ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • ಶಿವಮೊಗ್ಗದಲ್ಲಿ 8.4.2017ರಂದು ನಡೆದ *ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶ’ದ ಸಂಚಾಲಕರಾದ ರಾಜೇಂದ್ರ ಚೆನ್ನಿಯವರ ಪ್ರಾಸ್ತಾವಿಕ ಮಾತು.


  ಮುಂದೆ ನೋಡಿ
 • ಅಂಗನವಾಡಿ ಕಾರ್ಯಕರ್ತೆಯರ ಸಂಕಟಗಳನ್ನು ಕುರಿತು 7.4.2017ರ ವಿಜಯಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ವರ್ತಮಾನ ಅಂಕಣದಲ್ಲಿ ವಿವರವಾಗಿ ಬರೆದಿದ್ದಾರೆ.


  ಮುಂದೆ ನೋಡಿ
 • ಶಿವಮೊಗ್ಗದಲ್ಲಿ ಏಪ್ರಿಲ್, 8, 2017 ರಂದು ನಡೆಯಲಿರುವ ‘ದಕ್ಷಿಣಾಯನ- ಕರ್ನಾಟಕ’ದ ಸಮಾವೇಶದ ಹಿನ್ನೆಲೆಯಲ್ಲಿ ಕನ್ನಡದ ಲೇಖಕರು ಮತ್ತು ಕಲಾವಿದರ ಸಂದರ್ಭದಲ್ಲಿ ಪ್ರಸ್ತುತವಾಗುವ ಕೆಲವು ಅಂಶಗಳನ್ನು ಪೃಥ್ವಿದತ್ತ ಚಂದ್ರಶೋಭಿಯವರು 7.4.2017ರ ಪ್ರಜಾವಾಣಿಯ ತಮ್ಮ ಅಂಕಣ ‘ನಿಜದನಿ’ಯಲ್ಲಿ ಪ್ರಸ್ತಾಪಿಸಿದ್ದಾರೆ.


  ಮುಂದೆ ನೋಡಿ
 • ನಮ್ಮ ಅಕಾಡೆಮಿಕ್ ಜಗತ್ತು ಹೊಂದಿರುವ ಬೌದ್ಧಿಕ ತಿಳುವಳಿಕೆಗೂ ಜನಸಾಮಾನ್ಯರ ನಡುವಿನ ಜನಪ್ರಿಯ ನಂಬಿಕೆಗೂ ಪರಸ್ಪರ ಭೇಟಿಯಾಗಲೂ ಸಾಧ್ಯವಿಲ್ಲದಂತಹ ಬಹಳ ದೊಡ್ಡ ಅಂತರವಿದೆ. ಈ ಸೋಲನ್ನು ಒಪ್ಪಿಕೊಂಡು ಭಾರತದ ಬುದ್ಧಿಜೀವಿಗಳು ತಮ್ಮ ಸಹಜೀವಿಗಳೊಡನೆ ‘ಹರಟುವ ಭಾಷೆ’ಯೊಂದನ್ನು ಮತ್ತು ಅವಕಾಶವೊಂದನ್ನು ಸೃಜಿಸದೇ ಹೋದರೆ ಬಲುದೊಡ್ಡ ಬೌದ್ಧಿಕ ಸಂಕಟವನ್ನು ನಮ್ಮ ಅಕಾಡೆಮಿಕ್ ವಲಯ ಎದುರಿಸಬೇಕಾಗಬಹುದು…..ಈ ಕುರಿತು ತುಮಕೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹೊರತರುತ್ತಿರುವ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದಗಳ ಸಂಶೋಧನಾ ಪತ್ರಿಕೆ ‘ಲೋಕಜ್ಞಾನ ‘ ಜನವರಿ-ಜೂನ್ 2016 ರ ಸಂಪಾದಕೀಯದಲ್ಲಿ ನಿತ್ಯಾನಂದ ಬಿ ಶೆಟ್ಟಿ ಅವರು ಬರೆದ ಬರಹ.


