ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
| ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
![]() |
![]() |
![]() |
![]() |
|||
-
‘ಮಹಾ’ ಎಂಬ ಒಂದೇ ಪದವಿಟ್ಟು ತೂಗಿದರೂ ಸಮಾಜದಲ್ಲಿರುವ ಶ್ರೇಣಿಗೆ ತಕ್ಕಂತೆ ತಕ್ಕಡಿ ಏಳುತ್ತದೆ, ಬೀಳುತ್ತದೆ, ತೂಗುತ್ತದೆ! ತಳಕ್ಕೆ ಹೋಗುತ್ತಾ ಕಳೆದುಕೊಳ್ಳುತ್ತದೆ. ಮೇಲಕ್ಕೆ ಹೋಗುತ್ತಾ ಪಡೆದುಕೊಳ್ಳುತ್ತದೆ. ಇದು ಭಾರತದ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ‘ಮಹಾ’ ಎಂಬ ಈ ಪದ- ಈ ಅನ್ನದ ಅಗಳೂ ಕಣ್ಸನ್ನೆ ಮಾಡುತ್ತದೆಯಲ್ಲಾ ಎಂಬ ಸಂಕಟಾಶ್ಚರ್ಯ ದೇವನೂರ ಮಹಾದೇವ ಅವರದು.
ಮುಂದೆ ನೋಡಿ -
ತನ್ನ ಕಥೆ ಬರೆಯುವ ಪ್ರಕ್ರಿಯೆ, ಅದರ ಹಿನ್ನೆಲೆ, ಅದರಲ್ಲಿರುವ ಪ್ರಯೋಗಶೀಲತೆ, ಸೃಜನಶೀಲತೆಯ ಕುರಿತು ಮನದಾಳದಿಂದ ಪ್ರಜಾವಾಣಿ 22.5.2016ರ ಮುಕ್ತಚಂದ ಪುರವಣಿಯಲ್ಲಿ ದೇವನೂರ ಮಹಾದೇವ ಹಂಚಿಕೊಂಡಿದ್ದಾರೆ.
ಮುಂದೆ ಓದಿ -
ಎಲ್ಲರಿಗೂ ಹಂಚಿ ಉಣ್ಣುವ ದೊಂಬರ ಪರ ಪದ್ಧತಿ ಮತ್ತು ಎಲ್ಲೆಂದರೆ ಅಲ್ಲಿ ಬೇರು ಬಿಟ್ಟು ಎದ್ದು ನಿಲ್ಲುವ ಅರಳೀಮರದ ಸಮೀಕರಣದೊಂದಿಗೆ ಸಮಾಜವಾದ ಮತ್ತು ಕಮ್ಯುನಿಸಂನ ಮರು ಹುಟ್ಟಿನ ಕಥೆ ಹೇಳಿದ ದೇವನೂರ ಮಹಾದೇವ ಅವರು.
ಮುಂದೆ ಓದಿ -
ಭಾರತದ ಜಾತ್ಯಸ್ಥ ಮನಸಿನೊಳಗೆ ಇಣುಕಿದರೆ ವಿವೇಕ ವಿವೇಚನೆ ಹಾಗೂ ಸರಳತೆಯ ಜೊತೆಗೇ ಕ್ರೌರ್ಯವನ್ನು ಕಾಣುತ್ತೇವೆ . ಆದರೆ ಇದರಿಂದ ಕ್ರೌರ್ಯವನ್ನು ಕತ್ತರಿಸಿ ಬಿಸಾಕಿ ಭಾರತಕ್ಕೆ ಘನತೆ ಮತ್ತು ಮನುಷ್ಯತ್ವ ತಂದುಕೊಡುವುದು ಹೇಗೆ?-ಎಂಬ ಪ್ರಶ್ನೆಯನ್ನು ಗಾಂಧಿ ಹಾಗೂ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನೂ ಸೇರಿಸಿಕೊಂಡು ಸರಳವಾದ ಒಂದು ರೂಪಕದ ಮೂಲಕ ಇಲ್ಲಿ ಮಹಾದೇವ ಅವರು ವಿವರಿಸಲು ಪ್ರಯತ್ನಿಸಿದ್ದಾರೆ.
ಮುಂದೆ ಓದಿ -
[ಮಹಾರಾಷ್ಟ್ರದ ಪ್ರಸಿದ್ಧ ಬರಹಗಾರರಾದ ದಯಾ ಪವರ್ ಅವರ ಮರಾಠಿ ಭಾಷೆಯ ‘ಹೊಲೆ’ ಎಂಬ ಕಥೆಯ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ದೇವನೂರ ಮಹಾದೇವ ಅವರು ಬಹಳ ಹಿಂದೆಯೇ ಮಾಡಿದ್ದು , ಅದು ಫೆಬ್ರವರಿ 1975ರ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಅವರ ಮಿತ್ರರಾದ ರಾಮದೇವ ರಾಖೆಯವರು ನಮ್ಮ ಬನವಾಸಿಗೆ ನೀಡಿದ್ದಾರೆ. ಅವರಿಗೆ ನಮ್ಮ ವಂದನೆಗಳು.]
ಮುಂದೆ ನೋಡಿ -
[ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ 17.1.2016ರಂದು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಆ ಕುರಿತು ದೇವನೂರ ಮಹಾದೇವ ಅವರು ಆಡಿದ ಒಡಲಾಳದ ಮಾತುಗಳ ಬರಹ ರೂಪ…. ನಮ್ಮ ಮರು ಓದಿಗಾಗಿ]
ಮುಂದೆ ನೋಡಿ -
8.1.2016ರ ಪ್ರಜಾವಾಣಿ, ಸಂಗತದಲ್ಲಿ ಪ್ರಕಟವಾದ ಮಹಾದೇವರ ಲೇಖನ ‘ಬುದ್ಧಿಸಂ-ಭಗವದ್ಗೀತೆ’ –ಅಂಬೇಡ್ಕರ್ ಹೋಲಿಕೆ
ಮುಂದೆ ಓದಿ -
2015 ಡಿಸೆಂಬರ್ 19 ಮತ್ತು 20 ರಂದು ಮಂಗಳೂರಿನಲ್ಲಿ ನಡೆದ ಜನನುಡಿಯ ಉದ್ಘಾಟನಾ ಮಾತುಗಳ ಪರಿಷ್ಕೃತ, ವಿಸ್ತೃತ ಬರಹ ರೂಪ. 24.12.2015ರ ಪ್ರಜಾವಾಣಿಯಲ್ಲಿಯೂ ಪ್ರಕಟಿತ.
» -
2015 ಆಗಸ್ಟ್ 15 ಮತ್ತು 16ರಂದು ದಾವಣಗೆರೆಯಲ್ಲಿ ನಡೆದ “ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ಚಿಂತನಾ ಸಮಾವೇಶ”ದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ
ಮುಂದೆ ಓದಿ -



