ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[14.4.2015ರಂದು ದೆಹಲಿಯ ಆಮ್ ಆದ್ಮಿ ಪಕ್ಷ, ಭಿನ್ನ ಬಣ ನಡೆಸಿದ ”ಸ್ವರಾಜ್ ಸಂವಾದ” ದಲ್ಲಿ ದೇವನೂರ ಮಹಾದೇವ ಅವರು ಭಾಗಿಯಾದ ನಂತರ ಪ್ರಜಾವಾಣಿಗೆ ಆಡಿದ ಮಾತಿನ ಚಿತ್ರಮುದ್ರಿಕೆ ಮತ್ತು ವರದಿ]
ಮುಂದೆ ನೋಡಿ -
-
ಏಪ್ರಿಲ್ 19, 2015 ರಿಂದ ಚಿಂತಕ ಪ್ರಸನ್ನ ಅವರು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕೆ ಸಾಥ್ ನೀಡಿದ ದೇವನೂರ ಮಹಾದೇವ ಅವರ ಮಾತುಗಳು…. 12.4.2015, ಪ್ರಜಾವಾಣಿ ವರದಿ. ಬದನವಾಳುವಿನಲ್ಲಿ ಚಿಂತಕರಾದ ಪ್ರಸನ್ನ ಮತ್ತು ದೇವನೂರ ಮಹಾದೇವ ಅವರು ಮುಂದಿನ ತಲೆಮಾರಿನ ಪುಟಾಣಿ ಅಪೇಕ್ಷಾ ಗಣೇಶ್ ಜೊತೆಗೆ ಸುಸ್ಥಿರ ಅಭಿವೃದ್ಧಿಯ ಕುರಿತು ತಮ್ಮ ಕನಸುಗಳನ್ನು ಚರ್ಚಿಸುತ್ತಿರಬಹುದೇ? [ಛಾಯಾಚಿತ್ರಗಳ ಕೊಡುಗೆ -ಉಮಾ]
ಮುಂದೆ ಓದಿ -
ಭಾಷಾ ಮಾಧ್ಯಮ ವಿವಾದದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ತಾಯ್ನುಡಿಯ ಉಳಿವಿನ ಕುರಿತು ದೇವನೂರ ಮಹಾದೇವ ಅವರು 2014ರಲ್ಲಿ ರಾಷ್ಟ್ರಪತಿಗಳಿಗೆ ಬರೆದ ಪತ್ರ
ಮುಂದೆ ಓದಿ -
ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ಕುರಿತು 20.3.2015ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಹೇಳಿಕೆ.
ಮುಂದೆ ನೋಡಿ -
[2015ರ ಫೆಬ್ರವರಿ 21ರಂದು ಸವದತ್ತಿಗೆ ಭೇಟಿ ನೀಡಿ ಎಲ್ಲಮ್ಮನ ದೇವಸ್ಥಾನ ನೋಡಿ ಹೊರ ಬರುವಾಗ 4-5 ಜೋಗತಿಯರು ಹಡ್ಡಲಿಗಿ ಹಿಡಿದು ದೇವನೂರರನ್ನು ಬೇಡಿಕೊಂಡರು. ಅವರಿಗೆ ಹತ್ತತ್ತು ರೂಪಾಯಿ ಕೊಟ್ಟ ನಂತರ ಕೊನೆಗೆ ಬಂದ ಈ ಹೆಣ್ಣುಮಗಳಿಗೆ 100 ರೂಪಾಯಿ ಹಾಕಿ ‘ಈ ಹಣವನ್ನು ಏನು ಮಾಡುತ್ತಿಯ!’ ಎಂದು ಕೇಳಿದರು.’ನಿಮ್ಮ ಭವಿಷ್ಯ ಹೇಳಿ ನಿಮ್ಮ ಹೆಸರಿನಲ್ಲಿ ಎಲ್ಲಮ್ಮನಿಗೆ ಎಣ್ಣೆ-ದೀಪ ಹಾಕುತ್ತೇನೆ’ ಎಂದಳು. ‘ದೇವಿಗೆ ಎಣ್ಣೆ ಬೇಡ ನಿನ್ನ ಮಕ್ಕಳಿಗೆ ಓದಲಿಕ್ಕೆ ಬೇಕಾಗುವ ಪುಸ್ತಕಗಳನ್ನು ಕೊಡಿಸು’ ಎಂದು ತಿಳಿ ಹೇಳಿದರು. ವಾಪಸು ಬರುವಾಗ ”ಇವರೆಲ್ಲ ನಮ್ಮ ಬಂಧುಗಳು ಎನ್ನಿಸುತ್ತಾರೆ” ಎಂದು ಮಹಾದೇವ ಉದ್ಘರಿಸಿದರು! [ವಿವರಣೆ ಹಾಗೂ ಫೋಟೋ ಕೊಡುಗೆ- ಶಂಕರ ಹಲಗತ್ತಿ ಧಾರವಾಡ]
ಮುಂದೆ ನೋಡಿ -
(ಬೆಂಗಳೂರಿನಲ್ಲಿ 1.2.2015ರಂದು ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿತು. ಅನುವಾದಕಿ ಸೂಸನ್ ಡೇನಿಯಲ್ ಉಪಸ್ಥಿತರಿದ್ದರು. ಇದರೊಂದಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಹಾದೇವ ಅವರೊಂದಿಗೆ “ಬದುಕು,ಸಾಹಿತ್ಯ ಹಾಗೂ ರಾಜಕೀಯ” ವಿಷಯ ಕುರಿತು ಸಂವಾದ ನಡೆಸಿಕೊಟ್ಟರು. ಆ ಸಂದರ್ಭದ ವಿಜಯಕರ್ನಾಟಕ ವರದಿ ನಮ್ಮ ಮರು ಓದಿಗಾಗಿ ಇಲ್ಲಿದೇ….)
ಮುಂದೆ ಓದಿ -
-
-