  ಮುಂದೆ ನೋಡಿ
 • ‘ದಕ್ಷಿಣಾಯನ’ ಎಂದರೆ ಕತ್ತಲಿನ ರಾತ್ರಿ ದೀರ್ಘವಾಗಿರುವ ಕಾಲ; ಕತ್ತಲ ಕೊನೆಗೆ ಬೆಳಕಿರುತ್ತದೆ ಎಂದು ನಂಬಿ ಕೈಕೈ ಹಿಡಿದು ನಡೆವ ಕಾಲ ಕೂಡ….ಇದೇ 8.4.2017ರಂದು ಶಿವಮೊಗ್ಗದಲ್ಲಿ ನಡೆಯಲಿರುವ ‘ದಕ್ಷಿಣಾಯಣ ಕರ್ನಾಟಕದ ಸಮಾವೇಶ’ದ ಉದ್ದೇಶವನ್ನು ಕುರಿತು ವಿಮರ್ಶಕ ರಹಮತ್ ತರೀಕೆರೆಯವರು 5.4.2017ರ ಪ್ರಜಾವಾಣಿಯ ‘ಸಂಗತ’ವಿಭಾಗಕ್ಕೆ ಬರೆದ ಬರಹ.


  ಮುಂದೆ ನೋಡಿ
 • ನಮ್ಮ ಸೈದ್ಧಾಂತಿಕ ಮತ್ತು ಅಕಾಡೆಮಿಕ್ ವಲಯದ ಚಿಂತನೆಗಳು ಮನುಷ್ಯರ ಅದರಲ್ಲೂ ಮಹಿಳೆಯರ ಮೂಲಭೂತ ಸಮಸ್ಯೆಗಳ ಕಡೆಗೆ ಗಮನವನ್ನೇ ಹರಿಸಿಲ್ಲ. ಅಥವಾ ಆ ಬಗ್ಗೆ ಹೆಚ್ಚು ಚಿಂತನೆ ಮಾಡಿಲ್ಲ.. ಇದನ್ನು ನಮ್ಮ ನಾಡಿನಲ್ಲಿ ಇತ್ತೀಚಿಗೆ ನಡೆದ ಮೂರು ಸಶಕ್ತ ಮಹಿಳಾ ಚಳವಳಿಗಳ ಹಿನ್ನೆಲೆಯಲ್ಲಿ 4.4.2017ರ ವಿಜಯಕರ್ನಾಟಕದ ತಮ್ಮ ‘ಅಗೇಡಿ’ ಅಂಕಣದಲ್ಲಿ ಕೆ.ಪಿ.ಸುರೇಶ ಅವರು ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • ನೀರಿನ ಉಳಿತಾಯ, ಸಂರಕ್ಷಣೆ, ನೀರಿನ ಮೂಲಗಳ ಪುನರುತ್ಥಾನದ ಕುರಿತು ಯೋಚಿಸುತ್ತಿರುವ ನಾಡಿಗೆ ಎಲ್ಲ ಆಯಾಮಗಳಲ್ಲೂ ಇದಕ್ಕಾಗಿ ಆದ ಪ್ರಯತ್ನಗಳ ಮಾದರಿಗಳು ಆ ದಿಕ್ಕಿನಲ್ಲಿ ಕೆಲಸ ಮಾಡಲು ಹೊಸ ಹುರುಪನ್ನು ನೀಡುತ್ತವೆ. ಬೆಳಗಾವಿಯ ಪಾಲಿಕೆಯ ಬಾವಿ ಪುನರುತ್ಥಾನದ ಮಾದರಿಯೊಂದಿಗೆ ನೀರು ಉಳಿಸಿದವರ ಕಥೆಗಳನ್ನು 2.3.2017 ರ ಪ್ರಜಾವಾಣಿಯಲ್ಲಿ ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿಯವರು ಮನಮುಟ್ಟುವಂತೆ ಮಾಡಿದ್ದಾರೆ.


