ಆರ್ ಎಸ್ ಎಸ್, ಹಿಂದುತ್ವ ಜಾತಿ ವ್ಯವಸ್ಥೆ ಹೇರುವ ಮುಖವಾಡಗಳು: ದೇವನೂರು ಮಹಾದೇವ

[ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ  ‘ಆರ್‌ಎಸ್‌ಎಸ್  ಆಳ ಮತ್ತು ಅಗಲ’ ಕೃತಿ ಟೀಕೆ, ಚರ್ಚೆಗೆ ಗ್ರಾಸವಾಗಿರುವಂತೆಯೇ, ಸುಮಾರು ಹದಿನೈದು ದಿನಗಳಲ್ಲಿ 86,000 ಪ್ರತಿಗಳು ಮಾರಾಟವಾಗಿದೆ. ಇದು ದಾಖಲೆಯಾಗಿದೆ ಮತ್ತು ಹೆಚ್ಚಿನ ಪ್ರತಿಗಳಿಗೆ ಬೇಡಿಕೆಯೂ ಹೆಚ್ಚಿದೆ.  ಈ ಸಂದರ್ಭದಲ್ಲಿ The New Indian Express ಪತ್ರಿಕೆಯಲ್ಲಿ ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಸಂದರ್ಶನದ ಕನ್ನಡ ಅನುವಾದವನ್ನು ನಾಗರಾಜ ಎ.ಬಿ ಅವರು ಮಾಡಿದ್ದು, 17.7.2022ರಂದು ಕನ್ನಡಪ್ರಭ ಪತ್ರಿಕೆಯು ಪ್ರಕಟಿಸಿದೆ]

Devanur_Mahadeva1

ಬೆಂಗಳೂರು: ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ  ‘ಆರ್‌ಎಸ್‌ಎಸ್  ಆಳ ಮತ್ತು ಅಗಲ’ ಕೃತಿ ಟೀಕೆ, ಚರ್ಚೆಗೆ ಗ್ರಾಸವಾಗಿರುವಂತೆಯೇ, ಸುಮಾರು ಹದಿನೈದು ದಿನಗಳಲ್ಲಿ 86,000 ಪ್ರತಿಗಳು ಮಾರಾಟವಾಗಿದೆ. ಇದು ದಾಖಲೆಯಾಗಿದೆ ಮತ್ತು ಹೆಚ್ಚಿನ ಪ್ರತಿಗಳಿಗೆ ಬೇಡಿಕೆಯೂ ಹೆಚ್ಚಿದೆ.

ಈ ಪುಸ್ತಕ ಆರ್‌ಎಸ್‌ಎಸ್‌ನ ಆಳ ಮತ್ತು ವ್ಯಾಪ್ತಿಯನ್ನು ಅರ್ಥೈಸುತ್ತದೆ. ಆರ್ ಎಸ್ ಎಸ್ ನ ಸ್ವರೂಪ ಮತ್ತು ಉದ್ದೇಶಗಳನ್ನು ತಿಳಿಸುತ್ತದೆ ಮತ್ತು ನೈಜವಾದ ಆರ್ ಎಸ್ ಎಸ್ ನ್ನು ಮುನ್ನೆಲೆಗೆ ತರುತ್ತದೆ. ಅಸ್ಪೃಶ್ಯತೆ ಆಚರಣೆ, ಹುಟ್ಟಿನ ಆಧಾರದ ಮೇಲೆ ಸಮುದಾಯಗಳನ್ನು ವರ್ಗೀಕರಿಸುವ ವರ್ಣಾಶ್ರಮ, ಮನುಸ್ಮೃತಿ, ಬ್ರಾಹ್ಮಣ್ಯ ಪ್ರಾಬಲ್ಯ ಮತ್ತು ಸಂವಿಧಾನದ ಬದಲಾವಣೆಗಳಂತಹ ವಿಷಯಗಳ ಕುರಿತು ಇದು ಪರಿಶೀಲಿಸುತ್ತದೆ. ಈ ಕುರಿತು ದೇವನೂರು ಮಹಾದೇವ ಮಾತನಾಡಿದ್ದಾರೆ.

