ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • ಒಂದೂವರೆ ಕಿಲೊಮೀಟರ್ ಆಳದಲ್ಲಿ ಅತಿಶೀತಲ ಸ್ಥಿತಿಯಲ್ಲಿ ಮಂಜಿನ ಗಡ್ಡೆಯಂತೆ ಕೂತಿದ್ದ ಮೀಥೇನ್ ಸ್ಫಟಿಕವನ್ನು ಅವರು ಮೊದಲ ಬಾರಿಗೆ ಹೊರಕ್ಕೆಳೆದರು. ಗಾಳಿಗೆ ಸ್ಪರ್ಶವಾದದ್ದೇ ತಡ, ಸ್ಫಟಿಕ ಒಡೆಯಿತು. ಕಿಡಿಯ ಸ್ಪರ್ಶವಾಗಿದ್ದೇ ತಡ ಬೆಂಕಿ ಸ್ಫೋಟಿಸಿತು. ಹೊರತೆಗೆದ ಆ ವಸ್ತುವಿಗೆ ‘ಹಿಮದಗ್ನಿ’ ಎಂದರು, ‘ಬರ್ಫದಬೆಂಕಿ’ ಎಂದರು, ‘ಬೆಂಕಿಗಟ್ಟಿ’ ಎಂದರು……..ಸಮುದ್ರದಾಳದ ವೈಚಿತ್ರಗಳು ಮತ್ತು ಅದರಾಳದಲ್ಲಿ ಮನುಷ್ಯನ ಪ್ರಯತ್ನಗಳ ಕುರಿತು ನಾಗೇಶ್ ಹೆಗಡೆಯವರು 29.6. 2017ರ ತಮ್ಮ ಪ್ರಜಾವಾಣಿ ಅಂಕಣ ವಿಜ್ಞಾನ ವಿಶೇಷಕ್ಕೆ ಬರೆದ ಬರಹ ನಮ್ಮ ಓದಿಗಾಗಿ….


  ಮುಂದೆ ನೋಡಿ
 • ಕಸಾಯಿಖಾನೆಗೆ ಹೋದ ದನದ ಅರ್ಧಪಾಲು ಮಾತ್ರ ಆಹಾರಕ್ಕೆ, ಇನ್ನರ್ಧ ಭಾಗ ನಮ್ಮನಿಮ್ಮೆಲ್ಲರ ಬಳಕೆಗೆ -ಅದು ನಿಮಗೆ ಗೊತ್ತಿತ್ತೆ? ಈ ದಿನ (ಅಂದರೆ ಜೂನ್ 1) ‘ಅಂತರರಾಷ್ಟ್ರೀಯ ಹಾಲಿನ ದಿನ’ ಎಂದು ಆಚರಿಸಲಾಗುತ್ತಿದೆ. ಹಾಲಿನ ಜೊತೆ ಜೊತೆಗೆ ನಾವು ಬೇರೆ ಏನೇನು ವಿಧದಲ್ಲಿ ಗೋವುಗಳನ್ನು ಬಳಸುತ್ತಿದ್ದೇವೆ ಗೊತ್ತೆ? ಇಲ್ಲಿದೆ ವಿವರಗಳು… ‘ಪ್ರಜಾವಾಣಿ’ 1 ಜೂನ್ 2017ರ ತಮ್ಮ ವಿಜ್ಞಾನ ವಿಶೇಷ ಅಂಕಣದಲ್ಲಿ ನಾಗೇಶ್ ಹೆಗಡೆಯವರು ಅದ್ಭುತವಾಗಿ, ಎಳೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ. ಓದಿ. ಅದರೊಂದಿಗೆ ನಮ್ಮ ಸಹಪಯಣ …..


  ಮುಂದೆ ನೋಡಿ
 • ರೈತರ ಬೆಳೆ ಪದ್ಧತಿಯಲ್ಲಿ, ಅಂತರ್ಜಲ ಬಳಕೆಯಲ್ಲಿ, ರಾಸಾಯನಿಕ ಬಳಕೆಯಲ್ಲಿ ಕಳೆದ ಹತ್ತನ್ನೆರಡು ವರ್ಷಗಳಲ್ಲಿ ಆದ ಬದಲಾವಣೆಗೆ ಸರ್ಕಾರದ ಕೃಷಿ ಮತ್ತು ಜಲ ನೀತಿಗಳು ಹೇಗೆ ಕೆಲಸ ಮಾಡಿವೆ ಎಂಬುದನ್ನು ಅಂಕಿ ಅಂಶಗಳ ಮೂಲಕ 30.5.2017ರ ವಿಜಯಕರ್ನಾಟಕದ ತಮ್ಮ ಅಂಕಣ ‘ಅಗೇಡಿ’ಯಲ್ಲಿ ಅಂಕಣಕಾರ ಕೆ.ಪಿ.ಸುರೇಶ ಅವರು ಪ್ರತಿಪಾದಿಸಿದ್ದಾರೆ.