  ಮುಂದೆ ನೋಡಿ
 • ತಾಯಿಯಾದವಳ ಸಹಜ ಜೈವಿಕ ಪ್ರಕ್ರಿಯೆಗಳು ನಮ್ಮ ಸಾಮಾಜಿಕ ಮತ್ತು ಕೌಟುಂಬಿಕ ಚೌಕಟ್ಟುಗಳಲ್ಲಿ ವೈಭವೀಕರಣಗೊಂಡು ಹೆಣ್ಣಿನ ಮೇಲೆ ಹೊರೆಯಾಗಿ ಹೇರಲ್ಪಟ್ಟಿದೆ. ಆದರೆ ಬದಲಾದ ಸಂಧರ್ಭದಲ್ಲಿ ಹೆಣ್ಣಿನ ವ್ಯಕ್ತಿತ್ವ ವಿಶಾಲ ನೆಲೆಗಳಿಗೆ ಚಾಚಿಕೊಳ್ಳುತ್ತಿದೆ. ಕುಟುಂಬದ ಪುರುಷನ ಸಹಕಾರ, ಸಮಾಜದ ಅರ್ಥೈಸುವಿಕೆ ಮತ್ತು ಅಂತಃಕರಣದಿಂದ ಮಾತ್ರ ಅವಳು ತನ್ನ ನಿಜವಾದ ಸಾಮರ್ಥ್ಯವನ್ನು ತೋರಲು ಸಾಧ್ಯ. ಅಲ್ಲಿಯವರೆಗೆ ಹೆಣ್ಣು ಅನುಭವಿಸುವ ತಾಕಲಾಟಗಳು, ಒದ್ದಾಟಗಳು ಮಾತಿಗೆ ಮೀರಿದ್ದು. ವಿಮರ್ಶಕಿ ಪಿ. ಭಾರತಿದೇವಿ ಅವರು ಇದನ್ನೆಲ್ಲಾ ಸೂಕ್ಷ್ಮವಾಗಿ 1.3.2017ರ ಪ್ರಜಾವಾಣಿಯ ಭೂಮಿಕಾ ಪುರವಣಿಯಲ್ಲಿ ಬಿಚ್ಚಿಟ್ಟಿದ್ದಾರೆ.


  ಮುಂದೆ ನೋಡಿ
 • ನೀರಿಲ್ಲದೆ ಕಂಗೆಟ್ಟ ಮಹಾರಾಷ್ಟ್ರ ರಾಜ್ಯದ 1,300 ಹಳ್ಳಿಗಳು ಈಗ ಮಳೆ ನೀರಿನ ಹರಿವಿಗೆ ತಡೆ ಒಡ್ಡಲು ಮೈಕೊಡವಿ ನಿಂತಿವೆ! ಏಪ್ರಿಲ್ 8ರಿಂದ ಇಷ್ಟೂ ಹಳ್ಳಿಗಳ ಕಾರ್ಯಪಡೆಗಳು ಹಾರೆ, ಬುಟ್ಟಿಗಳನ್ನೆತ್ತಿ ಶ್ರಮದಾನ ಆರಂಭಿಸಲಿವೆ. ಅದೂ ಏಕಕಾಲದಲ್ಲಿ! ಜನ ಉತ್ಸವೋಪಾದಿಯಲ್ಲಿ ಮನೆಮನೆಗಳಿಂದ ಹೊರಬಂದು ಕೆಲಸ ಮಾಡಲಿದ್ದಾರೆ…ಇದನ್ನು ಆಗು ಮಾಡಿಸಿದ ಪಾನಿ ಫೌಂಡೇಶನ್ ಕುರಿತು ಮನಮುಟ್ಟುವಂತೆ ನೀರಿನ ತಜ್ಞ ಶ್ರೀಪಡ್ರೆ ಅವರು 3.3.2017ರ ಪ್ರಜಾವಾಣಿಯಲ್ಲಿ ‘ನೀರ ನೆಮ್ಮದಿಯ ನಾಳೆ’ ವಿಶೇಷಕ್ಕಾಗಿ ಬರೆದಿದ್ದಾರೆ. ಜೊತೆಗೆ ಅಲ್ಲಿಯ ಕೆಲಸಗಳ ಸಮಗ್ರ ಚಿತ್ರಣ ನೀಡುವ ಒಂದು ಪರಿಣಾಮಕಾರಿ ಸಾಕ್ಷ್ಯಚಿತ್ರ ‘The Battle Against Drought’ ಕೂಡ ಇಲ್ಲಿದೆ.


  ಮುಂದೆ ನೋಡಿ
 • ‘ಅರುಹು ಕುರುಹು’ ತ್ರೈಮಾಸಿಕದ ಮಾರ್ಚ್ -2017ರ ಮಹಿಳಾ ವಿಶೇಷಾಂಕ ‘ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ’ ಸಂಕಲನದಲ್ಲಿ ಅದರ ಸಂಪಾದಕರು, ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆದ ಡಾ.ಎಚ್.ಡಿ.ಪ್ರಶಾಂತ್ ಅವರ ಈ ಲೇಖನವಿದೆ.


  ಮುಂದೆ ನೋಡಿ