“ಆರ್‍ಎಸ್‍ಎಸ್ ಆಳ ಮತ್ತು ಅಗಲ” – ದೇವನೂರ ಮಹಾದೇವ ಅವರ ನೂತನ ಪುಸ್ತಿಕೆ

[ಆರ್‍ಎಸ್‍ಎಸ್‍ನ ನಿಜ ಸ್ವರೂಪವನ್ನು ಮತ್ತು ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಜನರ ಮುಂದಿಡುವ ಒಂದು ಪ್ರಯತ್ನ ಇದು. ಈ ದೇಶವನ್ನು ಆರ್‍ಎಸ್‍ಎಸ್ ಎತ್ತ ಒಯ್ಯಲು ಶ್ರಮಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತು ಈ ಸಂಘಟನೆಯ ಬಗ್ಗೆ ಇರುವ ಗ್ರಹಿಕೆ ಹಾಗೂ ಆ ಸಂಘಟನೆಯ ನಿಜ ಬಣ್ಣದ ನಡುವೆ ಇರುವ ಅಂತರವನ್ನು ಜನರಿಗೆ ಮನದಟ್ಟು ಮಾಡಬೇಕೆಂಬುದರ ದಿಕ್ಕಲ್ಲಿ ಒಂದು ಹೆಜ್ಜೆ. “ಆರ್‍ಎಸ್‍ಎಸ್ ಆಳ ಮತ್ತು ಅಗಲ” -ದೇವನೂರ ಮಹಾದೇವ ರಚಿತ ಕೃತಿ. ಇದು 2.7.2022ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.]
ಆರ್ಎಸ್ಎಸ್ನ ನಿಜ ಸ್ವರೂಪವನ್ನು ಮತ್ತು ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಜನರ ಮುಂದಿಡುವ ಒಂದು ಪ್ರಯತ್ನ ಇದು. ಈ ದೇಶವನ್ನು ಆರ್ಎಸ್ಎಸ್ ಎತ್ತ ಒಯ್ಯಲು ಶ್ರಮಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತು ಈ ಸಂಘಟನೆಯ ಬಗ್ಗೆ ಇರುವ ಗ್ರಹಿಕೆ ಹಾಗೂ ಆ ಸಂಘಟನೆಯ ನಿಜ ಬಣ್ಣದ ನಡುವೆ ಇರುವ ಅಂತರವನ್ನು ಜನರಿಗೆ ಮನದಟ್ಟು ಮಾಡಬೇಕೆಂಬುದರ ದಿಕ್ಕಲ್ಲಿ ಒಂದು ಹೆಜ್ಜೆ. “ಆರ್ಎಸ್ಎಸ್ ಆಳ ಮತ್ತು ಅಗಲ” -ದೇವನೂರ ಮಹಾದೇವ ರಚಿತ ಕೃತಿ. 40/- ಬೆಲೆಯುಳ್ಳ, 8+64 ಪುಟಗಳುಳ್ಳ ಈ ಕೃತಿಯ 9000 ಪ್ರತಿಗಳನ್ನು ಅಭಿರುಚಿ ಪ್ರಕಾಶನ, ಗೌರಿ ಮೀಡಿಯಾ ಟ್ರಸ್ಟ್, ನಡೆ-ನುಡಿ, ಚಿಕ್ಕನಾಯಕನಹಳ್ಳಿ, ಜನಸ್ಪಂದನ ಟ್ರಸ್ಟ್ ತಿಪಟೂರು, ಮಾನವ ಬಂಧುತ್ವ ವೇದಿಕೆ, ಭಾರತೀಯ ಪರಿವರ್ತನ ಸಂಘಗಳು ಜೊತೆಗೂಡಿ ಮುದ್ರಿಸಿವೆ.
