ್ನು ಎಲ್ಲ ರೀತಿಯ ಓದುಗರ ಗಮನಕ್ಕೂ ಒಮ್ಮೆ ತರುವ ಉದ್ದೇಶದಿ೦ದ ಈ ವಾರ ಮುಖಪುಟಕ್ಕೆ ಸ್ಥಳಾ೦ತರಿಸಿದ್ದೇ. ಕವನಗಳು ಮುನ್ನೆಲೆಗೆ ಬ೦ದಿದ್ದಕ್ಕೆ ಅದೊ೦ದೇ ಕಾರಣವಲ್ಲ. ಈ ವಾರದ ಕವಿಯೂ ವಿಶೇಷವೇ. ರಾಮು ಎ೦ದೇ ಪರಿಚಿತರಾಗಿರುವ ಮ್ಯೆಸೂರಿನ ಟಿ.ಎಸ್. ರಾಮಸ್ವಾಮಿ ಬರೆದದ್ದೇನನ್ನೂ ಪ್ರಕಟಿಸುವ ಗೋಜಿಗೆ ಹೋದವರಲ್ಲ. ಇವರ “ಅಗ್ತಿಸೂಕ್ತ’ (1992) ಕವನ ಸ೦ಕಲನ ಕೂಡ, ಇವರ ಅರಿವಿಗೆ ತರದೆ ಗೆಳೆಯರು ಸೇರಿ ಪ್ರಕಟಿಸಿದ್ದು. ಕಾವ್ಯ ಮತ್ತು ಭಾಷೆಯ ಪ್ರೀತಿಯಿ೦ದಷ್ಟೇ ಕನ್ನಡ ಕಾವ್ಯಲೋಕವನ್ನು ಹಲವು ದಶಕಗಳಿ೦ದ ಅದೃಶ್ಯವಾಗಿ ಪೊರೆಯುತ್ತಿದ್ದಾರೆ ರಾಮು.​-ವಿಶ್ವವಾಣಿ, “ವಿರಾಮ’ 3.7.2016 ಭಾನುವಾರದ ಸಂಚಿಕೆಯಲ್ಲಿ…


    ಮುಂದೆ ಓದಿ
  • ಭಾರತ ಮತ್ತು ಕರ್ನಾಟಕ ಪ್ರಸ್ತುತ ಸಂದರ್ಭ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ 9 & 10ನೇ ಜುಲೈ 2016, ಧಾರವಾಡ ಜನಾಂದೋಲನಗಳ ಮಹಾಮೈತ್ರಿ ರಚನೆಯ ಕಾರ್ಯಸೂಚಿ: ನಿರ್ಣಯಗಳು


    ಮುಂದೆ ನೋಡಿ
  • ಜನಾಂದೋಲನಕ್ಕೆ ಮರುಜೀವ ಅಗತ್ಯ-ದೇವನೂರ ಮಹಾದೇವ
    ‘ಸಂಘಟನೆಗಳು ತಮ್ಮದೇ ಆದ ಸೀಮಿತ ಗಡಿ ನಿರ್ಮಿಸಿಕೊಂಡಿದ್ದು, ಇಂದು ಜನಾಂದೋಲನ ಸ್ಥಗಿತಗೊಂಡಿದೆ. ಎಲ್ಲರೂ ಒಗ್ಗೂಡಿದಾಗ ಜನಾಂದೋಲನ ಸಾಧ್ಯ. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.
    ‘ಉತ್ತಮ ಸಮಾಜ ನಿರ್ಮಾಣಕ್ಕೆ ಸಂಬಂಧಿಸಿ ಜುಲೈ 9 ಹಾಗೂ 10ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ವಿವಿಧ ಸಂಘಟನೆಗಳು ಏರ್ಪಡಿಸಿರುವ ‘ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯದ ಸಾಧ್ಯತೆ’ಗಳ ಕುರಿತ ಚಿಂತನಾ ಸಮಾವೇಶವನ್ನು ಆಯೋಜಿಸಲಾಗಿದೆ’ ಎಂದು ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ರೈತ ಸಂಘ ಟನೆ, ದಲಿತ ಸಂಘಟನೆ ಸೇರಿ ದಂತೆ ಇತರೆ ಸಂಘಟನೆಗಳು ಇಂದು ತಮ್ಮದೇ ಆದ ಸೀಮಿತ ಎಲ್ಲೆಯನ್ನು ನಿರ್ಮಿಸಿಕೊಂಡಿವೆ. ಅವುಗಳಿಂದ ಹೊರಬಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಎಲ್ಲ ಜಾತಿಗಳಲ್ಲೂ ಪ್ರಗತಿಪರ ಚಿಂತಕರು, ವಿಚಾರವಂತರು ಇದ್ದಾರೆ. ಆದರೆ, ಆಯಾ ಜಾತಿಯಲ್ಲಿರುವ ಲೂಟಿಕೋರ ರಿಂದಾಗಿ ಅವರ ಧ್ವನಿ ಕೇಳದಂತಾಗಿದೆ. ಇದಕ್ಕಾಗಿ ಧಾರವಾಡದಲ್ಲಿ ನಡೆಯುವ ಸಮಾವೇಶ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ’ ಎಂದು ತಿಳಿಸಿದರು. [‘ಪ್ರಜಾವಾಣಿ ವಾರ್ತೆ- 4.7.2016]


