ಅಬ್ದುಲ್ ರಷೀದ್‌ ಅವರ ಕ್ಯಾಮೆರಾದಲ್ಲಿ ದೇವನೂರ ಮಹಾದೇವ

[ವಿಡಿಯೋ ಕೃಪೆ- ಅಬ್ದುಲ್ ರಷೀದ್ ಅವರ ಮುಖಪುಸ್ತಕ. ವಿಡಿಯೋದ ಫೋಟೋಗಳನ್ನು ಕುರಿತು ಅವರದೇ ನುಡಿಗಳು…

ಇವು ಸುಮಾರು ಹದಿನೈದು ವರ್ಷಗಳ ಹಿಂದೆ ರಾಮು ಮಾಮನ ಮನೆಯಲ್ಲಿ ತೆಗೆದ ಮಾದೇವ ಮಾಮನ ಫೋಟೋಗಳು. ಆಗ ತಾನೇ ನನ್ನ ಕೈಗೆ ಸಿಕ್ಕಿದ್ದ ನಿಕಾನ್ ಡಿ ಟು ಎಚ್ ಕ್ಯಾಮರಾವನ್ನು ಇವರ ಮೇಲೆ ಪ್ರಯೋಗಿಸಿದ್ದೆ. ಈ ಫೋಟೋಗಳ ಜೊತೆ ನೀವು ಕೇಳುತ್ತಿರುವುದು ಅಮೇರಿಕಾದ ಹಾಡುಗಾತಿ ಟ್ರೇಸಿ ಚಾಪ್ ಮನ್ ಹಾಡಿರುವ ಒಂದು ಹಾಡು. ಹಲವು ವರ್ಷಗಳ ಹಿಂದೆ ಅಮೇರಿಕಾಕ್ಕೆ ಹೋಗಿ ಬಂದಿದ್ದ ಮಾದೇವ ಮಾಮ ಆಕೆಯ ಹಾಡುಗಳ ಫ್ಯಾನ್ ಆಗಿದ್ದರು ಮತ್ತು ನಮ್ಮಲ್ಲೂ ಟ್ರೇಸಿ ಚಾಪ್ ಮನ್ ಹಾಡುಗಳ ಹುಚ್ಚು ಹತ್ತಿಸಿದ್ದರು. ಈಗ ನಾನೂ ಮಾಮ ಆಗಿರುವುದರಿಂದ ಅವರನ್ನು ಮಾಮ ಎಂದು ಕರೆಯುವುದನ್ನು ಬಂದ್ ಮಾಡಿರುವೆ.]