ದಲಿತರಲ್ಲಿ ವಿಚಾರ ಕ್ರಾಂತಿ ಆಗಬೇಕು-ದೇವನೂರ ಮಹಾದೇವ
[ಡಿಸೆಂಬರ್ 18, 1976ರಂದು ಭದ್ರಾವತಿಯಲ್ಲಿ ನಡೆದ ‘ದಲಿತ ಲೇಖಕರ ಕಲಾವಿದರ ಒಕ್ಕೂಟ’ ಆಯೋಜಿಸಿದ್ದ ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕೀಯ ಭಾಷಣದಲ್ಲಿ, ದೇವನೂರ ಮಹಾದೇವ ಅವರು ಆಡಿದ ಮಾತಿನ ತುಣುಕು. ಇದನ್ನು ‘ದಲಿತ ಚಳವಳಿಯ ಹೆಜ್ಜೆಗಳು’ ಪುಸ್ತಕ (ಪುಟ: 36-37, 2021 ಲೇಖಕರು: -ಶಿವಾಜಿ ಗಣೇಶನ್)ದಿಂದ ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
“ದಲಿತರಲ್ಲಿ ವಿಚಾರ ಕ್ರಾಂತಿ ಆಗಬೇಕು. ಇದೇನು? ಇದು ಯಾಕೆ? ಎಂದು ಮನುಷ್ಯ ತನ್ನ ಸುತ್ತಮುತ್ತನ್ನು ನೋಡಿ ಕೇಳಿದಾಗ ಅವನು ವಿಚಾರವಂತನಾಗುತ್ತಾನೆ. ವಿಚಾರ ಅವನ ತಲೇಲಿ ಹುಟ್ಟುವುದಕ್ಕೂ ಮೊದಲು ಅವನು ಪ್ರಜ್ಞಾಪೂರ್ವಕವಾಗಿ ತನ್ನ ಸುತ್ತಮುತ್ತನ್ನು ನೋಡಬೇಕಾಗುತ್ತದೆ… ಹಾಗೆ ಕಣ್ತೆರೆದಿರುವ ನಾವು ಉಳಿದವರ ಕಣ್ಣು ತೆರೆಸುವ ಕೆಲಸ ಮಾಡುವುದು ನಾವು ಇಡಬೇಕಾದ ಮೊದಲ ಹೆಜ್ಜೆ ಆಗಿದೆ.”
