ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಮೂರು ವರ್ಷ ಪೂರೈಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಮರ್ಥಕರು ‘ಉತ್ತಮ ಆಡಳಿತ’ಎಂದರೆ, ಟೀಕಾಕಾರರು ಕೆಟ್ಟ ಆಡಳಿತಕ್ಕೆ ನಿದರ್ಶನಗಳನ್ನು ನೀಡಿದ್ದಾರೆ. ನೀತಿ-ನಿರ್ಧಾರ-ನಿಲುವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದವರು ಅನೇಕ. ಸಿದ್ದರಾಮಯ್ಯಬಗ್ಗೆ ತಮ್ಮ ಎಂದಿನ ವಿಶ್ವಾಸವನ್ನು ಉಳಿಸಿಕೊಂಡೆ, ಅವರು ವಹಿಸಬೇಕಾದ ಮುನ್ನೆಚ್ಚರಗಳನ್ನು ಗುರುತಿಸಿದ್ದಾರೆ ಸ್ನೇಹಿತರೂ ಆದ ಸಾಹಿತಿ ದೇವನೂರ ಮಹಾದೇವ.‘‘ಸಿದ್ದರಾಮಯ್ಯ ವರ್ಚಸ್ಸು ಮಸುಕಾಗುತ್ತಿದೆ.ಈ ಕ್ಷಣದಲ್ಲೆ ಅವರು ಮರುಹುಟ್ಟು ಪಡೆಯಬೇಕು.ಇದು ಅಧಿಕಾರದ ಕೊನೆಯ ದಿನ ಎಂದುಕೊಂಡೆ ನೆನಪಿನಲ್ಲುಳಿಯುವಂತ ಕೆಲಸ ಮಾಡಬೇಕು’’ಎಂದು ‘ಕನ್ನಡಪ್ರಭ’ಕ್ಕೆ 16.5.2016 ರಂದು ನೀಡಿದ ಸಂದರ್ಶನದಲ್ಲಿ ಅವರು ಆಶಿಸಿದ್ದಾರೆ.
ಮುಂದೆ ಓದಿ -
ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಮುಗಿಸಿದ ಈ ಸಂದರ್ಭದಲ್ಲಿ 13.5.2016ರ ‘ದ ಹಿಂದೂ’ ಪತ್ರಿಕೆಗೆ ದೇವನೂರ ಮಹಾದೇವ ಅವರು ನೀಡಿದ ಹೇಳಿಕೆ.
ಮುಂದೆ ನೋಡಿ -
ಹಾಸನ ಜಿಲ್ಲೆ ಹೊಳೆನರಸಿಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ಸಂಘರ್ಷ ಮತ್ತು ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ 20.4.2016ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ಪ್ರತಿಕ್ರಿ.ಯೆ
ಮುಂದೆ ನೋಡಿ -
[ಖಾಸಗೀಕರಣ, ಖಾಸಗಿ ರಂಗ ಮತ್ತು ದಲಿತರ ಸಮಸ್ಯೆ ಕುರಿತು 15.2.2014ರಂದು ಬೆಂಗಳೂರಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ದಲಿತ ಹಕ್ಕುಗಳ ಸಮಿತಿ ಏರ್ಪಡಿಸಿದ್ದ ವಿಚಾರಸಂಕಿರಣದ ವಿಜಯಕರ್ನಾಟಕ ವರದಿ.]
