ಜನಾಂದೋಲನಗಳ ಮಹಾಮೈತ್ರಿ ರಚನೆಯ ಕಾರ್ಯಸೂಚಿ: ನಿರ್ಣಯಗಳು

ಭಾರತ ಮತ್ತು ಕರ್ನಾಟಕ ಪ್ರಸ್ತುತ ಸಂದರ್ಭ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ

                                                               9 & 10ನೇ ಜುಲೈ 2016, ಧಾರವಾಡ

20160709_124809

ಜನಾಂದೋಲನಗಳ ಮಹಾಮೈತ್ರಿ ರಚನೆಯ ಕಾರ್ಯಸೂಚಿ: ನಿರ್ಣಯಗಳು

1. ಜನಚಳವಳಿಗಳ ಮಹಾಮೈತ್ರಿಯೇ ನಮ್ಮ ಮುಂದಿರುವ ಅತಿ ಮುಖ್ಯ ಜನಪರ್ಯಾಯ.

2. ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಒಗ್ಗೂಡಿ ಹೋರಾಡುವುದೇ
ಮಹಾಮೈತ್ರಿಯ ಮುಖ್ಯ ಗುರಿ. ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೇಲೆ ಆಧರಿಸಿದ
ಪ್ರಜಾತಂತ್ರವನ್ನು ಸ್ಥಾಪಿಸುವುದು ನಮ್ಮ ಉದ್ದೇಶ.

3. ಕಾರ್ಪೋರೇಟ್ ಪರ, ಮತಾಂಧ, ಜಾತಿವಾದಿ ಹಾಗೂ ಭ್ರಷ್ಟ ಶಕ್ತಿಗಳನ್ನು ಸೋಲಿಸಿ ಹಿಮ್ಮೆಟ್ಟಿಸುವುದು
ಮಹಾಮೈತ್ರಿಯ ಧ್ಯೇಯ.

4. ಬಲವಾದ ಜನಚಳವಳಿ ಇಲ್ಲದೇ, ಪರಿಣಾಮಕಾರಿ ಪರ್ಯಾಯ ರಾಜಕಾರಣ ಸಾಧ್ಯವಿಲ್ಲ. ಮಹಾಮೈತ್ರಿಯು
ಸ್ವಯಂ ತಾನೇ ಒಂದು ರಾಜಕೀಯ ಪಕ್ಷವಲ್ಲವಾದ್ದರಿಂದ ಜನಪರ ಶಕ್ತಿಗಳನ್ನು ಅಧಿಕಾರಕ್ಕೆ ತರಲು
ಅಗತ್ಯವಿರುವ ರಾಜಕೀಯ ಆಂದೋಲನವನ್ನು ಬೆಳೆಸುವುದು ಅದರ ಪ್ರಮುಖ ಗುರಿಗಳಲ್ಲೊಂದು.

5. ಚಿಂತನಾ ಸಮಾವೇಶದ ಆಶಯಗಳನ್ನು ಮುಂದಿಟ್ಟು, ಸಾಧ್ಯವಿರುವ ಎಲ್ಲಾ ಸಮಾನ ಮನಸ್ಕರನ್ನು
ಒಗ್ಗೂಡಿಸಿ, ಮೂರು ತಿಂಗಳೊಳಗಾಗಿ ಜನಾಂದೋಲನಗಳ ಮಹಾಮೈತ್ರಿಯನ್ನು ಘೋಷಿಸಲಾಗುವುದು.

6. ಮುಂದಿನ ಒಂದು ವರ್ಷದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಜನಪರ್ಯಾಯ ಸಮಾವೇಶಗಳನ್ನು
ಸಂಘಟಿಸಿ ಜನರ ಹಕ್ಕೊತ್ತಾಯಗಳನ್ನು ಮುನ್ನೆಲೆಗೆ ತರಲಾಗುವುದು.

7. 2017ರ ಮೇ ಹೊತ್ತಿಗೆ ಬೃಹತ್ ಜನಾಗ್ರಹ ಸಮಾವೇಶವನ್ನು ಸಂಘಟಿಸಲಾಗುವುದು ಮತ್ತು ಜನತೆಯ
ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು.

8. ಜನತೆಯ ಪ್ರಣಾಳಿಕೆಯನ್ನು ಒಪ್ಪುವ ಮತ್ತು ಜನರ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಶಕ್ತಿಗಳನ್ನು ಮಾತ್ರ
ಬೆಂಬಲಿಸಿ ಎಂಬ ಜನಾಭಿಯಾನವನ್ನು ಆರಂಭಿಸಲಾಗುವುದು.