ಈ ಪುಸ್ತಿಕೆಯನ್ನು ನೀವೂ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು. ನೀವೇ ಪ್ರಕಾಶಕರಾಗಬಹುದು! ಯಾವುದೇ ವ್ಯಕ್ತಿ, ಸಂಸ್ಥೆ, ಪ್ರಕಾಶಕರು ಪ್ರಕಟಿಸಬಹುದು. ಪುಸ್ತಿಕೆ ಪ್ರಕಟಿಸಲು ತಗುಲುವ ವೆಚ್ಚವನ್ನು ಈ ಕೆಳಗಿನ ಒಂದು ಸಂಪರ್ಕ ವಿಳಾಸಕ್ಕೆ ಕಳಿಸಿಕೊಟ್ಟರೆ ಮುದ್ರಣ ಮಾಡಿಸಿ ಪುಸ್ತಿಕೆ ತಲುಪಿಸಲಾಗುವುದು. ಅಥವಾ ನೀವೇ ಮುದ್ರಿಸಿ ಕೊಳ್ಳುವುದಾದರೆ, 500 ರೂಪಾಯಿಗಳನ್ನು ಯಾವುದಾದರೂ ಸಂಪರ್ಕ ವಿಳಾಸಕ್ಕೆ ಕಳಿಸಿಕೊಟ್ಟು ನೋಂದಣಿ ಮಾಡಿಸಿದರೆ, ಸಿದ್ಧಪಡಿಸಿರುವ 64 ಪುಟಗಳ ಮುದ್ರಣ ಪಠ್ಯವನ್ನು (ಮೊದಲ 8 ಪೀಠಿಕೆ ಪುಟಗಳನ್ನು ಹೊರತುಪಡಿಸಿ) ನಿಮಗೆ ಕಳಿಸಿಕೊಡಲಾಗುವುದು. ಇದನ್ನು ಪ್ರಕಟಿಸುವವರು ಯಾವುದೇ ಗೌರವಧನವನ್ನು ಲೇಖಕರಿಗೆ ನೀಡಬೇಕಾಗಿಲ್ಲ. ಪುಸ್ತಿಕೆ ಬೆಲೆಯನ್ನು ಆದಷ್ಟು ಹಿತಮಿತವಾಗಿ ಓದುಗ ಸ್ನೇಹಿಯಾಗಿ ನಿಗದಿ ಪಡಿಸಿರಿ ಎಂದು ಮನವಿ. ಪ್ರಕಟವಾದ ಮೇಲೆ ಹತ್ತು ಪ್ರತಿಗಳನ್ನು ಲೇಖಕರಿಗೆ ಕಳುಹಿಸಿಕೊಡಿರಿ.
ಸಂಪರ್ಕಕ್ಕಾಗಿ :
ಅಭಿರುಚಿ ಗಣೇಶ್ : 99805 60013
ಮಹಾಲಿಂಗಪ್ಪ ಆಲಬಾಳ : 96207 11704
ಶ್ರೀಪಾದ ಭಟ್ : 98804 53799
ಮುತ್ತುರಾಜ್ : 73537 70202
ಸಿದ್ದಪ್ಪ ಮೂಲಗೆ : 94822 99648
ಒಂದು ವಿಶೇಷ ಪ್ರಕಟಣೆ:
ಈ ಕೆಳಕಂಡ ಕೃತಿಗಳಿಗೂ ಲೇಖಕರಿಗೆ ಗೌರವಧನ ನೀಡಬೇಕಾಗಿಲ್ಲ. ತಮ್ಮ ಹೆಸರಿನಲ್ಲಿ ಪ್ರಕಟಿಸಲು ಇಚ್ಛಿಸುವ ಆಸಕ್ತ ವ್ಯಕ್ತಿ/ಸಂಘ/ಪ್ರಕಾಶಕರು ಸಂಪರ್ಕಿಸಬಹುದು.
ದೇವನೂರ ಮಹಾದೇವರ ಅವರ ಪುಸ್ತಿಕೆ
 ಈಗ ಭಾರತ ಮಾತಾಡುತ್ತಿದೆ.
 ಜನಾಂದೋಲನಗಳ ಮಹಾಮೈತ್ರಿ ಜಾಥಾ.
 ಒಂದು ಪ್ರಣಾಳಿಕೆ.
 ಮಹಾಮೈತ್ರಿಗೆ ನಡೆನುಡಿ.
ಶಶಿಕಾಂತ ಸೆಂಥಿಲ್, ಐ.ಎ.ಎಸ್. ಜೊತೆಗೆ ಎ.ಎಸ್.ಪುತ್ತಿಗೆ ಅವರ ಪುಸ್ತಿಕೆ
 ನಾನೇಕೆ ರಾಜಿನಾಮೆ ನೀಡಿದೆ ಮತ್ತು ನಿಗೂಢ ಅಕ್ಷರಗಳು
ಈ ಮಾಹಿತಿಯನ್ನು ನಿಮ್ಮ ಪರಿಚಿತ ವಲಯಗಳಲ್ಲಿ ವ್ಯಾಪಕವಾಗಿ ಹಂಚಲು ಮನವಿ.