ಜೀವತಂತು

ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.

ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ
Devanuru

 

 • ತುಮಕೂರು ವಿಶ್ವವಿದ್ಯಾಲಯ ಪ್ರಸಾರಾಂಗ ಉದ್ಘಾಟನೆ ಹಾಗೂ ಕೆ. ಎಮ್. ಶಂಕರಪ್ಪ ನೆನಪಿನ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು


  ಹೆಚ್ಚಿನ ವಿವರಗಳಿಗಾಗಿ
 • ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಠಾನದ ವಿ.ಎಮ್.ಇನಾಂದಾರ್ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಮಹಾದೇವ ಅವರು ಆಡಿದ ಮಾತುಗಳು.


  ಹೆಚ್ಚಿನ ವಿವರಗಳಿಗಾಗಿ
 • ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಫೆಬ್ರವರಿ 23, 2014ರಂದು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಹಾಗೂ ವಿವಿ ಕಾಲೇಜಿನ ಕನ್ನಡ ಸಂಘಗಳ ಆಶ್ರಯದಲ್ಲಿ ನಡೆದ ”ಆಹಾರ ಪರಂಪರೆ, ಆರೋಗ್ಯ -ಸಂವಾದ” ಕಾರ್ಯಕ್ರಮದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ   


  ಹೆಚ್ಚಿನ ವಿವರಗಳಿಗಾಗಿ
 • ’ಗ್ರಾಮಸ್ವರಾಜ್ : ಗಾಂಧಿ ಅಂಬೇಡ್ಕರ್ – ಒಂದು ಅನುಸಂಧಾನ’ – ಈ ಚರ್ಚೆಗೆ ನೀವೂ ಬನ್ನಿ ಎಂದು ನನ್ನನ್ನು ಕರೆದಾಗ – ’ಏನು ಜಗಳವನ್ನು ಸರಸ ಮಾಡಬೇಕು ಅಂತಿದ್ದಿರಾ ಹೇಗೆ?’ ಎಂದು ತಮಾಷೆ ಮಾಡಿದೆ. ಆ ಇಬ್ಬರ ನಡುವೆ ಜಗಳ ಇಂದೂ ನಡೆಯುತ್ತಿದೆ. ಅದು ತೀವ್ರವಾಗೂ ಇದೆ. ಇದರ ಅರ್ಥ – ಆ ಇಬ್ಬರೂ ಇನ್ನೂ ಸತ್ತಿಲ್ಲ ಅಂತಲೇ ಅರ್ಥ. ಇಂದೂ ಅವರು ಹೆಚ್ಚು ಜೀವಂತವಾಗಿದ್ದಾರೆ ಅಂತಲೂ ಅರ್ಥ.

  ಇದನ್ನು ನಾನು ಒಂದು ಶುಭಸೂಚನೆಯಾಗಿ ನೋಡುತ್ತೇನೆ. ಜಾಗತೀಕರಣದ ಅಟ್ಟಹಾಸದಲ್ಲಿ ವ್ಯಾಪಾರ ಕುಣಿದು ಕುಪ್ಪಳಿಸುತ್ತಾ ಈ ವ್ಯಾಪಾರವೇ ಆಳ್ವಿಕೆಯಾಗಿ ಎಲ್ಲಾ ಸೈದ್ಧಾಂತಿಕ ಆಲೋಚನೆಗಳೂ, ಹೋರಾಟಗಳೂ ಕಣ್ಮರೆಯಾಗುತ್ತಿದೆ ಎಂದು ಎಲ್ಲರೂ ನಂಬುತ್ತಿರುವ ಈ ದುಸ್ಥಿತಿಯಲ್ಲಿ ಈ ಇಬ್ಬರ ಜೀವಂತಿಕೆಯು ಮುಳುಗುವವರಿಗೆ ಒಂದು ಹುಲ್ಲುಕಡ್ಡಿ ಸಿಕ್ಕಂತೆ ನನಗೆ ಕಾಣಿಸುತ್ತದೆ.


