ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ದೇವನೂರ ಮಹಾದೇವರ ಕೈ ಬರಹದ ಮಾದರಿ ಮತ್ತು ಸಾರ್ವಜನಿಕವಾಗಿ ಅವರು ಎಲ್ಲಿಯೇ ಭಾಷಣ ಮಾಡುವ ಮೊದಲು ಅಂದಾಜಿನ ಮಾತುಗಳನ್ನು ಸಿದ್ಧ ಮಾಡಿಕೊಳ್ಳುವ ಬರವಣಿಗೆಗೆ ಒಂದು ಉದಾಹರಣೆ.ಇದು ಬದನವಾಳುವಿನ ರಾಷ್ಟ್ರೀಯ ಸಮಾವೇಶದಲ್ಲಿ ಆಡಿದ ಮಾತುಗಳ ಟಿಪ್ಪಣಿ.
ಮುಂದೆ ನೋಡಿ -
ಮಿತ್ರರಾದ ಹಾಡುಪಾಡು ರಾಮು ಮತ್ತು ಮಂಜುನಾಥ್ ದತ್ತ ಅವರೊಂದಿಗೆ ಬದನವಾಳುವಿನಲ್ಲಿ ಐಸ್ ಕ್ರೀಂ ಸವಿಯುವುದರಲ್ಲಿ ಮಗ್ನರಾದ ದೇವನೂರು…. ಫೋಟೋ ಕೃಪೆ; ಇರ್ಷಾದ್ ಮೊಹಮದ್, ಪ್ರಜಾವಾಣಿ ಫೋಟೋಗ್ರಾಫರ್, ಮೈಸೂರು
ಚಿತ್ರ ನೋಡಿ -
19.4.2015 ರಂದು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ನಡೆದ ”ಸುಸ್ಥಿರ ಬದುಕಿಗಾಗಿ ಬದನವಾಳು ಸತ್ಯಾಗ್ರಹ” ದ ಸಭೆಯನ್ನು ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ 20.4.2015ರ ಪ್ರಜಾವಾಣಿ ವರದಿ
ಮುಂದೆ ನೋಡಿ -
[2015 ಏಪ್ರಿಲ್ 28ರಂದು ರಾಜ್ಯ ರೈತ ಸಂಘ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರೋಧಿ ಪ್ರತಿಭಟನಾ ಸಭೆ ನಡೆಸಲಿರುವ ಕುರಿತು ಸರ್ವೋದಯ ಪಕ್ಷದ ಮುಖಂಡರು ದೆಹಲಿಯಲ್ಲಿ ವಿವರಿಸಿದರು. ಅವರು ಆಮ್ ಆದ್ಮಿ ಪಕ್ಷದ ಭಿನ್ನ ಬಣದ ”ಸ್ವರಾಜ್ ಸಂವಾದ” ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಆಡಿದ ಮಾತುಗಳ 16.4.2015ರ ಪ್ರಜಾವಾಣಿ ವರದಿ.]
