ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಯೂಟ್ಯೂಬ್ ಗೆ ಹಾಕುವ ಕೆಲಸವನ್ನು ಡಾ.ಅರುಣ್ ಜೋಳದಕೂಡ್ಲಗಿಯವರು ಮಾಡುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಿಸುವ ಪ್ರಯತ್ನ ಅವರದು. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಕೂಡ ಇವರಿಗಿದೆ. ಈ ಅಂಬೇಡ್ಕರ್ ಓದು ಸರಣಿಯ 100ನೆಯ ಕಂತನ್ನು ದೇವನೂರ ಮಹಾದೇವ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ 6.12.2020ರಂದು ಪ್ರಸ್ತುತಪಡಿಸಿದ್ದು ಅದನ್ನು ಯೂಟ್ಯೂಬ್ ಗೆ ಹಾಕಲಾಗಿದೆ. ಅವರ ಮಾತುಗಳ ಕೊಂಡಿ ಮತ್ತು ಬರಹ ಹಾಗೂ ಈ ಸರಣಿಯ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯ ತುಣುಕು ನಮಗಾಗಿ ಇಲ್ಲಿದೆ.


    ಮುಂದೆ ನೋಡಿ
  • ಶಿವಮೊಗ್ಗದ ‘TV BHARATH SHIVAMOGGA’ ಚಾನೆಲ್ ವತಿಯಿಂದ 2020 ನವೆಂಬರ್ ತಿಂಗಳು ಪೂರ್ತಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆ ‘ಸಿರಿಗಂಧ’ದಲ್ಲಿ ದೇವನೂರ ಮಹಾದೇವ ಅವರ ಬದುಕು-ಬರಹ ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರೊಂದಿಗೆ ಚಾನೆಲ್ ನಡೆಸಿದ ಚರ್ಚೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ….


    ಮುಂದೆ ನೋಡಿ
  • ಮೈಸೂರಿನಲ್ಲಿ 5.10.2020ರಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ, ‘ದಲಿತ ಯುವತಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಖಂಡಿಸಿ ನಡೆದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ದೇವನೂರ ಮಹಾದೇವ ಅವರು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದ ಫೋಟೋಗಳು ಮತ್ತು ಯೂಟ್ಯೂಬ್ ವಿಡಿಯೋ ಕೊಂಡಿ…


    ಮುಂದೆ ನೋಡಿ
  • ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ, ಜನಾಂದೋಲನಗಳ ಮಹಾಮೈತ್ರಿ, ಜನಚೇತನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ 5.9.2020ರಂದು ಮೈಸೂರಿನಲ್ಲಿ ನಡೆದ “ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟಕ್ಕಲ್ಲ” – ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ದೇವನೂರ ಮಹಾದೇವ ಅವರು.
    (ಫೋಟೋ ಕೃಪೆ- ಎನ್.ಪುನೀತ್ ಮತ್ತು ವಿ.ಎಲ್.ನರಸಿಂಹಮೂರ್ತಿ, ವಿಡಿಯೋ ಕೃಪೆ-ನೇತ್ರರಾಜು ಮೈಸೂರು)


    ಮುಂದೆ ನೋಡಿ
  • ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡಲು ಒತ್ತಾಯಿಸಿ 20.8.2020 ಬೆಳಗ್ಗೆ ಮೈಸೂರಿನ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಮೌನ ಪ್ರತಿಭಟನೆಯನ್ನು ಬೆಂಬಲಿಸಿ, ಪ್ರತಿಭಟನಾಕಾರರೊಂದಿಗೆ ದೇವನೂರ ಮಹಾದೇವ ಅವರು….
    (ಫೋಟೋ ಕೃಪೆ- ಪುನೀತ್.ಎನ್, ಮೈಸೂರು)


    ಮುಂದೆ ನೋಡಿ
  • 27 ಸೆಪ್ಟೆಂಬರ್ 2013ರಂದು ಬೆಂಗಳೂರಿನಲ್ಲಿ ನಡೆದ ವಾರ್ತಾಭಾರತಿ ಪತ್ರಿಕೆಯ 11ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ ನಮಗಾಗಿ….[ಕೊಡುಗೆ-ವಾರ್ತಾಭಾರತಿ, ವಿಡಿಯೋ ಸಂಪಾದನೆ-ಚಕ್ರಿ ಸಾರಂಗ್]


    ಮುಂದೆ ನೋಡಿ
  • ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ ಪಡೆದ ನಂತರ 1.3.2013ರಂದು ದೇವನೂರ ಮಹಾದೇವ ಅವರು ನಡೆಸಿಕೊಟ್ಟ ಸಂವಾದದ ಕೊಂಡಿ… [ಕೊಡುಗೆ- ಹಂಪಿ ವಿ.ವಿ, ವಿಡಿಯೋ ಸಂಪಾದನೆ-ಹೆಚ್.ಎನ್. ನಿಶಾಂತ್ ಮತ್ತು ಚಕ್ರಿ ಸಾರಂಗ್]


    ಮುಂದೆ ನೋಡಿ
  • [ಕಲಾವಿದ ಟಿ.ಎಫ್. ಹಾದಿಮನಿಯವರ ಕೈಯಿಂದ ರಚಿತವಾದ ಮಹಾದೇವರ ರೇಖಾಚಿತ್ರ. ನಮ್ಮ ಬನವಾಸಿಗೆ ಕೊಡುಗೆಯಾಗಿ ನೀಡಿದ್ದಕ್ಕೆ ಹಾರ್ದಿಕ ವಂದನೆಗಳು]


    ಮುಂದೆ ನೋಡಿ
  • ಮೈಸೂರಿನ ಮಿತ್ರರ ಬಳಗ “readout” ಎಂಬ ಕಥಾ ಸರಣಿಯ ಮೂಲಕ ವಿವಿಧ ಕಥೆಗಾರರ ಕಥೆಗಳನ್ನು ಆಸಕ್ತರಿಂದ ಓದಿಸಿ YouTube ಗೆ ಸೇರಿಸುತ್ತಿದ್ದು, ಆ ಸರಣಿಯಲ್ಲಿ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ ಕಾದಂಬರಿಯ ಒಂದು ಪ್ರಸಂಗವನ್ನು ಸ್ವತಃ ತಾವೇ ಇಲ್ಲಿ ವಾಚಿಸಿದ್ದಾರೆ. ನಮ್ಮ ಕೇಳುವಿಕೆಗಾಗಿ ಕೊಂಡಿ ಇಲ್ಲಿದೆ…


    ಮುಂದೆ ನೋಡಿ
  • [ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ,  22 ಜುಲೈ 2017ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಖ್ಯಾತ ವಿಚಾರವಾದಿಗಳಾದ ಡಾ.ಆನಂದ್ ತೇಲ್ತುಂಬ್ಡೆ, ಅನನ್ಯ ವಾಜಪೇಯಿ, ಶ್ರೀಪಾದ್ ಭಟ್ ಹಾಗೂ ವಿ.ಎಲ್.ನರಸಿಂಹಮೂರ್ತಿ ಅವರೊಂದಿಗೆ ದೇವನೂರ ಮಹಾದೇವ ಅವರಿರುವ ಕೆಲ ಚಿತ್ರಗಳು. ಚಿತ್ರ ಕೃಪೆ-ವಿ.ಎಲ್.ನರಸಿಂಹಮೂರ್ತಿ]


    ಮುಂದೆ ನೋಡಿ