ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ದೇವನೂರ ಮಹಾದೇವ ಅವರು ಇತಿಹಾಸ ಪ್ರಸಿದ್ಧ ಬಾದಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳು. ಜೊತೆಯಲ್ಲಿ ಮಿತ್ರರಾದ ರಾಮು, ಪ್ರಾಚ್ಯವಸ್ತು ಅಧ್ಯಯನಕಾರರಾದ ರವಿ ಕೋರಿ ಶೆಟ್ಟರ್, ಕಲಾವಿದರಾದ ಸಚ್ಚಿದಾನಂದ ಇದ್ದಾರೆ.
ಮುಂದೆ ನೋಡಿ -
ಚುನಾವಣೆ ಸಂದರ್ಭದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರಾದ ದೇವನೂರ ಮಹಾದೇವ ಅವರಿಂದ ಮತದಾರರಲ್ಲಿ ಮತ ಯಾಚನೆಯ ಭಾವಚಿತ್ರಗಳು. ಚಿತ್ರ ಕೊಡುಗೆ-ಅಭಿರುಚಿ ಗಣೇಶ್
ಮುಂದೆ ನೋಡಿ -
1989 ರಲ್ಲಿ ಅಯೋವ ವಿಶ್ವವಿದ್ಯಾಲಯದಲ್ಲಿ ನಡೆದ ”International writing program” ನಲ್ಲಿ ಮಹಾದೇವ ಅವರು ಭಾಗವಹಿಸಿದ್ದಾಗ ಅವರೊಂದಿಗೆ ನಡೆಸಿದ ಸಂದರ್ಶನದ ಚಿತ್ರ ಮುದ್ರಿಕೆ.
ಮುಂದೆ ನೋಡಿ -
27.6.2015 ರಂದು ಮೈಸೂರಿನ ಕ್ರೈಸ್ಟ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ಬಾಲೆ ಎಮಿಲಿ ಓಷಿನ್ ವಿರಚಿತ ಇಂಗ್ಲಿಷ್ ಕಾದಂಬರಿ “ದಿ ಥ್ರೀ ಸ್ಟಾರ್ಸ್’ ಬಿಡುಗಡೆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಪುಟ್ಟ ಲೇಖಕಿಗೆ ಶುಭ ಹಾರೈಸಿದ ಚಿತ್ರಗಳು. ಫೋಟೋ ಕೊಡುಗೆ ಆಂದೋಲನ ಪತ್ರಿಕೆ ಮೈಸೂರು.
ಚಿತ್ರಗಳನ್ನು ನೋಡಿ -
ಧಾರವಾಡದಲ್ಲಿ 2015 ಏಪ್ರಿಲ್ 4-5 ರಂದು ಜನ ಸಾಹಿತ್ಯ ವೇದಿಕೆವತಿಯಿಂದ ನಡೆದ ”ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ” ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಾಗ ಮಹಾದೇವ ಅವರೊಂದಿಗೆ ಪ್ರೊ. ಅನಿಲ್ ಸದ್ಗೋಪಾಲ್, ಪ್ರಸನ್ನ ಹೆಗ್ಗೋಡು, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಲ್ಲಿಗೆ,ಜೋಗಾಸಿಂಗ್, ಅಖಿಲಾ ವಿದ್ಯಾಸಂದ್ರ ಮತ್ತಿತರರು ಇರುವ ಚಿತ್ರಗಳು. ಛಾಯಾಚಿತ್ರ, ಧ್ವನಿಮುದ್ರಿಕೆಗಳ ಕೊಡುಗೆ- ಶಂಕರ್ ಹಲಗತ್ತಿ ”ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ” ವಿಚಾರ ಸಂಕಿರಣದಲ್ಲಿ ಮಹಾದೇವರು ಆಡಿದ ಮಾತುಗಳ ಧ್ವನಿ ಮುದ್ರಿಕೆ.