ಪುಸ್ತಕದಲ್ಲಿ ನೀವು ಹೇಳಿರುವುದರಲ್ಲಿ ಹೊಸದೇನೂ ಇಲ್ಲ ಎಂದು ಕೆಲವರು ಹೇಳುತ್ತಾರೆ, ಏಕೆಂದರೆ ಈ ಎಲ್ಲಾ ವಿಷಯಗಳನ್ನು ಒಂದಲ್ಲ ಒಂದು ಹಂತದಲ್ಲಿ ಪ್ರಸ್ತಾಪಿಸಲಾಗಿದೆ.  ನೀವು ಏನು ಹೇಳಲು ಬಯಸುತ್ತೀರಿ. 

ಹೌದು, ನೀವು ಹೇಳುತ್ತಿರುವುದು ವಾಸ್ತವಿಕವಾಗಿ ಸರಿಯಾಗಿದೆ. ಆದರೆ ನೆನಪಿಡಿ, ಆರ್‌ಎಸ್‌ಎಸ್  ಆಳ ಮತ್ತು ಅಗಲ ಸುಮಾರು ಹದಿನೈದು ದಿನಗಳ ಹಿಂದೆ ಪ್ರಕಟವಾಯಿತು ಮತ್ತು ಈಗಾಗಲೇ ಸುಮಾರು 86,000 ಪ್ರತಿಗಳು ಮಾರಾಟವಾಗಿವೆ ಮತ್ತು ಹೆಚ್ಚಿನ ಬೇಡಿಕೆಯಿದ್ದರೆ, ಅದು ಏಕೆ?

ದ್ವೇಷ ಹರಡುವಿಕೆ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವವರು ತಳ ಸಮುದಾಯದಿಂದ ಬಂದವರು ಎಂದು ಹೇಳಿದ್ದೀರಿ. ನೀವು ಅವರನ್ನು ‘ದಾರಿ ತಪ್ಪಿದ ಮಕ್ಕಳು’ (ದಾರಿ ತಪ್ಪಿದವರು) ಎಂದು ಕರೆದಿದ್ದೀರಿ ಮತ್ತು ಈ ಅಭಿಯಾನದ ಹಿಂದಿನ ನಿಜವಾದ ಬ್ರೈನ್ ಮೇಲ್ವರ್ಗದವರು ಎಂದು ಹೇಳಿದ್ದೀರಿ..ಇದರ ಬಗ್ಗೆ ಸ್ವಲ್ಪ ವಿವರಿಸುವಿರಾ?

ಈ ಎರಡೂ ಪ್ರಶ್ನೆಗಳಿಗೆ ಒಟ್ಟಿಗೆ ಉತ್ತರಿಸುತ್ತೇನೆ. ಹಿಂದೂ ಧರ್ಮದ ವರ್ಸನ್ ಆರ್ ಎಸ್ ಎಸ್ ಮತ್ತು ಹಿಂದುತ್ವ ಜಾತಿ ವ್ಯವಸ್ಥೆ ಹೇರಲು ಕೇವಲ ಮುಖವಾಡಗಳಾಗಿವೆ, ಅಲ್ಲಿ ತಳಸಮುದಾಯಗಳು, ಮೇಲ್ವರ್ಗದ ಸೇವಕರಾಗಿ ಸೇವೆ ಸಲ್ಲಿಸುತ್ತಾರೆ.  ನಾಲ್ಕು ವರ್ಗಗಳ ಜಾತಿ ವ್ಯವಸ್ಥೆಯಲ್ಲಿ ತಳ ವರ್ಗ ಮತ್ತು ಹಿಂದುಳಿದ ಸಮುದಾಯಗಳು ಕೇವಲ ಇತರರಿಗೆ ಸೇವೆ ಸಲ್ಲಿಸುವ ಸೇವಕರಾಗಿ ಉಳಿಯಬೇಕೇ? ಇಲ್ಲಿ ಹೆಚ್ಚು ವಿವರಿಸಬೇಕಾದದ್ದು ನನಗೆ ಅರ್ಥವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಈ ಪುಸ್ತಕದಲ್ಲಿ ಸಾಕಷ್ಟು ವಿವರಿಸಲಾಗಿದೆ.

ಆರೆಸ್ಸೆಸ್‌ನ ಮೂರು ಸೈದ್ಧಾಂತಿಕ ಆಧಾರ ಸ್ತಂಭಗಳು ಬಗ್ಗೆ ಮಾತನಾಡಿದ್ದೀರಿ – ವರ್ಣಾಶ್ರಮದ ಹೇರಿಕೆ, ಆರ್ಯ ಪ್ರಾಬಲ್ಯ ಮತ್ತು ಸಂವಿಧಾನದ ವಿನಾಶ.