ಮುಂದೆ ನೋಡಿ -
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಸಂಗ್ರಾಮ ಪರಿಷತ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭಾರತ ಜ್ಞಾನ– ವಿಜ್ಞಾನ ಸಮಿತಿ, ಹೈದರಾಬಾದ್ ಕರ್ನಾಟಕ ರೈತ ಸಂಘ ಮತ್ತು ರಾಜ್ಯ ಬಿಟಿ ಹತ್ತಿ ನಿರ್ಮೂಲನಾ ಮತ್ತು ನಷ್ಟ ಪರಿಹಾರ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ 25.1.2016 ರಂದು ಆಯೋಜಿಸಿದ್ದ ರಾಜ್ಯ ರೈತರ ಬೃಹತ್ ಸಮಾವೇಶ ಉದ್ಘಾಟಿಸಿದ ಸಾಹಿತಿ ದೇವನೂರ ಮಹಾದೇವ ಅವರ ಮಾತುಗಳ ಮತ್ತು ಪತ್ರಕರ್ತರೊಂದಿಗೆ ಮಾತುಕತೆಯ ಪ್ರಜಾವಾಣಿ ಮತ್ತು ದಿ ಹಿಂದೂ ಪತ್ರಿಕೆಯ ವರದಿಗಳು
ಮುಂದೆ ಓದಿ -
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ 24.3.2016 ರಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಕೃಷಿ ಕಿಡಿ’ ವಿಶೇಷ ಸಂಚಿಕೆಯನ್ನು ಸಾಹಿತಿ ದೇವನೂರ ಮಹದೇವ ಬಿಡುಗಡೆ ಮಾಡಿದರು. ಡಾ.ಜಯಲಕ್ಷ್ಮೀ, ದಿವಾಕರ್, ಪ. ಮಲ್ಲೇಶ್, ಕೆ. ರಾಧಾಕೃಷ್ಣ ಇದ್ದಾರೆ. ಆ ಕಾರ್ಯಕ್ರಮದ ಪ್ರಜಾವಾಣಿ ವರದಿ, ಆಂದೋಲನ ಪತ್ರಿಕಾ ವರದಿ ಇಲ್ಲಿದೆ
ಮುಂದೆ ನೋಡಿ -
2011ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ನೆನಪಿಗಾಗಿ ಮರುಮುದ್ರಣಗೊಂಡ ”ಕುಸುಮಬಾಲೆ’ ಕಾದಂಬರಿಗೆ ದೇವನೂರ ಮಹಾದೇವ ಅವರು ಬರೆದ ”ನನ್ನ ನುಡಿ”.
ಮುಂದೆ ಓದಿ -
ರಂಗಾಯಣದ ಬಯಲು ರಂಗಮಂದಿರದ ಕಟ್ಟೆಯ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಣೆಯಲ್ಲಿ ಮಗ್ನರಾದ ದೇವನೂರ ಮಹಾದೇವ ಅವರು.
ಮುಂದೆ ನೋಡಿ -
ಕೆ.ಆರ್ ಪೇಟೆಯ ಶತಮಾನದ ಶಾಲೆ ಆವರಣದಲ್ಲಿ ‘ಸಮಾನ ಶಿಕ್ಷಣ ಜನಾಂದೋಲನಾ ಸಮಿತಿ’ ಆಶ್ರಯದಲ್ಲಿ 27.2.2016, ಶನಿವಾರ ನಡೆದ ಜಾಗೃತಿ ಸಭೆಯಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿ ‘ಬಂಡವಾಳಶಾಹಿಗಳ ಕೈಗೆ ಶಿಕ್ಷಣದ ಜುಟ್ಟು’ ಎಂದು ಕಳವಳ ಪಟ್ಟರು. -ಪ್ರಜಾವಾಣಿ ವಾರ್ತೆ
ಮುಂದೆ ನೋಡಿ -
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರ ಬಂಧನ ಹಾಗೂ ‘ದೇಶದ್ರೋಹ’ದ ಆಪಾದನೆಯನ್ನು ಖಂಡಿಸಿ ಮೈಸೂರಿನ ಗಾಂಧಿಚೌಕದಲ್ಲಿ ಜಂಟಿ ಕ್ರಿಯಾ ಸಮಿತಿ 29.3.2015 ಗುರುವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿದರು.-ಪ್ರಜಾವಾಣಿ ವಾರ್ತೆ
ಮುಂದೆ ಓದಿ