ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು 12.10.2019 ರಂದು ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು. ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮತ್ತು ಶಿಕ್ಷಣಾಧಿಕಾರಿಗಳಿಗೆ ವಿವೇಕಾನಂದರು ದೀನ ದಲಿತರ ಬಗ್ಗೆ ಹೊಂದಿದ್ದ ಭಾವನೆಗಳನ್ನು ವಿವರಿಸಿದರು…. ಆ ಮಾತುಗಳ ವಿಡಿಯೋ ಇಲ್ಲಿದೆ.


    ಮುಂದೆ ನೋಡಿ
  • ಶ್ರೀ ಡಿ.ಎಸ್.ನಾಗಭೂಷಣ ಅವರ “ಗಾಂಧಿ ಕಥನ” 29.9.2019ರಂದು  ಬೆಂಗಳೂರಿನಲ್ಲಿ ದೇವನೂರ ಮಹಾದೇವ ಅವರಿಂದ ಬಿಡುಗಡೆಗೊಂಡ ಸಂದರ್ಭದ ಕೆಲ ಭಾವಚಿತ್ರಗಳು….


    ಮುಂದೆ ನೋಡಿ
  • ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ, 2012 ಮಾರ್ಚ್ 25 ರಂದು ಆಯೋಜಿಸಿದ್ದ ಕಲಾರಸಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗ ತಾವು ತೆಗೆದ ಭಾವಚಿತ್ರಗಳನ್ನು ಅಭಿಷೇಕ್ ವೈ.ಎಸ್ ಅವರು ‘ನಮ್ಮ ಬನವಾಸಿ”ಗೆ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು.

     -ಬನವಾಸಿಗರು


    ಮುಂದೆ ನೋಡಿ
  • ಫೋಟೋ ಹಿನ್ನೆಲೆ:

    ದೇವನೂರ ಮಹಾದೇವ ಅವರು ಪಿಯುಸಿ ಫೇಲ್ ಆಗಿದ್ದಾಗ…ಅಂದಾಜು 1967 ರಲ್ಲಿ, ಊಟಕ್ಕೂ ತೊಂದರೆಯಿದ್ದ ಸಂದರ್ಭದಲ್ಲಿ ಆಲನಹಳ್ಳಿ ಕೃಷ್ಣ ಅವರು ಒತ್ತಾಯಿಸಿ ನಂಜನಗೂಡಿನ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ಸಮಿತಿ ವತಿಯಿಂದ ಮೂರು ತಿಂಗಳ ಕಾಲ ನಡೆದ ‘ಪಠ್ಯ ಪುಸ್ತಕ ರಚನಾ ಕಮ್ಮಟ’ ಕ್ಕೆ ಸೇರಿಸಿದ್ದರು.[ಹೊಟ್ಟೆ ತುಂಬಾ ಒಳ್ಳೆಯ ಊಟ ಸಿಗುವುದೆಂಬ ಆಸೆಗೆ ಮಹಾದೇವ ಅವರು ಅಲ್ಲಿಗೆ ಸೇರಲು ಒಪ್ಪಿದ್ದರು!]  ಆಗಲೇ ಮಹಾದೇವ ಅವರು ‘ನಂಬಿಗೆಯ ನೆಂಟ’ ಎಂಬ ಪಠ್ಯವನ್ನು ರಚಿಸಿದ್ದು. ಅವರೊಂದಿಗೆ ಕಮ್ಮಟದಲ್ಲಿ… ಕ್ಯಾತನಹಳ್ಳಿ ರಾಮಣ್ಣ, ಭಾರತೀಸುತ, ಸವ್ಯಸಾಚಿ, ವೆಂಕಟಸುಬ್ಬಯ್ಯ, ಜಿ.ಜಿ.ಮಂಜುನಾಥನ್ ….ಇನ್ನಿತರ ಖ್ಯಾತ ಸಾಹಿತಿಗಳೂ, ಲೇಖಕರು, ಉಪನ್ಯಾಸಕರೂ ಭಾಗವಹಿಸಿದ್ದರು.