ವರ್ಣಾಶ್ರಮ ಧರ್ಮ, ಮನು ಸ್ಮೃತಿ ಮತ್ತು ಆರ್ಯರ ಪ್ರಾಬಲ್ಯ, ಇವು ಎಂತಹ ವಿಲಕ್ಷಣ ಸಿದ್ಧಾಂತಗಳು? ಭಾರತೀಯ ಸಂವಿಧಾನವನ್ನು ಬದಲಾಯಿಸುವುದು ಆರ್ ಎಸ್ ಎಸ್ ನ ಅಂತಿಮ ಗುರಿಯಾಗಿದೆ. ಈ ವಿಷಯಗಳನ್ನು ಪುಸ್ತಕದಲ್ಲಿ ಚರ್ಚಿಸಲಾಗಿದೆ.

ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪುಸ್ತಕವನ್ನು ನಿರ್ಬಂಧಿಸಲು ನಿರ್ಧರಿಸಿದ್ದಾರೆ ಎಂಬುದು ನಿಜವೇ?
ಇಂತಹ ಮಹತ್ವದ ಕಾಲದಲ್ಲಿ ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾಗಳಿಗೆ ಮುಖ ಬೇಕು ಎನ್ನುವ ಕಾಲ ಬಂದಿದೆ.

* ಆರ್‌ಎಸ್‌ಎಸ್ ಕುರಿತು ಪುಸ್ತಕ ಬರೆದ ಉದ್ದೇಶವೇನು? ನೀವು ಅದನ್ನು ಸಾಧಿಸಿದ್ದೀರಿ ಎಂದು ಭಾವಿಸುತ್ತೀರಾ? 

ಪುಸ್ತಕ ಯಶಸ್ವಿಯಾಗಿದೆಯೋ ಇಲ್ಲವೋ. ಪುಸ್ತಕವನ್ನು ಓದಿದ ನಂತರ, ಪುಸ್ತಕ ಯಶಸ್ವಿಯಾಗಿದೆ ಎಂದು ನೀವು ಹೇಳಬೇಕಲ್ಲವೇ?

* ನೀವು ಕೋಮುವಾದಿ ಅಜೆಂಡಾಕ್ಕೆ ಸವಾಲು ಹಾಕಲು ಎಸ್‌ಆರ್ ಹಿರೇಮಠ್ ಮತ್ತು ಇತರರೊಂದಿಗೆ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದೀರಿ. ಪಕ್ಷಕ್ಕೆ ಏನಾಗಿದೆ?

ಸರ್ವೋದಯ ಕರ್ನಾಟಕ ನಾವು ಪ್ರಾರಂಭಿಸಿದ ಪಕ್ಷವಾಗಿದ್ದು, ಇದು ಮುಖ್ಯವಾಗಿ ರೈತ ಸಂಘದ ರೈತರು ಮತ್ತು ದಲಿತ ಸಂಘರ್ಷ ಸಮಿತಿಯಿಂದ ಶೋಷಿತ ಜನರ ಪಕ್ಷವಾಗಿತ್ತು. ಅದನ್ನು ಬಲಪಡಿಸಲು ಇತರ ಪ್ರಗತಿಪರ ಶಕ್ತಿಗಳೂ ಸೇರಿಕೊಂಡರು. ಕೆ.ಎಸ್.ಪುಟ್ಟಣ್ಣಯ್ಯ ಈ ಪಕ್ಷದ ನಾಯಕರಾದರು. ನಾನು ಕೇವಲ ನಾಮಸೂಚಕ ತಲೆಯಾಗಿ ಉಳಿದೆ. ಹಿರೇಮಠರು ಈ ಪಕ್ಷದಲ್ಲಿ ಯಾವುದೇ ಸ್ಥಾನವನ್ನು ಪಡೆದಿಲ್ಲ. ಸಮಾನತೆಯನ್ನು ನಂಬಿದ ಈ ಪಕ್ಷವು ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವವರಿಗೆ ಅನುಕೂಲವಾಗುವಂತೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ. ಈ ಪಕ್ಷವು ಜಾತಿ ವ್ಯವಸ್ಥೆ ಮತ್ತು ಕೋಮುವಾದದಂತಹ ಪ್ರಗತಿಯ ಎಡವಟ್ಟುಗಳ ವಿರುದ್ಧ ಕೆಲಸ ಮಾಡಿದೆ. ಈಗ ಅದನ್ನು ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನಗೊಳಿಸಲಾಗಿದೆ.