ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ

ಕುಸುಮಬಾಲೆ ಮೊತ್ತ ಮೊದಲನೆಯದಾಗಿ 1985ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು .  ಅದು ಪುಸ್ತಕರೂಪದಲ್ಲಿ ಹೊರಬಂದದ್ದು 1988 ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ  ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .