ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[2025ರಲ್ಲಿ ದೊರೆತ ಫೋಟೋಗಳು ಇಲ್ಲಿವೆ. ಅವನ್ನು ವಿವಿಧ ಮೂಲಗಳಿಂದ ಹುಡುಕಿ ನಮಗೆ ಕಳಿಸಿದ ಎಲ್ಲ ಸಹೃದಯರಿಗೂ ಧನ್ಯವಾದಗಳು.
» -
[20.8.2025ರಂದು ಈ ದಿನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನ. ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ, ದಿಕ್ಕು-ದೆಸೆಯಿಲ್ಲದೆ ದಿಕ್ಕಾಪಾಲಾಗಿರುವ ಸಮುದಾಯವನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ. ಈ ಕಳಂಕ ಸಮುದಾಯಕ್ಕೆ, ಸರ್ಕಾರಕ್ಕೆ ಎರಡಕ್ಕೂ ಅಂಟಿದೆ. ತೊಳೆದುಕೊಳ್ಳಬೇಕು ಅಂತ ತಾಕೀತು ಮಾಡಿದ್ದಾರೆ ದೇವನೂರ ಮಹಾದೇವ.]
» -
[ಒಂದು ಹಳೆಯ ಚಿತ್ರ: ಉತ್ತರ ಕನ್ನಡ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ದೇವನೂರ ಮಹಾದೇವ ಮಾತನಾಡುತ್ತಿದ್ದು, ಅವರೊಂದಿಗೆ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ವಿ.ಮುನಿವೆಂಕಟಪ್ಪ ಮುಂತಾದವರಿದ್ದಾರೆ.]
» -
[ಮೈಸೂರಿನಲ್ಲಿ 4.5.2025ರಂದು “ಎದೆಗೆ ಬಿದ್ದ ಅಕ್ಷರ” ನಾಟಕದ ಮೊದಲ ಯಶಸ್ವಿ ಪ್ರದರ್ಶನ ಆಯ್ತು. ಅದರ ಒಂದು ಝಲಕ್]
ಫೋಟೋ ಕೊಡುಗೆ- ಶ್ರೀ ಶ್ರೀನಿ
» -
[ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಮೈಸೂರು, ಆಂಗ್ಲ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ವಿಶೇಷ ಉಪನ್ಯಾಸ ಮಾಲಿಕೆ -3ರಲ್ಲಿ “ದೇವನೂರ ಮಹಾದೇವ ಅವರ ಕುಸುಮಬಾಲೆ ಅವಲೋಕನ” – ಕಾರ್ಯಕ್ರಮದಲ್ಲಿ -ಪ್ರೊ.ಸಿ.ನಾಗಣ್ಣ ಅವರ ಮಾತುಗಳು. ವಿಡಿಯೋ ಕೊಡುಗೆ- ವರಹಳ್ಳಿ ಆನಂದ]
» -
[ಇತ್ತೀಚಿಗೆ ಮೈಸೂರಿನಲ್ಲಿ ಕವಿ ಕೆ.ಸಿ.ಶಿವಪ್ಪ ಅವರ ಮನೆಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರನ್ನು ಭೇಟಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು… ಜೊತೆಯಲ್ಲಿ ಅವರ ಸಹೋದರ ಶಂಕರ್ ದೇವನೂರ್, ಸಹೋದರರ ಮಗಳು ರಚನಾ ದೇವನೂರ್ ಹಾಗೂ ಶ್ರೀನಿವಾಸ್ ಇದ್ದಾರೆ. ಫೋಟೋ ಕೊಡುಗೆ- ಶ್ರೀ ಶ್ರೀನಿ]
» -
[ಮಂಗಳೂರಿನಲ್ಲಿ 10 ಮಾರ್ಚ್ 2012ರಂದು ಲಂಕೇಶ್ ಪತ್ರಿಕಾ ಬಳಗದಿಂದ “ಲಂಕೇಶ್ -77” ಕಾರ್ಯಕ್ರಮ ಏರ್ಪಾಡಾಗಿದ್ದ ಸಂದರ್ಭದಲ್ಲಿ ಕೋಸ್ಟಲ್ ಡೈಜೆಸ್ಟ್. ಕಾಂ ಅಂತರ್ಜಾಲ ಪತ್ರಿಕೆಗಾಗಿ, ಫೋಟೋಗ್ರಾಫರ್- ಅಹಮದ್ ಅನ್ವರ್ ಅವರು ತೆಗೆದ ಫೋಟೋಗಳು. ದೇವನೂರರ ಜೊತೆಗೆ- ಗೌರಿ ಲಂಕೇಶ್, ಪಾರ್ವತೀಶ ಬಿಳಿದಾಳೆ, ಕೆ.ಎಲ್.ಅಶೋಕ್ ಮುಂತಾದವರು ಇದ್ದಾರೆ. ]
» -
[ದಲಿತ ಸಂಘರ್ಷ ಸಮಿತಿಯ ಮುಖ್ಯಸ್ಥರಾದ ಸಿದ್ಧಲಿಂಗಯ್ಯ, ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಹಾಗೂ ಇತರರು ಈ ಫೋಟೋದಲ್ಲಿದ್ದಾರೆ.]
» -
[ನಮ್ಮ ಬನವಾಸಿಗೆ ಹತ್ತು ವರ್ಷಗಳಾದ ಸಂದರ್ಭದಲ್ಲಿ[29.12.2024] ದೊರಕಿದ ಫೋಟೋಗಳ ಆಲ್ಬಮ್. ಫೋಟೋಗಳನ್ನು ಹುಡುಕಿ ಕಳಿಸಿದ ಎಲ್ಲಾ ಆತ್ಮೀಯರಿಗೆ ಧನ್ಯವಾದಗಳು… ]
» -
[ಹಿರಿಯ ಪತ್ರಕರ್ತ, ಪ್ರಜಾವಾಣಿಯ ಮೈಸೂರು ಬ್ಯೂರೋದ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಕೋಲಾರದ “ಓದುಗ-ಕೇಳುಗ ನಮ್ಮ ನಡೆ” 44ನೇ ತಿಂಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 29.12.2024ರಂದು ದೇವನೂರ ಮಹಾದೇವ ಅವರ ‘ಯಾರ ಜಪ್ತಿಗೂ ನಿಗದ ನವಿಲುಗಳು’ ಕುರಿತು ಆಡಿದ ಮಾತುಗಳ ವಿಡಿಯೋ ನಮ್ಮ ವೀಕ್ಷಣೆಗಾಗಿ… ]
»