ಚಿತ್ರಗಳು ಹಾಗೂ ಧ್ವನಿ ಮುದ್ರಿಕೆ -
28.3.2015ರಂದು ಮೈಸೂರಿನ ರಂಗಾಯಣದಲ್ಲಿ ಜಾನಪದ ಅಕಾಡೆಮಿಯ ವತಿಯಿಂದ ನಡೆದ ಮೂಲ ಕಲಾವಿದರಿಂದ ಹೊಸ ತಲೆಮಾರಿನ ಕಲಾವಿದರಿಗೆ ಕಲಿಸುವ ”ಈ ಜೀವ್ವೆ…. ಆ ಜೀವಕ ನಡಿ” ಕಾರ್ಯಕ್ರಮದ ಸಮಾರೋಪ ಸಮಾರಂಭದ ಚಿತ್ರಗಳು. ಮಹಾದೇವರೊಂದಿಗೆ ಪಿಚ್ಚಳ್ಳಿ ಶ್ರೀನಿವಾಸ್, ಜೆನ್ನಿ, ಮಗಳು ಮಿತಾ, ಮೊಮ್ಮಗಳು ರುಹಾನಿ ಇತರರು… ಆಂದೋಲನ ಪತ್ರಿಕೆಯ ಛಾಯಾಚಿತ್ರ ಕೊಡುಗೆ
ಚಿತ್ರ ನೋಡಿ -
26.4.2015 ರಂದು ಪಾಂಡವಪುರದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಹಾದೇವರು ಆಡಿದ ಮಾತುಗಳ ದ್ವನಿ ಮುದ್ರಿಕೆ, ಭಾವಚಿತ್ರ ಮತ್ತು ಪ್ರಜಾವಾಣಿ ವರದಿ ”ಮಗು ಬೆಳೆಯುತ್ತಾ ಕ್ಷೀಣವಾಗುವ ಸಾಕ್ಷಿಪ್ರಜ್ಞೆ” ಪಾಂಡವಪುರ: ‘ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ಪ್ರತಿಯಿಂದು ಮಗು ಹುಟ್ಟುತ್ತ ವಿಶ್ವಮಾನವನಾಗೇ ಹುಟ್ಟುತ್ತದೆ. ಆದರೆ, ಬೆಳೆಯುತ್ತ ಆ ಮಗುವಿಗೆ ಜಾತಿ, ಮತ, ಪ್ರಾದೇಶಿಕ ಸೋಂಕುರೋಗ ಅಂಟುತ್ತದೆ. ಇದರಿಂದ ಮಗುವಿನಲ್ಲಿ ಸಾಕ್ಷಿಪ್ರಜ್ಞೆ ಕ್ಷೀಣವಾಗುತ್ತ ಹೋಗುತ್ತದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು. ಪಟ್ಟಣದಲ್ಲಿ ಶನಿವಾರ…
ಮುಂದೆ ನೋಡಿ -
4.5.2015 ರಂದು ಮೈಸೂರಿನ ರಂಗಾಯಣದ ಚಿಣ್ಣರ ಮೇಳದ ಮಕ್ಕಳು ನಡೆಸಿದ ಜಾಗೃತಿ ಜಾಥಾಕ್ಕೆ ದೇವನೂರ ಮಹಾದೇವ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಮರನಾಥ್, ರಂಗಾಯಣ ನಿರ್ದೇಶಕ ಹೆಚ್. ಜನಾರ್ಧನ್, ಡಾ. ಮಿತಾ ದೇವನೂರು, ಮೊಮ್ಮಗಳು ರುಹಾನಿ ಮತ್ತು ಚಿಣ್ಣರ ಮೇಳದ ಮಕ್ಕಳಿರುವ ಚಿತ್ರಗಳು ಮತ್ತು ಆ ಸಂಧರ್ಭದಲ್ಲಿ ದೇವನೂರರು ಆಡಿದ ಮಾತುಗಳು. ”ನೊಂದವರಿಗಾಗಿ ಪುಟ್ಟ ಪಾದಗಳ ನಡಿಗೆ” ”ನೇಪಾಳ ದುರಂತಕ್ಕೆ ಅತ್ಯಂತ ಮಾನವೀಯ ಸ್ಪಂದನೆಯ ಜೀವಂತ ಪ್ರತಿಕ್ರಿಯೆ ಈ ಎಳೆಯ ಮಕ್ಕಳ ಜಾಥಾ. ಸಾರ್ವಜನಿಕರು ಈ…
ಮುಂದೆ ನೋಡಿ -
19.4.2015 ರಂದು ನಂಜನಗೂಡು ತಾಲೂಕು ಬದನವಾಳುವಿನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿಗಾಗಿ ಸತ್ಯಾಗ್ರಹದ ಶಿಕ್ಷಣ ಕುರಿತ ಗೋಷ್ಠಿಯ ದೇವನೂರರ ಮಾತಿನ ಧ್ವನಿ ಮುದ್ರಿಕೆ ಮತ್ತು ಫೋಟೋಗಳು
ಮುಂದೆ ನೋಡಿ -
14.4.2015 ರಂದು ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿ ಸಭೆಯನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರು ಮತ್ತು ಅದನ್ನು ಇಂಗ್ಲಿಷ್ ಗೆ ಅನುವಾದಿಸಿದ ಸರ್ವೋದಯ ಕರ್ನಾಟಕ ಪಕ್ಷದ ಚುಕ್ಕಿ ನಂಜುಂಡಸ್ವಾಮಿ. ಅದರ ಟಿವಿ 9 ದೃಶ್ಯಾವಳಿ [ಫೋಟೋ ಕೃಪೆ-ಅಭಿರುಚಿ ಗಣೇಶ್ ಸರ್ವೋದಯ ಪಕ್ಷದ ಯುವ ನಾಯಕರು]
ಚಿತ್ರ ನೋಡಿ