ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
| ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
![]() |
![]() |
![]() |
![]() |
|||
-
[ಆರ್‌ಎಸ್‌ಎಸ್ ಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ 2.10.2025ರಂದು ದೇವನೂರ ಮಹಾದೇವ ಅವರ ಒಂದು ಲೇಖನವು, ಪ್ರಜಾವಾಣಿ ಪತ್ರಿಕೆಯ ಆಳ- ಅಗಲ ವಿಭಾಗದಲ್ಲಿ ಪ್ರಕಟವಾಗಿತ್ತು. ಅದಕ್ಕೆ 11.10.2025ರಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯೆಯಾಗಿ ಪ್ರಜಾವಾಣಿಯಲ್ಲಿ ಲೇಖನವನ್ನು ಬರೆದಿದ್ದರು. ಆ ಲೇಖನದ ಕೆಲ ಆಕ್ಷೇಪಗಳಿಗೆ 18.10.2025ರಂದು ಪ್ರಜಾವಾಣಿಯಲ್ಲಿ ದೇವನೂರರು ಉತ್ತರಿಸಿದ್ದಾರೆ]
» -
[ಆರ್‌ಎಸ್‌ಎಸ್ ಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ 24.9.2025ರಂದು “ಫ್ರಂಟ್ ಲೈನ್-ದಿ ಹಿಂದೂ” ಪತ್ರಿಕೆಯಲ್ಲಿ ಇಂಗ್ಲೀಷ್ ನಲ್ಲಿ ಈ ವಿಶೇಷ ಲೇಖನವು ಪ್ರಕಟವಾಗಿತ್ತು. ಅದರ ಮೂಲ ಕನ್ನಡ ಆವೃತ್ತಿಯು 3.10.2025ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
» -
[ಆರ್ ಎಸ್ ಎಸ್ ಗೆ 100 ವರ್ಷಗಳು ತುಂಬಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರ ಈ ಲೇಖನವು ಫ್ರಂಟ್ ಲೈನ್- ದಿ ಹಿಂದೂ ಪತ್ರಿಕೆಯಲ್ಲಿ 24.9.2025 ರಂದು ಪ್ರಕಟವಾಗಿದೆ. ಈ ಬರಹವನ್ನು ವಿಕಾರ್ ಅಹಮದ್ ಸಯೀದ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. This article by Devanooru Mahadeva on the occasion of RSS’s 100th anniversary was published in Front Line -The Hindu newspaper on 24.9.2025. This article has been translated into English by Vikar Ahmed Sayeed.]
» -
(ಕುಪ್ಪೆ ನಾಗರಾಜ ಅವರು ಸಂಪಾದಿಸಿರುವ 2018ರಲ್ಲಿ ಮೈಸೂರಿನ ಪ್ರೇಮಾ ಪ್ರಕಾಶನದಿಂದ ಪ್ರಕಟವಾದ “ಹಾಡೇ ಬದುಕು” ಎಂಬ ಪುಸ್ತಕದಲ್ಲಿ ದಾಖಲಾದ ದೇವನೂರ ಮಹಾದೇವ ಅವರ ಬರಹ. 2000 ನೆಯ ಇಸವಿಯಲ್ಲಿ ಮೈಸೂರು ಜಿಲ್ಲೆ, ಆನಂದೂರು ಕೊಪ್ಪಲಿನ ಯಾಚೇಗೌಡನಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ “ದೊಂಬಿದಾಸರ ಕ್ಷೇಮಾಭಿವೃದ್ಧಿ ಯುವಕ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ. ಹುಡುಕಿ ಕಳುಹಿಸಿದ ವಿ.ಎಲ್.ನರಸಿಂಹಮೂರ್ತಿ ಅವರಿಗೆ ಧನ್ಯವಾದಗಳು.)