    ಮುಂದೆ ಓದಿ
  • ಮನುಷ್ಯನ ದುರಾಸೆ ಮತ್ತು ಚಪಲಕ್ಕೆ ಪ್ರಾಣಿಗಳು ಬಲಿಯಾಗುವುದಷ್ಟೇ ಅಲ್ಲ ಅವನ ತಪ್ಪು ಲೆಕ್ಕಾಚಾರಗಳಿಂದ ಪ್ರಾಕೃತಿಕ ಅಸಮಾನತೆ ಉಂಟಾಗುತ್ತಿರುವುದನ್ನು ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಮತ್ತು ಸಂಘರ್ಷದ ಎರಡೂ ನೆಲೆಗಳಲ್ಲಿ ಬಿಚ್ಚಿಟ್ಟಿದ್ದಾರೆ ಆಹಾರತಜ್ಞ ಕೆ.ಸಿ. ರಘು ಅವರು ತಮ್ಮ 19.6.2016ರ ಕನ್ನಡಪ್ರಭ ಅಂಕಣ ”ಲೋಕಪಕ್ತಿ” ಯಲ್ಲಿ.


    ಮುಂದೆ ಓದಿ
  • ಅಮೆರಿಕದ ಆರು ಅಣುಸ್ಥಾವರಗಳನ್ನು ಭಾರತದಲ್ಲಿ ಹೂಡುವ ಒಪ್ಪಂದಕ್ಕೆ ಮೋದಿ ಹಾಗೂ ಒಬಾಮ ಮೊನ್ನೆ ಸಹಿ ಹಾಕಿದ್ದಾರೆ. ಯಾಕೆ ವಾಜಪೇಯಿ, ಡಾ. ಮನಮೋಹನ್ ಸಿಂಗ್, ನರೇಂದ್ರ ಮೋದಿ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿದವರೆಲ್ಲ ತಮ್ಮ ಇನ್ನೊಂದು ಕೈಯಲ್ಲಿ ಈ ಪರಮಾಣು ಕೊಳ್ಳಿಯನ್ನು ಹಿಡಿಯಬೇಕಾದ ಸ್ಥಿತಿ ಬರುತ್ತಿದೆ? ದೇಶವನ್ನು ಬಲಾಢ್ಯಗೊಳಿಸುವ ಹೆಸರಿನಲ್ಲಿ ಇನ್ನಷ್ಟು ದುರ್ಬಲಗೊಳಿಸುವಂತೆ ಯಾರು ನಮ್ಮನ್ನು ಅಣುಕುಣಿಕೆಯಲ್ಲಿ ಸಿಲುಕಿಸುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಗಳು ಗೊತ್ತಿಲ್ಲವೆಂದು ಹೇಳುತ್ತಲೇ ಅಣು ವಿದ್ಯುತ್ ಘಟಕಗಳಿಂದ ನಮಗೊದಗುವ ಅಪಾಯವನ್ನು, ಸೌರಶಕ್ತಿಯ ಸಶಕ್ತ ಪರ್ಯಾಯ ಸಾಧ್ಯತೆಯನ್ನು ಕುರಿತು ನಾವು ಇನ್ನಾದರೂ ಜಾಗೃತರಾಗುವಂತೆ ಎಚ್ಚರಿಸಿದ್ದಾರೆ ಪ್ರಜಾವಾಣಿಯ 16.6.2016 ರ ತಮ್ಮ ವಿಜ್ಞಾನ ವಿಶೇಷ ಅಂಕಣದಲ್ಲಿ ಖ್ಯಾತ ಪರಿಸರವಾದಿ, ಪರಿಸರ ಬರಹಗಾರ ನಾಗೇಶ್ ಹೆಗಡೆಯವರು.


    ಮುಂದೆ ಓದಿ
  • ನಾವೆಲ್ಲರೂ ವಿಕಾಸಕ್ರಿಯೆಯ ದುರಂತ ಬಂಧಿಗಳು. ಮೇಲುನೋಟಕ್ಕೆ, ತನ್ನವರು, ಬೇರೆಯವರು, ಬಂಧುಗಳು, ಮಿತ್ರರು, ಶತ್ರುಗಳು ಎಂಬ ವಿಂಗಡಣೆ ಕಂಡರೂ, ವಿಕಾಸ ಕ್ರಿಯೆಯ ಅಂತರಾಳದಲ್ಲಿ ಹೊಕ್ಕು ನೋಡಿದಾಗ, ನಾವೆಲ್ಲರೂ ಒಂದೇ ಕರುಳ ಬಳ್ಳಿಯ ಕುಡಿಗಳು; ಪ್ರತಿ ಕುಡಿಯೂ ತನ್ನದೇ ಉಳಿವಿಗಾಗಿ ದುಡಿಯುವ ಮೂಲಕ ಇಡೀ ಬಳ್ಳಿಯ ಉಳಿವಿಗಾಗಿ ಶ್ರಮಿಸುತ್ತಿದೆ ಅಷ್ಟೆ. ಎಂಬ ಸತ್ಯವನ್ನು ಅತ್ಯಂತ ಸೂಕ್ಷ್ಮವಾಗಿ ತಮ್ಮ 12.6.2016ರ ಕನ್ನಡಪ್ರಭ ಅಂಕಣ ‘ವಿಚಾರಣ’ದಲ್ಲಿ ಕೆ.ಎನ್. ಗಣೇಶಯ್ಯ ಅವರು ಮಾಡಿಕೊಟ್ಟಿದ್ದಾರೆ.


    ಮುಂದೆ ಓದಿ