ಮುಂದೆ ಓದಿ -
[14.4.2015ರಂದು ದೆಹಲಿಯ ಆಮ್ ಆದ್ಮಿ ಪಕ್ಷ, ಭಿನ್ನ ಬಣ ನಡೆಸಿದ ”ಸ್ವರಾಜ್ ಸಂವಾದ” ದಲ್ಲಿ ದೇವನೂರ ಮಹಾದೇವ ಅವರು ಭಾಗಿಯಾದ ನಂತರ ಪ್ರಜಾವಾಣಿಗೆ ಆಡಿದ ಮಾತಿನ ಚಿತ್ರಮುದ್ರಿಕೆ ಮತ್ತು ವರದಿ]
ಮುಂದೆ ನೋಡಿ -
-
ಏಪ್ರಿಲ್ 19, 2015 ರಿಂದ ಚಿಂತಕ ಪ್ರಸನ್ನ ಅವರು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕೆ ಸಾಥ್ ನೀಡಿದ ದೇವನೂರ ಮಹಾದೇವ ಅವರ ಮಾತುಗಳು…. 12.4.2015, ಪ್ರಜಾವಾಣಿ ವರದಿ. ಬದನವಾಳುವಿನಲ್ಲಿ ಚಿಂತಕರಾದ ಪ್ರಸನ್ನ ಮತ್ತು ದೇವನೂರ ಮಹಾದೇವ ಅವರು ಮುಂದಿನ ತಲೆಮಾರಿನ ಪುಟಾಣಿ ಅಪೇಕ್ಷಾ ಗಣೇಶ್ ಜೊತೆಗೆ ಸುಸ್ಥಿರ ಅಭಿವೃದ್ಧಿಯ ಕುರಿತು ತಮ್ಮ ಕನಸುಗಳನ್ನು ಚರ್ಚಿಸುತ್ತಿರಬಹುದೇ? [ಛಾಯಾಚಿತ್ರಗಳ ಕೊಡುಗೆ -ಉಮಾ]
ಮುಂದೆ ಓದಿ -
ಭಾಷಾ ಮಾಧ್ಯಮ ವಿವಾದದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ತಾಯ್ನುಡಿಯ ಉಳಿವಿನ ಕುರಿತು ದೇವನೂರ ಮಹಾದೇವ ಅವರು 2014ರಲ್ಲಿ ರಾಷ್ಟ್ರಪತಿಗಳಿಗೆ ಬರೆದ ಪತ್ರ
ಮುಂದೆ ಓದಿ -
ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ಕುರಿತು 20.3.2015ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಹೇಳಿಕೆ.
ಮುಂದೆ ನೋಡಿ -
[2015ರ ಫೆಬ್ರವರಿ 21ರಂದು ಸವದತ್ತಿಗೆ ಭೇಟಿ ನೀಡಿ ಎಲ್ಲಮ್ಮನ ದೇವಸ್ಥಾನ ನೋಡಿ ಹೊರ ಬರುವಾಗ 4-5 ಜೋಗತಿಯರು ಹಡ್ಡಲಿಗಿ ಹಿಡಿದು ದೇವನೂರರನ್ನು ಬೇಡಿಕೊಂಡರು. ಅವರಿಗೆ ಹತ್ತತ್ತು ರೂಪಾಯಿ ಕೊಟ್ಟ ನಂತರ ಕೊನೆಗೆ ಬಂದ ಈ ಹೆಣ್ಣುಮಗಳಿಗೆ 100 ರೂಪಾಯಿ ಹಾಕಿ ‘ಈ ಹಣವನ್ನು ಏನು ಮಾಡುತ್ತಿಯ!’ ಎಂದು ಕೇಳಿದರು.’ನಿಮ್ಮ ಭವಿಷ್ಯ ಹೇಳಿ ನಿಮ್ಮ ಹೆಸರಿನಲ್ಲಿ ಎಲ್ಲಮ್ಮನಿಗೆ ಎಣ್ಣೆ-ದೀಪ ಹಾಕುತ್ತೇನೆ’ ಎಂದಳು. ‘ದೇವಿಗೆ ಎಣ್ಣೆ ಬೇಡ ನಿನ್ನ ಮಕ್ಕಳಿಗೆ ಓದಲಿಕ್ಕೆ ಬೇಕಾಗುವ ಪುಸ್ತಕಗಳನ್ನು ಕೊಡಿಸು’ ಎಂದು ತಿಳಿ ಹೇಳಿದರು. ವಾಪಸು ಬರುವಾಗ ”ಇವರೆಲ್ಲ ನಮ್ಮ ಬಂಧುಗಳು ಎನ್ನಿಸುತ್ತಾರೆ” ಎಂದು ಮಹಾದೇವ ಉದ್ಘರಿಸಿದರು! [ವಿವರಣೆ ಹಾಗೂ ಫೋಟೋ ಕೊಡುಗೆ- ಶಂಕರ ಹಲಗತ್ತಿ ಧಾರವಾಡ]
ಮುಂದೆ ನೋಡಿ