ಬಾಬಾ ಆಲಿಂಗನದ ಹಿನ್ನೆಲೆ-ಚಂದ್ರಶೇಖರ ಅತ್ತಿಬೆಲೆ

[ದೇಮ ಅವರು ಕೋಲಾರದ ಆದಿಮಕ್ಕೆ ಹೋದಾಗ ಕೋಟಗಾನಹಳ್ಳಿ ರಾಮಯ್ಯನವರು, ತಮ್ಮ ಗುರುವೆಂದು ತೋರಿದ ಈ ಬಾಬಾರನ್ನು ಅಪ್ಪಿಕೊಂಡ ಸಂದರ್ಭವನ್ನು ಸಂಕ್ಷಿಪ್ತವಾಗಿ  ವಿವರಿಸಿರುವುದು, ಫೋಟೋವನ್ನೂ ಕೂಡ ತೆಗೆದಿರುವ ಚಂದ್ರಶೇಖರ ಅತ್ತಿಬೆಲೆ ಅವರು. ಈ ಪೋಸ್ಟ್ ಅವರ ಮುಖಪುಸ್ತಕ ಕೃಪೆಯಾಗಿದೆ.]

https://www.facebook.com/chandrashekar.attibele/posts
/pfbid04sH2dz3peJScQiSewPyE54JNiVWUPLvfzxZekTKNEby
J4pgCvVJUKRsz6gYSFJBel?__cft__[0]
=AZXApy8Kxqm34yAwYmLpXXo7hFw1Ar8oTEE7gSvkHyp3ctF7
EFbSbmMyFgSCAqpUZy3g6c6QTsYmq
UHlYINgzdytUxPxR2tcFlR0k8OsmnyIdia0vLHZ3667dFBlwGiRKd7j
V5p97rN2gPLNH8zzvA7dE3XsBiLug4x2t0xqlIp8l
TNd8dHAt3MGTbPW73thtA
GpWQ9k2rn4GZ2TS4Qcv_Ea&__tn__=-UK-R

ಆದಿಮ ಲಿವಿಂಗ್ ಟೈಮ್ಸ್ ನ ಎರಡನೇ ಸಂಚಿಕೆಯ ಕೆಲಸ ಮಾಡುತ್ತಿದ್ದ ಸಂದರ್ಭ.‌ ದೇವನೂರರವರು , ಪಿಚ್ಚಳ್ಳಿ ಶ್ರೀನಿವಾಸರವರನ್ನು ಒಳಗೊಂಡಂತೆ ಹತ್ತಾರು ಜನ ಆದಿಮ ಸಾಂಸ್ಕೃತಿಕ ಕೇಂದ್ರ ಕ್ಕೆ ಬಂದಿದ್ರು, ಅವರು ಬಂದ ವಿಷಯ ನಮಗೆ ತಿಳಿದಿರಲಿಲ್ಲ. ಪತ್ರಿಕೆ ಕೆಲಸದಲ್ಲಿ ಮಗ್ನರಾಗಿದ್ದೆವು. ರಾಮಯ್ಯರವರೊಂದಿಗೆ ಕೆಲಸ ಮಾಡೋದು ಅಷ್ಟು ಸುಲಭ ಏನು ಅಲ್ಲ. ಕ್ಷಣ ಕ್ಷಣಕ್ಕೆ ಅವರ ನಿರ್ಧಾರ ಬದಲಾಗುತ್ತಿರುತ್ತದೆ. ಅಷ್ಟೇ ವೇಗವಾಗಿ ನಾವು ಇರಬೇಕು. ಈ ರೀತಿ ಸುಸ್ತಾಗಿ ಹೊರಬಂದಾಗ ಆಗ ಇದ್ದ ನಾಟಕದ ಕುಟೀರದಿಂದ ಎಲ್ಲರೂ ಹೊರಬಂದರು. ನಾವು ಮತ್ತೆ ಓಡಿಹೋಗಿ ನಾನು ಸ್ಟಿಲ್ ಶಾಂತಕುಮಾರ್ ವಿಡಿಯೋ ಕ್ಯಾಮೆರಾ ಹಿಡಿದು ನಿಂತೆವು.

ದೇಮರಿಗೆ ಪದ್ಮಶ್ರೀ ಪ್ರಶಸ್ತಿ ಬಂದು ಮೂರು ಅಥವಾ ನಾಲ್ಕು ದಿನ ಆಗಿತ್ತು. ಆದಿಮ ಪೂರ್ತಿ ಸುತ್ತಾಡಿದರು. ರಾಮಯ್ಯರವರು ದೇವನೂರುರವರು ಬಂಡೆಗಳ ಕೆಳಗೆ ಕೂತು ಸುದೀರ್ಘ ಒಂದು ಗಂಟೆಗಳ ಕಾಲ ಮಾತನಾಡಿದರು. ಅವರ ಮಾತುಗಳನ್ನು ಕೇಳುತ್ತಾ ಶಾಲೆಯಲ್ಲಿ ಮಕ್ಕಳು ಕುಳಿತಂತೆ ಕೂತಿದ್ದೆವು. ನಂತರ ದೇಮರನ್ನು, ದರ್ಗಾ ಮುಂಭಾಗದಲ್ಲಿರುವ ಮನೆಗೆ ಹೋಗಬೇಕು ನೀನು ಅಲ್ಲಿಗೆ ಬರಲೇಬೇಕು ಎಂದರು ರಾಮಯ್ಯರವರು. ಕಾರು ಹತ್ತಲು ಸಿದ್ಧರಾದರು. ನಾವು ಓಡಿ ಹೋಗಿ ದರ್ಗಾದ ಮುಂದೆ ನಿಂತಿದ್ದೆವು. ಅಲ್ಲಿ ಕಾರು ಇಳಿದು ಬರುತ್ತಿದ್ದಂತೆ ರಾಮಯ್ಯರವರು ದರ್ಗಾದಲ್ಲಿರುವ ಬಾಬಾರನ್ನು ತೋರಿಸಿ ಇವ್ರು ನಮ್ಮ ಅಜ್ಜ ಅಂದರು. ಅವರು ದೇವನೂರುರವರ ಕೈನ್ನು ತಮ್ಮ ಎರಡು ಕೈಗಳಲ್ಲಿ ಹಿಡಿದು ಕಣ್ಮುಚ್ಚಿ ಬಳಿಕ ಕೈ ಎತ್ತಿ ಮುಗಿದರು. ಬಳಿಕ ಇನ್ನೊಂದಿಷ್ಟು ಜನ ಬಾಬಾರವರಿಗೆ ಕೈ ಕೊಟ್ಟರು. ಹೊರಡಬೇಕಾದರೆ ಬಾಬಾರವರು ಎದ್ದು ಬಂದು ದೇವನೂರುರವರನ್ನು ತಬ್ಬಿಕೊಂಡರು. ದೇವನೂರುರವರು ಕಣ್ಣು ಮುಚ್ಚಿ ಆಲಂಗಿಸಿಕೊಂಡರು.

ಈ ವೇಳೆ ತೆಗೆದ ಫೋಟೋ ಇದು.

ರಾಮಯ್ಯರವರು ಆದಿಮದಿಂದ ಹೊರಬಂದ ಬಳಿಕ ಈ ಬಾಬಾ ಬಳಿಯೇ ಸಮಯ ಕಳೆದರು. ತಮ್ಮ ಗುರುವೆಂದು ಘೋಷಿಸಿಕೊಂಡರು. ಈ ಬಾಬಾರವರೆ ರಾಮಯ್ಯರವರ ಅಜ್ಜ.