ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[ದೇವನೂರ ಮಹಾದೇವ ಅವರ ಕಿರು ಹೊತ್ತಿಗೆ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು 2024ರ ಲೋಕಸಭಾ ಚುನಾವಣೆ” ಶನಿವಾರ 4/5/2024ರಿಂದ ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಬುದ್ಧ ಪ್ರಕಾಶನ ಸಂಯುಕ್ತವಾಗಿ ಪ್ರಕಟಿಸಿರುವ ದೇವನೂರ ಮಹಾದೇವ ಅವರ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು ಚುನಾವಣಾ ಅಖಾಡದ ಕ್ಷೋಭೆ” ಕಿರು ಹೊತ್ತಿಗೆ ಕೂಡಾ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ… ನಿಮ್ಮ ಪ್ರತಿಗಾಗಿ ಸಂಪರ್ಕಿಸಿ ಅಭಿರುಚಿ ಗಣೇಶ್ ದೂ.ಸಂ-9980560013]
» -
[25.4.2024ರ ಸಂಜೆ ಮೈಸೂರಿನಲ್ಲಿ ನಡೆದ, “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ- ಬಿಡುಗಡೆ ಕಾರ್ಯಕ್ರಮದ ಕೆಲವು ಪತ್ರಿಕಾ ವರದಿಗಳು….]
» -
-
-
[ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ- ಕರ್ನಾಟಕ ರಾಜ್ಯ ರೈತ ಸಂಘದಿಂದ, ಲೋಕಸಭಾ ಚುನಾವಣಾ ಸಂಬಂಧಿತವಾಗಿ ಸಿದ್ಧಪಡಿಸಿರುವ ಕರಪತ್ರವನ್ನು ಬಿಡುಗಡೆಗೊಳಿಸಿದ ದೇವನೂರ ಮಹಾದೇವ, ರೈತ ಮುಖಂಡರಾದ ಚಾಮರಸಾ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ ಮುಂತಾದವರು…18.4.2024ರ ಆಂದೋಲನ ಪತ್ರಿಕಾ ವರದಿ]
» -
[13 ಏಪ್ರಿಲ್ 2024ರ ವಾರ್ತಾಭಾರತಿ ಮತ್ತು ಆಂದೋಲನ ಪತ್ರಿಕೆಗಳಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನದ ಅಕ್ಷರ ರೂಪ. -ಸಂದರ್ಶಕರು: ಅಭಿಷ್ ಕೆ ಬೋಸ್ , ಮಲಯಾಳಂ ಪತ್ರಕರ್ತ] ಪ್ರ: ನೀವು ವಿದ್ಯಾರ್ಥಿಯಾಗಿದ್ದಾಗ ಆರ್.ಎಸ್.ಎಸ್ ಕಾರ್ಯಕರ್ತರಾಗಿದ್ದಿರಿ. ಮುಂದೆ 2022ರಲ್ಲಿ ನೀವು ಬರೆದ “ಆರ್.ಎಸ್.ಎಸ್ ಆಳ ಅಗಲ” ಎನ್ನುವ ಪುಸ್ತಕ ದೊಡ್ಡ ಸಂಖ್ಯೆಯ ಓದುಗರನ್ನು ಆಕರ್ಷಿಸಿತು. ಈ ಪುಸ್ತಕ ಬರೆಯುವ ಸಂದರ್ಭದಲ್ಲಿ, ನೀವು ಆರ್.ಎಸ್.ಎಸ್ ಬಗ್ಗೆ ಓದಿ ತಿಳಿದುಕೊಂಡದ್ದರ ಆಚೆಗೆ, ಆರ್.ಎಸ್.ಎಸ್‌ನಲ್ಲಿ…
» -
[ದೇವನೂರ ಮಹಾದೇವರವರು ದಿನಾಂಕ 10.03.2024ರ ರ ಭಾನುವಾರ ಮೈಸೂರಿನಲ್ಲಿ ಜರುಗಿದ ಆದಿವಾಸಿ ಮುಖಂಡರ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದರ ವಿಸ್ತೃತ ವರದಿಯನ್ನು ಪತ್ರಕರ್ತ ಮುತ್ತುರಾಜು ಅವರು ನಮ್ಮ ಬನವಾಸಿಗೆ ಕಳಿಸಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ.]
» -
[ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಹೋರಾಟಗಾರರಾಗಿದ್ದ, ಲೇಖಕ, ವಿಮರ್ಶಕ ದೇವಯ್ಯ ಹರವೆ ಅವರು ಜೂನ್ 18, 1983 ರಂದು ಅಕಾಲ ಮರಣವನ್ನು ಹೊಂದಿದ ಸಂದರ್ಭದಲ್ಲಿ, ದೇವಯ್ಯ ಹರವೆ ಅವರ ಆತ್ಮೀಯ ಒಡನಾಡಿಯಾದ ದೇವನೂರ ಮಹಾದೇವ ಅವರು ಬರೆದ ಸಂತಾಪದ ನುಡಿಗಳು. ‘ಪಂಚಮ’ ಪತ್ರಿಕೆಯ ‘ದಲಿತರು ಮತ್ತು ರೈತ ಚಳವಳಿ’ (ನವೆಂಬರ್, 1983) ವಿಶೇಷಾಂಕವನ್ನು ದೇವಯ್ಯ ಹರವೆ ಅವರಿಗೆ ಅರ್ಪಿಸಲಾಗಿದ್ದು, ‘ಪಂಚಮ’ ಸಂಪುಟ: 07, ಜುಲೈ-05, 1983, ಸಂಚಿಕೆ: 113-114ರಲ್ಲಿ ಈ ಬರಹ ದಾಖಲಾಗಿದೆ. ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[‘ಶಿಕ್ಷಣ ಮಾಧ್ಯಮ ಕನ್ನಡ ಆಗುವವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಾರೆ’ ಎಂದು ಘೋಷಣೆ ಮಾಡಿದ ದೇವನೂರ ಮಹಾದೇವ ಅವರ ಮಾತುಗಳ 29.11.2014ರ ವಿಜಯ ಕರ್ನಾಟಕ ವಿಸ್ತೃತ ವರದಿ ನಮ್ಮ ಮರು ಓದಿಗಾಗಿ]
» -
[ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಪ್ರಯುಕ್ತ ಮೈಸೂರಿನಲ್ಲಿ ಜನವರಿ 30ರಂದು ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ವರದಿ ವಿವಿಧ ಪತ್ರಿಕೆಗಳಲ್ಲಿ…]
»