ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ನೈಜ ಖಾದಿ ಉತ್ಪಾದನೆ, ಬೇಡಿಕೆ, ಪೂರೈಕೆಗಳ ಜೊತೆಗೆ ನಕಲಿ ಖಾದಿ ಜಗತ್ತು ಸೃಷ್ಟಿಸಿರುವ ಬೆರಕೆ ಖಾದಿಯ ಒಳ ಹೊರಗನ್ನು ಪತ್ರಕರ್ತ ಪಿ.ಓಂಕಾರ್ ಅವರು 16.3.2016ರ ಕನ್ನಡಪ್ರಭದ ತಮ್ಮ ಪರ್ಯಾಯ ಅಂಕಣದಲ್ಲಿ ವಿಸ್ತೃತವಾಗಿ ಚಿತ್ರಿಸಿದ್ದಾರೆ.


    ಮುಂದೆ ಓದಿ
  • ಎಲ್ಲೆಡೆಯೂ ನೀರಿಗಾಗಿ ಹಾಹಾಕಾರವೆದ್ದಿರುವ ಈ ಸಂದರ್ಭದಲ್ಲಿ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಜಲಕ್ಷಾಮವನ್ನು ಎದುರಿಸಿ ಗೆಲ್ಲಲು ಇನ್ನೂ ಅವಕಾಶವಿದೆ ಎಂದು ಮತ್ತೆ ಎಚ್ಚರಿಸುತ್ತಿದ್ದಾರೆ ತಮ್ಮ 24.3.2016ರ ಪ್ರಜಾವಾಣಿ ಅಂಕಣದಲ್ಲಿ, ವಿಜ್ಞಾನ, ಪರಿಸರ ಬರಹಗಾರ, ನಾಗೇಶ್ ಹೆಗಡೆ ಅವರು.


    ಮುಂದೆ ನೋಡಿ
  • ಭಾರತದ ಮಹಿಳೆಯರು ನಿತ್ಯ ನೆನೆಯಬೇಕಾದ ಮಹಾನ್ ಚೇತನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್. ಮಹಿಳಾ ಪರವಾದ ಅವರ ನಿಲುವು ಮತ್ತು ದೃಡ ಹೋರಾಟ ಮಹಿಳಾ ಚಳುವಳಿಗೆ, ಮಹಿಳಾವಾದಕ್ಕೆ, ಸಂಘಟನೆಗೆ ನೀಡಿದ ಬಲ ಅಸದೃಶ್ಯವಾದುದು. ಲೇಖಕಿ, ಮಹಿಳಾ ಸಂಘಟಕಿ, ಡಾ.ಎಚ್.ಎಸ್. ಅನುಪಮ ಅವರು ತಮ್ಮ ಭೂಮಿ ಬಳಗ ಬ್ಲಾಗ್ನಲ್ಲಿ ಬರೆದಿರುವ ಈ ಲೇಖನದಲ್ಲಿ ಅಂಬೇಡ್ಕರ್ ಚಿಂತನೆಗಳು ಭಾರತದಲ್ಲಿ ಮಹಿಳಾವಾದ ರೂಪುಗೊಳ್ಳುವಲ್ಲಿ ವಹಿಸಿದ ಪಾತ್ರವನ್ನು ಮತ್ತು ಅವುಗಳ ಅಂತರ್ ಸಂಬಂಧವನ್ನು ವಿಶ್ಲೇಷಿಸಿವೆ.


    ಮುಂದೆ ಓದಿ
  • ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರ ಆರಂಭಿಸಿರುವಅಂಬೇಡ್ಕರ್ ಅಭಿಯಾನದ ವಿಸ್ತೃತ ವರದಿಯನ್ನು ಪ್ರವೀಣ ಕುಲಕರ್ಣಿಯವರು 15.3.2016ರ ಪ್ರಜಾವಾಣಿ ಕರ್ನಾಟಕ ದರ್ಶನ ಪುರವಣಿಯಲ್ಲಿ ನೀಡಿದ್ದಾರೆ.


    ಮುಂದೆ ಓದಿ
  • ನಮ್ಮ ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾದ, ಆಕ್ರಮಣಗಳಿಗೆ ಸುಲಭವಾಗಿ ತುತ್ತಾಗುವ ಮಹಿಳೆಯರ ಕುರಿತು ಲೇಖಕ ಅಂಕಣಕಾರ, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಆಕಾರ್‌ ಪಟೇಲ್ ಪ್ರಜಾವಾಣಿಯ 7.3.2016ರ ತಮ್ಮ ಅಂಕಣ ‘ದೂರ ದರ್ಶನ’ದಲ್ಲಿ ಹೊಸ ಅಂಕಿ ಅಂಶಗಳೊಂದಿಗೆ ನಿರೂಪಿಸಿದ್ದಾರೆ.


    ಮುಂದೆ ನೋಡಿ
  • ಅರ್ಥಶಾಸ್ತ್ರ ಸಾಮಾಜಿಕ ಆಯಾಮ ಮತ್ತು ಪರಿಸರ ಸಂಬಂಧ ಹೊರಗಿಟ್ಟು ಬೆಳೆದರೆ ರಕ್ತ, ಮಾಂಸವಿಲ್ಲದ ಅಸ್ಥಿಪಂಜರವಾಗಬಹುದು ಎಂಬುದನ್ನು ‘ಸಂಬಂಧಗಳಿಲ್ಲದ ಅರ್ಥಶಾಸ್ತ್ರ ಮೂಳೆಗಳಿಲ್ಲದ ಅಸ್ಥಿಪಂಜರ’ಎಂಬ ಲೇಖನದಲ್ಲಿ ಆಹಾರ ತಜ್ಞ ಕೆ.ಸಿ.ರಘು 28.2.2016ರ ಕನ್ನಡಪ್ರಭದಲ್ಲಿ ವಿವರಿಸಿದ್ದಾರೆ.


