ದೇವನೂರ ಮಹಾದೇವ ಅವರ ಅಪರೂಪದ ಫೋಟೋ…

ಫೋಟೋ ಹಿನ್ನೆಲೆ:

ದೇವನೂರ ಮಹಾದೇವ ಅವರು ಪಿಯುಸಿ ಫೇಲ್ ಆಗಿದ್ದಾಗ…ಅಂದಾಜು 1967 ರಲ್ಲಿ, ಊಟಕ್ಕೂ ತೊಂದರೆಯಿದ್ದ ಸಂದರ್ಭದಲ್ಲಿ ಆಲನಹಳ್ಳಿ ಕೃಷ್ಣ ಅವರು ಒತ್ತಾಯಿಸಿ ನಂಜನಗೂಡಿನ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ಸಮಿತಿ ವತಿಯಿಂದ ಮೂರು ತಿಂಗಳ ಕಾಲ ನಡೆದ ‘ಪಠ್ಯ ಪುಸ್ತಕ ರಚನಾ ಕಮ್ಮಟ’ ಕ್ಕೆ ಸೇರಿಸಿದ್ದರು.[ಹೊಟ್ಟೆ ತುಂಬಾ ಒಳ್ಳೆಯ ಊಟ ಸಿಗುವುದೆಂಬ ಆಸೆಗೆ ಮಹಾದೇವ ಅವರು ಅಲ್ಲಿಗೆ ಸೇರಲು ಒಪ್ಪಿದ್ದರು!]  ಆಗಲೇ ಮಹಾದೇವ ಅವರು ‘ನಂಬಿಗೆಯ ನೆಂಟ’ ಎಂಬ ಪಠ್ಯವನ್ನು ರಚಿಸಿದ್ದು. ಅವರೊಂದಿಗೆ ಕಮ್ಮಟದಲ್ಲಿ ಕ್ಯಾತನಹಳ್ಳಿ ರಾಮಣ್ಣ, ಭಾರತೀಸುತ, ಸವ್ಯಸಾಚಿ, ವೆಂಕಟಸುಬ್ಬಯ್ಯ, ಜಿ.ಜಿ.ಮಂಜುನಾಥನ್ ….ಇನ್ನಿತರ ಖ್ಯಾತ ಸಾಹಿತಿಗಳೂ, ಲೇಖಕರು, ಉಪನ್ಯಾಸಕರೂ ಭಾಗವಹಿಸಿದ್ದರು. .