ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ವೇದಿಕೆ ಹಂಚಿಕೊಂಡ ದೇವನೂರ ಮಹಾದೇವ…
[ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ವೇದಿಕೆ ಹಂಚಿಕೊಂಡ ದೇವನೂರ ಮಹಾದೇವ… ಒಂದು ಹಳೆಯ ಫೋಟೋ]
ಲೋಹಿಯಾ ಮತ್ತು ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರಭಾವದಿಂದ ಅನೇಕ ಪ್ರಗತಿಪರ ಯುವಜನರು ಕರ್ನಾಟಕದಲ್ಲಿ ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಆ ಹೊತ್ತಲ್ಲೇ ಜಯಪ್ರಕಾಶ್ ನಾರಾಯಣ್(ಜೆಪಿ)ಅವರು ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟರು. 1974ರಲ್ಲಿ ಜೆಪಿಯವರನ್ನು ಕರ್ನಾಟಕಕ್ಕೆ ಆಹ್ವಾನಿಸಬೇಕೆಂದು ಈ ಯುವ ಪ್ರಗತಿಪರರ ತಂಡ ಬಯಸಿತು. ಅದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಯ್ತು. ದೇವನೂರ ಮಹಾದೇವ ಅವರು ಆ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಂಬಂಧವಾಗಿ 1974 ಮೇ 24ರಂದು ಮೈಸೂರಿನಲ್ಲಿ ದೊಡ್ಡ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಯ ಒಂದು ಫೋಟೋ ಇಲ್ಲಿದೆ. ಇದಾಗಿ ಒಂದೇ ತಿಂಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಯ್ತು.