    ಮುಂದೆ ಓದಿ
  • ನೀರಿನ ಕೊರತೆ ನೀಗಿಸಲು ಕೋಟ್ಯಂತರ ಖರ್ಚು ಮಾಡಿ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುವುದಕ್ಕಿಂತ ಸಣ್ಣ ಸಣ್ಣ ಮಾದರಿಗಳನ್ನು ರೂಪಿಸುವಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು. ಈ ಕುರಿತು 27.2.2016ರ ಪ್ರಜಾವಾಣಿ ಅಂತರಾಳ ವಿಭಾಗದಲ್ಲಿ ಶಿವಾನಂದ ಕಳವೆಯವರು ಮನಮುಟ್ಟುವಂತೆ ವಿವರಿಸಿದ್ದಾರೆ.


    ಮುಂದೆ ನೋಡಿ
  • ಶ್ರಮದಾಯಕ ಕೆಲಸ, ಸಾವನ್ನು ಪಣಕ್ಕಿಟ್ಟು ಮಾಡುವ ಕೆಲಸ, ಮಾನವನ್ನು ಮುಡುಪಾಗಿಟ್ಟು ಮಾಡುವ ಕೆಲಸಗಳಲ್ಲಿ ಸಂಭವಿಸುವ ಅವಘಡಗಳನ್ನು ವೃತ್ತಿ ಸಂಬಂಧಿತ ಅವಘಡವೆಂದು ಪರಿಗಣಿಸದೆ ಅದನ್ನೂ ಪ್ರಭುತ್ವ ತನಗೆ ಬೇಕಾದಂತ ಭಾಷೆಯಲ್ಲಿ ನಾಜೂಕಾಗಿ ರೂಪಿಸಿರುವ ಬೆನ್ನ ಹಿಂದೆ ಇರುವ ರಾಜಕೀಯವನ್ನು ಅರ್ಥಮಾಡಿಸುವ ಪರ್ಯಾಯ ಮತ್ತು ಸೂಕ್ಷ್ಮ ಚಿಂತನೆಯನ್ನು 15.2.2016ರ ಕನ್ನಡಪ್ರಭದ ತಮ್ಮ ‘ಪಠ್ಯ -ಪ್ರಮಾಣ’ ಅಂಕಣ ಬರಹದಲ್ಲಿ ವಿ. ನಟರಾಜ್ ಅವರು ವಿಶಿಷ್ಟವಾಗಿ ಮಾಡಿದ್ದಾರೆ.


    ಮುಂದೆ ಓದಿ
  • ಪರ್ಯಾಯ ರಾಜಕಾರಣದ ಪ್ರಯೋಗಗಳನ್ನು ತಮ್ಮ ಸ್ವರಾಜ್ ಸಂವಾದದ ಮೂಲಕ ಪ್ರಚುರಪಡಿಸುತ್ತ ಬರುತ್ತಿರುವ ಯೋಗೇಂದ್ರ ಯಾದವ್ ಅವರು 2015ರ ಏಪ್ರಿಲ್ 29ರಂದು ಬೆಂಗಳೂರಿಲ್ಲಿ ನಡೆದ ‘ಸ್ವರಾಜ್‍ ಸಂವಾದ’ದಲ್ಲಿ ಮಾಡಿದ ಭಾಷಣದ ಕನ್ನಡ ರೂಪಾಂತರದ ಆಯ್ದ ಭಾಗ ಇಲ್ಲಿದೆ.ಇದನ್ನು ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಭಾಷಾಂತರಿಸಿ ಸಂಕಲಿಸಿದ್ದಾರೆ.


    ಮುಂದೆ ನೋಡಿ
  • ತೆಂಗಿನಮರದಿಂದ ದೊರೆಯುವ ಪ್ರತಿಯೊಂದು ಪದಾರ್ಥವನ್ನೂ ಬಳಸಿ [zero waste technology] ಉತ್ಕೃಷ್ಟ ಸಾಧನೆ ಮಾಡಿ ಮಾದರಿ ಎನಿಸಿರುವ ಕೇರಳಾ ರಾಜ್ಯ , ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದ ತೆಂಗು ನಾರಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಾ ದೇಶ ವಿದೇಶಗಳ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರದ ಮೂಲಕ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ಅದರ ಸಾಧ್ಯತೆಯನ್ನು ವಿಸ್ತರಿಸಲು ಮಾದರಿಯಾಗಿದೆ. ಈ ಕುರಿತು 9.2.2016ರ ಕನ್ನಡಪ್ರಭದ ಕೃಷಿ ವಿಭಾಗದಲ್ಲಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ಸಹ್ಯಾದ್ರಿ ನಾಗರಾಜ್ ಅವರು ಪ್ರತ್ಯಕ್ಷ ನೋಡಿ ಬಂದು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.


    ಮುಂದೆ ನೋಡಿ