  ಹೆಚ್ಚಿನ ವಿವರಗಳಿಗಾಗಿ
 • ಪ್ರಜಾವಾಣಿ ‘ಅಂತರಾಳ’ ಶಿಕ್ಷಣ ವಿಶೇಷಕ್ಕೆ ನೀಡಿದ ಹೇಳಿಕೆ


  ಹೆಚ್ಚಿನ ವಿವರಗಳಿಗಾಗಿ
 • ಚುನಾವಣಾ ಸಂದರ್ಭದ ಪ್ರಜಾವಾಣಿ ಲೇಖನ


  ಮುಂದೆ ಓದಿ
 • ಡಾ| ಅಂಬೇಡ್ಕರ್ ನೆನಪಿನ ಜೈಭೀಮ್ ಭವನದಲ್ಲಿ ’ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ’ ಈಗ ಬಿಡುಗಡೆಯಾಗುತ್ತಿರುವುದು ಏನಾದರೂ ಸ್ವಾತಂತ್ರ್ಯಪೂರ್ವದಲ್ಲಿ -ಅಂಬೇಡ್ಕರ್ ಅವರಿಂದಲೇ ಬಿಡುಗಡೆಯಾಗಿದ್ದರೆ ಹೇಗಿರುತ್ತಿತ್ತು? ಆ ಪರಿಣಾಮದಿಂದಾಗಿ ಇಂದು ಸಮಾಜ ಹೇಗೆ ಎಷ್ಟು ಬದಲಾಗಿರುತ್ತಿತ್ತು? ಇದು ಅಂದಾಜಿಗೆ ಸಿಗದು.

  ಅಂಬೇಡ್ಕರ್ ಬೌದ್ಧ ಧರ್ಮ ಹಾಗೂ ಕಮ್ಯುನಿಸಂ ನಡುವೆ ಆಯ್ಕೆಗೆ ತೂಗುಯ್ಯಾಲೆ ಆಡುತ್ತಾರೆ. ಕೊನೆಗೆ ಬೌದ್ಧ ಧರ್ಮ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಬೇಡ್ಕರ್ ಅವರು ಕಮ್ಯುನಿಸಂ ವಿರೋಧಿಸುತ್ತಾರೆ ಎಂದು ವಾದಿಸುವ ಕಟ್ಟಾ ಕಮ್ಯುನಿಸ್ಟರಿಗೆ ನಾನು ’ಅಲ್ರಪ್ಪಾ, ಮದುವೆಯಾಗಲು ನೂರಾರು ಹೆಣ್ಣುಗಳನ್ನು ನೋಡಿ ಕೊನೆಗೆ ಇಬ್ಬರನ್ನು ಆಯ್ಕೆ ಮಾಡಿ ಅವರ ನಡುವೆ ತುಲನೆ ಮಾಡಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ಅದರ ಅರ್ಥ ಅವರ ದೃಷ್ಟಿಯಲ್ಲಿ ನೀವು ಕಳಪೆ ಅಂತಲ್ಲ, ನೀವು ರನ್ನರ್ ಅಪ್’ ಅಂತ ತಮಾಷೆ ಮಾಡಿದ್ದೆ.


  ಹೆಚ್ಚಿನ ವಿವರಗಳಿಗಾಗಿ
 •  [ಮೇ 2013 ರ ಪ್ರಜಾವಾಣಿಯಲ್ಲಿ ಪ್ರಕಟವಾದ  ಒಂದು ಲೇಖನ]