    ಮುಂದೆ ನೋಡಿ
  • ಸಮಕಾಲೀನ ಖ್ಯಾತ ಚಿಂತಕ ಗೋಪಾಲ್ ಗುರು ಅವರೊಂದಿಗೆ ದೇವನೂರ ಮಹಾದೇವ,…. ಹಳೆಯ ಸಂಗ್ರಹದಿಂದ … 


    ಮುಂದೆ ನೋಡಿ
  • 2013 ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ಮಾಡಿದ ವಿಶೇಷ ಸಂವಾದ ಕಾರ್ಯಕ್ರಮ “ಅಪೂರ್ವ ಸಂಗಮ” ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು…


    ಮುಂದೆ ನೋಡಿ
  • ತುಮಕೂರು ಜಿಲ್ಲೆ ಶಿರಾದ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ನಡೆದ 65ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ದೇವನೂರ ಮಹಾದೇವ, ಪ್ರೊ.ರವಿವರ್ಮ ಕುಮಾರ್, ಕಡಿದಾಳು ಶಾಮಣ್ಣ ಇನ್ನಿತರರಿದ್ದಾರೆ. [ಫೋಟೋ ಕೃಪೆ-ಪ್ರೊ.ರವಿವರ್ಮ ಕುಮಾರ್]


    ಮುಂದೆ ನೋಡಿ
  • ಪ್ರಸ್ತುತ ರಾಜಕೀಯ ಸನ್ನಿವೇಶ ಕುರಿತು-ನ್ಯೂಸ್ 18 ನಲ್ಲಿ ದೇವನೂರ ಮಹಾದೇವ ಅವರ ಮಾತುಗಳು 20.7.2019ರಂದು……


    ಮುಂದೆ ನೋಡಿ
  • 15.2.2019 ರಂದು  ಮೈಸೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ ವತಿಯಿಂದ “ನಿರುದ್ಯೋಗದ ವಿರುದ್ಧ ರಾಜ್ಯಮಟ್ಟದ ಯುವಜನ ಸಮಾವೇಶ”ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳು….


    ಮುಂದೆ ನೋಡಿ
  • ನೆದರ್ಲ್ಯಾಂಡ್ ನ ಯುವ ವಿಜ್ಞಾನಿ, ಅಧ್ಯಾಪಕಿ ಹಾಗೂ ಸಂಶೋಧನಾರ್ಥಿ, ಸಾಹಿತ್ಯಾಸಕ್ತೆ ಎವಿಲಿನ್ ಡಿ ಹೂಪ್ ಅವರು ಭಾರತಕ್ಕೆ ಆಗಮಿಸಿದ್ದಾಗ, 6.4.2019ರಂದು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ದೇವನೂರ ಮಹಾದೇವ ಅವರು, ಸಂಭಾಷಣೆಯಲ್ಲಿ ತೊಡಗಿದ ಕೆಲ ಚಿತ್ರಗಳು…. ಇವರು ದೇವನೂರರ ಕುಸುಮಬಾಲೆ ಕಾದಂಬರಿ ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಅನುವಾದವಾದ ನಂತರ, ಯೂರೋಪಿಯನ್ ದೃಷ್ಟಿಕೋನದಿಂದ ಇಂಗ್ಲೀಷ್ ಅನುವಾದದಲ್ಲಿ ಆಗಬೇಕಿದ್ದ ಕೆಲ ಮಾರ್ಪಾಡುಗಳನ್ನು ಸೂಚಿಸಿದ್ದರು. [ಈ ಫೋಟೋಗಳನ್ನು ಕೊಡುಗೆಯಾಗಿ ನೀಡಿದ ಪತ್ರಕರ್ತ ಕೆ.ಎನ್. ನಾಗೇಶ್ ಅವರಿಗೆ ಧನ್ಯವಾದಗಳು]


    ಮುಂದೆ ನೋಡಿ