ಸವದತ್ತಿಯಲ್ಲಿ ಜೋತಿಷ್ಯ ಹೇಳಲು ಬಂದ ಜೋಗತಿಯೊಂದಿಗೆ….

ಸವದತ್ತಿಯಲ್ಲಿ ಜೋತಿಷ್ಯ ಹೇಳಲು ಬಂದ ಜೋಗತಿಯೊಂದಿಗೆ ಸಂಭಾಷಣೆಯಲ್ಲಿ ದೇವನೂರ ಮಹಾದೇವ ಅವರು … . ಶಂಕರ ಹಲಗತ್ತಿ ಅವರ ಮೊಬೈಲ್ ನಲ್ಲಿ ಹೀಗೆ ಸೆರೆ ಸಿಕ್ಕಿದ್ದಾರೆ.

2015ರ ಫೆಬ್ರವರಿ 21ರಂದು ಸವದತ್ತಿಗೆ ಭೇಟಿ ನೀಡಿ ಎಲ್ಲಮ್ಮನ ದೇವಸ್ಥಾನ ನೋಡಿ ಹೊರ ಬರುವಾಗ 4-5  ಜೋಗತಿಯರು  ಹಡ್ಡಲಿಗಿ ಹಿಡಿದು ದೇವನೂರರನ್ನು ಬೇಡಿಕೊಂಡರು. ಅವರಿಗೆ ಹತ್ತತ್ತು ರೂಪಾಯಿ ಕೊಟ್ಟ ನಂತರ ಕೊನೆಗೆ ಬಂದ ಈ ಹೆಣ್ಣುಮಗಳಿಗೆ 100 ರೂಪಾಯಿ ಹಾಕಿ ‘ಈ ಹಣವನ್ನು ಏನು ಮಾಡುತ್ತಿಯ!’ ಎಂದು ಕೇಳಿದರು.’ನಿಮ್ಮ ಭವಿಷ್ಯ ಹೇಳಿ ನಿಮ್ಮ ಹೆಸರಿನಲ್ಲಿ ಎಲ್ಲಮ್ಮನಿಗೆ ಎಣ್ಣೆ-ದೀಪ ಹಾಕುತ್ತೇನೆ’ ಎಂದಳು. ‘ದೇವಿಗೆ ಎಣ್ಣೆ ಬೇಡ ನಿನ್ನ ಮಕ್ಕಳಿಗೆ ಓದಲಿಕ್ಕೆ ಬೇಕಾಗುವ ಪುಸ್ತಕಗಳನ್ನು ಕೊಡಿಸು’ ಎಂದು ತಿಳಿ ಹೇಳಿದರು. ವಾಪಸು ಬರುವಾಗ  ”ಇವರೆಲ್ಲ ನಮ್ಮ ಬಂಧುಗಳು ಎನ್ನಿಸುತ್ತಾರೆ” ಎಂದು ಮಹಾದೇವ ಉದ್ಘರಿಸಿದರು! [ವಿವರಣೆ -ಶಂಕರ ಹಲಗತ್ತಿ]