ಸಿಪಿಐಎಂ ಹಮ್ಮಿಕೊಂಡಿರುವ ಸೌಹಾರ್ದ ರ‌್ಯಾಲಿಗೆ ಬೆಂಬಲ-ದೇವನೂರು ಮಹಾದೇವ

pinarai

 

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುತ್ತಿರುವುದು ಸೌಹಾರ್ದ ರ್ಯಾಲಿಗಾಗಿ. ಸೌಹಾರ್ದ ರ್ಯಾಲಿಗೆ ಜಗತ್ತಿನ ಯಾವ ಮೂಲೆಯಿಂದ ಬಂದರೂ ಸ್ವಾಗತಿಸಬೇಕು. ಬೇರೆ ಗ್ರಹದಿಂದ ಬಂದರೂ ಗೌರವಿಸಬೇಕು. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಶ್ರೀ ರಾಮ ಸೇನೆ ಮೊದಲಾದವು ಇದನ್ನು ವಿರೋಧಿಸಿ ಪ್ರತಿಭಟನೆ ಮಾಡ್ತಿವೆ ಅಂತ ಕೇಳಿದೆ. ಹಾಗಾದರೆ ಅವರಿಗೆ ಸೌಹಾರ್ದ ಬೇಡವೆ ಅಂತ ನಾವು, ಜನಸಾಮಾನ್ಯರು ಪ್ರಶ್ನಿಸಬೇಕು. ದ್ವೇಷವೇ ನಿಮಗೆ ಆಹಾರವಾ ಅಂತ ಕೇಳಬೇಕು.
ಈ ಸೌಹಾರ್ದ ರ್ಯಾಲಿಯನ್ನು ಎಲ್ಲ ಜಾತಿ, ವರ್ಗ, ಧರ್ಮದವರೂ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ. ಇವತ್ತು ದ್ವೇಷ ಕಮ್ಮಿಯಾಗಿ ಸೌಹಾರ್ದತೆ ಹೆಚ್ಚಬೇಕಾದ ಅಗತ್ಯವಿದೆ. ಅಸಹನೆ ಕಮ್ಮಿಯಾಗಿ ಸಹನೆ ಹೆಚ್ಚಬೇಕಾದ ಅಗತ್ಯವಿದೆ.
ಪಿಣರಾಯಿ ವಿಜಯನ್ ತಳ ಸಮುದಾಯದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಂದವರು. ಅವರು ಬಿಲ್ಲವ ಸಮುದಾಯದವರು. ಇದನ್ನು ನಾವು ಸೆಲೆಬ್ರೇಟ್ ಮಾಡಬೇಕು.
ಸಿಪಿಐಎಮ್ ಕಚೇರಿ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆಂಬ ಸುದ್ದಿ ಕೇಳಿದೆ. ಇದನ್ನು ಎಲ್ಲರೂ ಪ್ರತಿಭಟಿಸಬೇಕೆಂದು ನಾನು ವಿನಂತಿಸುತ್ತೇನೆ. ಹಾಗೆಯೇ ಸಿಪಿಐಎಮ್ ಕಾರ್ಯಕರ್ತರಲ್ಲೂ ಒಂದು ವಿನಂತಿಯಿದೆ. ಪ್ರತಿಕ್ರಿಯಾತ್ಮಕವಾಗಿ ಅವರು ಕೂಡ ಅಂಥದನ್ನು ಮಾಡದೆ ಸಹನೆ, ವಿವೇಕ, ಸಂಯಮ ತೋರಿ ಮಾರ್ಗದರ್ಶಿಯಾಗಿ ವರ್ತಿಸಲಿ ಎಂದು.

~ ದೇವನೂರ ಮಹಾದೇವ; ಜನಾಂದೋಲನಗಳ ಮಹಾಮೈತ್ರಿ