  ಹೆಚ್ಚಿನ ವಿವರಗಳಿಗಾಗಿ
 • ದೂರದ ಆಸ್ಟ್ರೇಲಿಯಾದ ಭೂಮಿ ತಾಯಿಯ ಚೊಚ್ಚಲ ಮಕ್ಕಳಾದ ಡಾ.ಜ್ಹಾನ್ ಲಿಯಾನ್, ಮೇಲ್ಹಿ ಮಂಕಾರ, ಡಾ.ಡೈಲಾನ್‌ಕೋಲ್ಮನ್ ಹಾಗು ಬ್ರೆಂಟನ್ ಮೆಕೆನ್ನಾ ಈ ನಾಲ್ವರ ಭಾವಚಿತ್ರದೊಡನೆ ನನ್ನ ಭಾವಚಿತ್ರ ಕೂಡ ಒಂದೆಡೆ ಪ್ರಕಟವಾಗಿದೆ. ಇದು ಉದ್ದೇಶಪೂರ್ವಕವೊ, ಆಕಸ್ಮಿಕವೊ ನನಗೆ ಗೊತ್ತಿಲ್ಲ. ಆದರೆ ಇದರಿಂದಾಗಿ ಈ ಚೊಚ್ಚಲ ಮಕ್ಕಳೊಡನೆ ನನಗೂ ಸಂಬಂಧ ಉಂಟಾದಂತಾಗಿ ನಾನು ವಿಸ್ಮಯಗೊಂಡಿದ್ದೇನೆ. ಇದರೊಡನೆ ನೆನಪಾಗುತ್ತಿದೆ – ಕನ್ನಡ ಲೇಖಕ ವಿಕ್ರಂ ವಿಸಾಜಿ ಪಶ್ಚಿಮಬಂಗಾಲದಲ್ಲಿ ಕೆಲದಿನ ಇದ್ದಾಗ ಅಲ್ಲೊಬ್ಬ ಸಂತಾಲ್ ಆದಿವಾಸಿ ಪಂಗಡಕ್ಕೆ ಸೇರಿದ ಯುವಕವಿಯೊಬ್ಬ ಬಂಗಾಳಿ ಭಾಷೆಗೆ ಅನುವಾದವಾಗಿರುವ ನನ್ನ ಪುಟ್ಟಕತೆ ’ಅಮಾಸ’ವನ್ನು ತೋರಿಸಿ ಈ ಕತೆ ಬರೆದವನ ಬಗ್ಗೆ ಹೇಳಿ ಎಂದು ಕೇಳಿದನಂತೆ. ವಿಕ್ರಂ ವಿಸಾಜಿ ನನ್ನ ಬಗೆಗೆ ವಿವರಿಸಿದ ಮೇಲೆ ಆ ಆದಿವಾಸಿ ಹುಡುಗನ ಮುಂದಿನ ಪ್ರಶ್ನೆ: ’ಈ ಕತೆಗಾರ ಆದಿವಾಸಿಯೇ?’ ಅಂತ. ಅದಕ್ಕೆ ವಿಕ್ರಂ – ’ಆದಿವಾಸಿಯಲ್ಲ, ಅಸ್ಪೃಶ ದಲಿತ’ ಇತ್ಯಾದಿ ಹೇಳಿದ ಮೇಲೂ ಆ ಆದಿವಾಸಿ ಹುಡುಗ- ಈ ಮಹಾದೇವ ಆದಿವಾಸಿಯೇ. ಇದನ್ನು ಆದಿವಾಸಿ ಮಾತ್ರ ಬರೆಯಲು ಸಾಧ್ಯ. ಆ ಕತೆ ನನ್ನ ಕತೆಯೇ ಅಂದನಂತೆ. ನನಗೆ ಅದನ್ನು ಕೇಳಿ ಇದು ತರ್ಕಾತೀತ ಕರುಳ ಕಾಣುವಿಕೆ ಇರಬೇಕೇನೋ ಅನಿಸಿತು. ಉಂಟೆ, ಪ್ರಜ್ಞೆಗೂ ಹೊಕ್ಕಳಬಳ್ಳಿ ನಂಟು?


  ಮುಂದೆ ಓದಿ