  ಮುಂದೆ ನೋಡಿ
 • ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಭೂಮಿಯಾಳದಲ್ಲಿರುವ ನೀರನ್ನು ಹೊರ ತೆಗೆಯಲು ವಿದೇಶಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದಕ್ಕೆ ‘ಪಾತಾಳಗಂಗೆ’ ಯೋಜನೆಯೆಂದು ಹೆಸರಿಟ್ಟಿದೆ. ಆದರೆ ಈ ಯೋಜನೆಯಿಂದ ಒಟ್ಟಾರೆ ಪರಿಸರದ ಮೇಲೆ ಮತ್ತು ಜೀವಜಗತ್ತಿನ ಮೇಲೆ ಆಗುವ ಪರಿಣಾಮಗಳ ಕುರಿತು ಈ ಯೋಜನೆಯನ್ನು ವಿರೋಧಿಸಿ ಅನೇಕ ಪರಿಸರವಾದಿಗಳು, ಜಲತಜ್ಞರು, ಚಿಂತಕರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ 4.5.2017ರ ಪ್ರಜಾವಾಣಿಯ ತಮ್ಮ ‘ವಿಜ್ಞಾನ ವಿಶೇಷ’ ಅಂಕಣದಲ್ಲಿ ನಾಗೇಶ್ ಹೆಗಡೆಯವರು ಈ ಪಾತಾಳ ಗಂಗೆಯಿಂದ ಆಗುವ ಅನಾಹುತಗಳ ಕುರಿತು ಅಧ್ಯಯನಾತ್ಮಕವಾಗಿ ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • ಕಳೆದ ಹದಿನಾಲ್ಕು ವರ್ಷಗಳಿಂದ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಯಕದಲ್ಲಿ ತೊಡಗಿಕೊಂಡು ರಾಜ್ಯಾದ್ಯಂತ ಜನರಿಗೆ ಈ ಕುರಿತು ಜಾಗೃತಿ ಮೂಡಿಸುತ್ತ, ಕೆರೆಯ ಸಂರಕ್ಷಣೆ ಕುರಿತು ತಪಸ್ಸಿನಂತೆ ಕೆಲಸ ಮಾಡುತ್ತಿರುವ ಲೇಖಕ, ಪರಿಸರವಾದಿ ಶ್ರೀ ಶಿವಾನಂದ ಕಳವೆಯವರು ಬೇರೆ ಬೇರೆ ಕಡೆಗಳಲ್ಲಿ ಈ ಕುರಿತು ಬರೆದಿದ್ದ ಲೇಖನದ ಆಯ್ದ ಕ್ರೋಢೀಕೃತ ಬರಹ ನಮ್ಮೆಲ್ಲರ ಜಾಗೃತಿಗಾಗಿ ಇಲ್ಲಿದೆ. ನಮ್ಮೆಲ್ಲರ ಸಹಪಯಣಕ್ಕಾಗಿ….


  ಮುಂದೆ ನೋಡಿ
 • ಪರ್ಯಾಯ ರಾಜಕಾರಣವೆಂಬುದು, ಸ್ಥಳೀಯವಾಗಿ ಜನದನಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಸೈದ್ಧಾಂತಿಕ ಭೂಮಿಕೆ ಈ ಜನ ಸಮುದಾಯದ ಅರಿವಿನ ಮೂಲಕ ಇಳಿಯಬೇಕು ಎಂಬ ತತ್ವವನ್ನು ತಮ್ಮ 18.4.2017 ರ ವಿಜಯಕರ್ನಾಟಕದ ಅಂಕಣ ‘ಅಗೇಡಿ’ ಯಲ್ಲಿ ಚಿಂತಕ ಕೆ. ಪಿ.ಸುರೇಶ ಅವರು ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • ಅಂಬೇಡ್ಕರ್ ಜಯಂತಿ ಪ್ರಯುಕ್ತ 14.4.2017ರಂದು ಮೈಸೂರಿನ ಆಂದೋಲನ ಪತ್ರಿಕೆಗಾಗಿ ಚಿಂತಕ ನಾ. ದಿವಾಕರ ಅವರು ಬರೆದ ಲೇಖನ ನಮ್ಮ ಓದಿಗಾಗಿ.


  ಮುಂದೆ ನೋಡಿ
 • ಗುರುಪ್ರಸಾದ್‌ ಕೆರಗೋಡು ಅವರಿಗೆ, ರಾಜ್ಯ ಸರ್ಕಾರದ 2017ನೇ ಸಾಲಿನ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಸಂದ ಸಂದರ್ಭದಲ್ಲಿ 16.4.2017ರ ಪ್ರಜಾವಾಣಿ ‘ಈ ಭಾನುವಾರ’ ಪುರವಣಿಯಲ್ಲಿ ಹಿರಿಯ ಪತ್ರಕರ್ತ ಚ.ಹ.ರಘುನಾಥ ಅವರು ಕಟ್ಟಿಕೊಟ್ಟ ಗುರುಪ್ರಸಾದ್ ಕೆರೆಗೋಡು ಅವರ ವ್ಯಕ್ತಿಚಿತ್ರ.


  ಮುಂದೆ ನೋಡಿ
 • ಸ್ವಾತಂತ್ರ್ಯ ಚಳವಳಿಯ ಅರ್ಥವನ್ನು ನಿರಂತರ ವಿಸ್ತರಿಸುತ್ತಿರುವ ಒಂದು ಕಾಳಜಿಯ ಬದುಕಿನ ಪಯಣವಾದ ಹೆಚ್.ಎಸ್.ದೊರೆಸ್ವಾಮಿಯವರಿಗೆ ತೊಂಬತ್ತೊಂಬತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ 12.4.2017ರ ಪ್ರಜಾವಾಣಿಯ ತಮ್ಮ ಅಂಕಣ ‘ಕನ್ನಡಿ’ ಯಲ್ಲಿ ವಿಮರ್ಶಕ ನಟರಾಜ್ ಹುಳಿಯಾರ್ ಅವರು ಬರೆದ ಲೇಖನ.


  ಮುಂದೆ ನೋಡಿ
 • 14.4.2017 ರ ಪ್ರಜಾವಾಣಿಯ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ಸಾಮಾಜಿಕ ಕಾರ್ಯಕರ್ತೆ ಚಿಂತಕಿ ದು.ಸರಸ್ವತಿ ಅವರು ಬರೆದ ಲೇಖನ ….


  ಮುಂದೆ ನೋಡಿ