ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ನಮ್ಮ ಬನವಾಸಿಗೆ ಹತ್ತು ವರ್ಷಗಳಾದ ಸಂದರ್ಭದಲ್ಲಿ[29.12.2024] ದೊರಕಿದ ಫೋಟೋಗಳ ಆಲ್ಬಮ್. ಫೋಟೋಗಳನ್ನು ಹುಡುಕಿ ಕಳಿಸಿದ ಎಲ್ಲಾ ಆತ್ಮೀಯರಿಗೆ ಧನ್ಯವಾದಗಳು… ]
» -
-
[ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಬಾಡೂಟವೂ ಇರಲಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ. ಈ ಬಗ್ಗೆ ಸಾಹಿತಿ ದೇವನೂರು ಮಹಾದೇವ 15.12.2024ರಂದು ಈದಿನ.ಕಾಮ್ ಚಾನೆಲ್ ಗೆ ಆಡಿದ ಮಾತುಗಳು … ]
» -
[ದೇವನೂರ ಮಹಾದೇವ ಅವರಿಗೆ ತಮಿಳನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೌರವ ಉಪಸ್ಥಿತಿಯಲ್ಲಿ 12.12.2024ರಂದು, ವೈಕಂ ಹೋರಾಟದ ನೂರು ವರ್ಷಗಳ ಜ್ಞಾಪಕಾರ್ಥವಾಗಿ ವೈಕಂ ಪ್ರಶಸ್ತಿ ಪ್ರದಾನ ಮಾಡಿದರು. ಫೋಟೋ ಹಾಗೂ ವಿಡಿಯೋ ಕೊಡುಗೆ- ಶ್ರೀ ಶ್ರೀನಿ ]
» -
[ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ ಸಂದ ನಂತರ ಡಿಸೆಂಬರ್ 2024ರ ಕನ್ನಡ ಪ್ಲಾನೆಟ್, ಈ ದಿನ ಹಾಗೂ ಜನಶಕ್ತಿ ಚಾನೆಲ್ ನಲ್ಲಿ ವೈಕಂ ಪ್ರಶಸ್ತಿ ಕುರಿತು ಮಾಹಿತಿ]
» -
(1973ರಲ್ಲಿ ಬರೆದ ಈ ಕತೆಯು, ‘ದ್ಯಾವನೂರು’ ಕಥಾ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ… )
» -
[1970ರಲ್ಲಿ ಬರೆದ ಈ ಕತೆಯು “ದ್ಯಾವನೂರು” ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ…]
» -
-
(1972 ರಲ್ಲಿ ಬರೆದ ಕತೆ. ಮೊದಲಿಗೆ ಸಾಕ್ಷಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ನಂತರ “ದ್ಯಾವನೂರು” ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಸ್ಟೋರಿ ಟೆಲ್ಲರ್ಸ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ… )
» -
1985 ರಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಹೋರಾಟದ ಸಂದರ್ಭದಲ್ಲಿ ಚಳವಳಿ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿದ್ದ ದೇವನೂರ ಮಹಾದೇವರವರ ಜೊತೆಯಲ್ಲಿ ಬೆಟ್ಟಯ್ಯಕೋಟೆ, ಹರಿಹರ ಆನಂದಸ್ವಾಮಿ, ಕೋಟಗಾನಹಳ್ಳಿ ರಾಮಯ್ಯನವರು, ಮುಳ್ಳೂರು ನಾಗರಾಜು, ಸಕಲೇಶಪುರ ಕೇಶವ ಪ್ರಸಾದ್ ಮತ್ತು ದಲಿತ ಸಂಘರ್ಷ ಸಮಿತಿಯ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು.
(ಫೋಟೋವನ್ನು ಹುಡುಕಿ ನೀಡಿದ ಸಹೃದಯರಿಗೆ ಧನ್ಯವಾದಗಳು.)
»