» -
-
[ದೇವನೂರ ಮಹಾದೇವ ಅವರ ಈ ಬರಹ ಮೊದಲು ದಿನಾಂಕ 05/09/1976 ರಂದು ‘ಪಂಚಮ’ ಪಾಕ್ಷಿಕ ಪತ್ರಿಕೆಯಲ್ಲಿ (ಸಂಪುಟ: 01, ಸಂಚಿಕೆ-05, ಪುಟ: 06, 1976, ಸಂಪಾದಕರು: ಇಂದೂಧರ ಹೊನ್ನಾಪುರ) ಪ್ರಕಟಗೊಂಡಿತ್ತು. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು] ಆಮೇಲೆ, ಇದೇ ಬರಹ ಒಂದು ವಾರದ ನಂತರ ಆಂದೋಲನ ಪತ್ರಿಕೆಯಲ್ಲಿ (12/09/1976) ಪ್ರಕಟವಾಗಿದೆ. ಇದನ್ನು ಕಾಪಿಟ್ಟು, ಹುಡುಕಿ ನಮಗೆ ಕಳಿಸಿದ ಪ್ರಸಾದ್ ರಕ್ಷಿದಿಯವರಿಗೆ ನಮ್ಮ ಧನ್ಯವಾದಗಳು.]
» -
[ಕುಸುಮಬಾಲೆ ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಪಂಚಮ, ಸುದ್ದಿ ಸಂಗಾತಿ, ಆಂದೋಲನ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅದರ ಭಾಗಗಳು ಧಾರಾವಾಹಿಯಾಗಿ ಬಂದಿತ್ತು. ಇಲ್ಲಿರುವ ಭಾಗದ ಕೃಪೆ: -‘ಪಂಚಮ’ (ಸಂಪುಟ: 08, ಸಂಚಿಕೆ: 19, ಅಕ್ಟೋಬರ್ 05, 1984) ಇದನ್ನು ಹುಡುಕಿ ನಮಗೆ ಕಳಿಸಿದ ಉಪನ್ಯಾಸಕರಾದ ಆರ್.ಶ್ರೀಧರ್ ಅವರಿಗೆ ಧನ್ಯವಾದಗಳು]
» -
[ಕೃಪೆ: -‘ಶೋಷಿತ’ (ಸಂಚಿಕೆ: 02, ಪುಟ: 04, ಡಿಸೆಂಬರ್ 21, 1975) ಸಂಪಾದಕರು: ಇಂದೂಧರ ಹೊನ್ನಾಪುರ. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಶೋಷಿತ, (ಸಂಚಿಕೆ-03, ಪುಟ: 08, ಫೆಬ್ರುವರಿ, 1976) ಪತ್ರಿಕೆಯ ಸಂಪಾದಕರು: -ಇಂದೂಧರ ಹೊನ್ನಾಪುರ ಅವರಾಗಿದ್ದು, ದೇವನೂರ ಮಹಾದೇವ ಅವರ ” ಜೀತ ಬಿಡುಗಡೆಯಲ್ಲಿ ಬಿದ್ದ ಕನಸು” ಲೇಖನವು ಅಲ್ಲ ಮೊದಲ ಬಾರಿ ಪ್ರಕಟವಾಗಿತ್ತು. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ಈ ಟಿಪ್ಪಣಿಯ ಪರಿಷ್ಕೃತ ರೂಪವಿದೆ. ಇದು 1989ರಲ್ಲಿ ದೇವನೂರ ಮಹಾದೇವ ಅವರು ಅಮೇರಿಕದ ಅಯೋವಾದಲ್ಲಿ ನಡೆದ ‘ಅಂತರರಾಷ್ಟ್ರೀಯ ಬರಹಗಾರರ ಕಾರ್ಯಕ್ರಮ’ಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿದ್ಧಪಡಿಸಿದ್ದಂತಹ ಟಿಪ್ಪಣಿ. ಈ ಟಿಪ್ಪಣಿಯ ಕನ್ನಡ ಅವತರಣಿಕೆ ‘ಸಂವಾದ’ ದ್ವಿ-ಮಾಸಿಕ ಪತ್ರಿಕೆಯಲ್ಲಿ (ಸಂಚಿಕೆ- 14, ಮಾರ್ಚ್-ಏಪ್ರಿಲ್, 1990) ಪ್ರಕಟಗೊಂಡಿದೆ. ಬರಹವನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
»



