ಸರ್ಕಾರಗಳು ಬರದಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಮುಂದೆ ಬರುತ್ತಿಲ್ಲ-ದೇವನೂರ ಮಹಾದೇವ

                                                            devanur belagam
ಬೆಳಗಾವಿ: ‘ಬರ ಎನ್ನುವುದು ಅಪಘಾತವಿದ್ದಂತೆ. ಅಪಘಾತ ಸಂಭವಿಸಿದ ತಕ್ಷಣ ಅಕ್ಕಪಕ್ಕದಲ್ಲಿ ಇದ್ದವರು ಗಾಯಗೊಂಡವರ ಬಾಯಿಗೆ ನೀರು ಹಾಕಬೇಕು. ಆದರೆ, ಈಗ ಆಗುತ್ತಿರುವುದು ಏನು? ಮೊದಲು ನೀನು ಹಾಕು, ಮೊದಲು ನೀನು ಹಾಕು ಎನ್ನುತ್ತಾ ಕಾಲಹರಣದಲ್ಲಿ ತೊಡಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರದಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಮುಂದೆ ಬರುತ್ತಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಆರೋಪಿಸಿದರು.
‘ರಾಜ್ಯದಲ್ಲೀಗ ಭೀಕರ ಬರ ಪರಿಸ್ಥಿತಿ ಇದೆ. ಬರದಿಂದ ಮನುಷ್ಯ, ಕೃಷಿ, ನಿಸರ್ಗ, ಪ್ರಾಣಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಬಂಡವಾಳಶಾಹಿಗಳು ಪರಿಸರ ನಾಶ ಮಾಡಿದ್ದೆ ಬರಕ್ಕೆ ಮೂಲ ಕಾರಣ .  ನೋಟುಗಳ ರದ್ಧತಿಯಿಂದ ದೇಶದ ಪರಿಸ್ಥಿತಿ ಬದಲಾಗಿದೆ. ಇಯರಿಂದ ಹಲವರು ನಷ್ಟಕ್ಕೀಡಾಗಿದ್ದಾರೆ. ನೆರೆ-ಬರದ ಸಂದರ್ಭದಲ್ಲಿ ಇದೊಂದು ಬರೆಯಾಗಿದೆ.  ಇಂತಹ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಲು ಎರಡೂ ಸರ್ಕಾರಗಳೂ ಮುಂದೆ ಬರುತ್ತಿಲ್ಲ. ‘ರೈತರ ಸಾಲ ಮನ್ನಾ ಮಾಡಲು ಹಿಂದೆ–ಮುಂದೆ ನೋಡುತ್ತಿರುವ ಕೇಂದ್ರ ಸರ್ಕಾರ, ಅಂಬಾನಿ, ಅದಾನಿಯಂತಹ  ಉದ್ಯಮಿಗಳ  1.14 ಲಕ್ಷ ಕೋಟಿ ಸಾಲವನ್ನು ಹೇಗೆ ಮನ್ನಾ ಮಾಡಿತು? ಇದು ದೇಶದ್ರೋಹದ ಕೆಲಸ. ಸಾರ್ವಜನಿಕ ಸಂಪತ್ತನ್ನು ಕೆಲವೇ ಖಾಸಗಿ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದರೆ, ಸರ್ಕಾರಗಳು ಅದನ್ನು ನೋಡಿಕೊಂಡು ಸುಮ್ಮನೆ ಕುಳಿತಿವೆ.  ದೇಶದ ದುಡಿಯುವ ಸಮುದಾಯವನ್ನು, ಅನ್ನ ಕೊಡುವ ರೈತನನ್ನು ನಿರ್ಲಕ್ಷಿಸುತ್ತಿರುವುದು ಅತ್ಯಂತ ಖಂಡನೀಯ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
                                            belgam 1
ಇಂದು ಭೂಮಿ ಅಕ್ಷಯಪಾತ್ರೆಯಾಗಿ ಉಳಿದಿಲ್ಲ. ಆಹಾರ ಉತ್ಪಾದನೆಯ ಭೂಮಿ ಕುಸಿತವಾಗುತ್ತಿದ್ದು, ಅದರತ್ತ ಹೆಚ್ಚು ಆದ್ಯತೆ ನೀಡುವ ಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕು. ಮನುಷ್ಯನ ದುರಾಸೆಯಿಂದ ಭೂಮಿ ವಿಷಯುಕ್ತವಾಗಿದ್ದು ಕೃಷಿಗೆ ಅವನತಿ ಬಂದೊದಗಿದೆ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಕೃಷಿ ಭೂಮಿ ವಿಷಯುಕ್ತವಾಗಿದೆ. ಇನ್ನು ಕಾರ್ಪೊರೇಟ್ ಕಂಪನಿಗಳಿಗೆ ವ್ಯಾಪಕ ಪ್ರಮಾಣದ ಭೂಮಿ ನೀಡುವುದರಿಂದ ಸಹ ಸಮಸ್ಯೆ ಉದ್ಭವಿಸಿದೆ.ಇನ್ನು ಮುಂದೆ ಬಡವರಿರಲಿ, ಶ್ರೀಮಂತರಿರಲಿ ಯಾರಿಗೂ ಭೂಮಿ ನೀಡುವುದಾದರೆ ಕೇವಲ ಲೀಸ್ ಆಧಾರದಲ್ಲಿ ಕೊಡಬೇಕು. ನಿರ್ಧಿಷ್ಟ ಉದ್ದೇಶಕ್ಕೆ ಅದು ಬಳಕೆಯಾಗದಿದ್ದರೆ ಸರಕಾರ ಅದನ್ನು ಮರಳಿ ಪಡೆಯಬೇಕು. ಇನ್ನು ದೇಶದಲ್ಲಿ ಕೃಷಿ ಕಾರ್ಪೊರೇಟ್ ವ್ಯವಸ್ಥೆ ಹುಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಇಂದಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಸರ್ಕಾರಗಳು ಭೂಮಿಯ ಫಲವತ್ತತೆ ಹೆಚ್ಚಿಸಲು, ಅಂತರ್ಜಲಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದರು.
                       belgam 2
ರೈತರು, ಕೃಷಿ ಕಾರ್ಮಿಕರ ಮತ್ತು ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನಿಗದಿಪಡಿಸಬೇಕು ಹಾಗೂ ಬರ ನಿರ್ವಹಣೆ ಮಾಡಲು ಪ್ಯಾಕೇಜ್‌ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು, ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅಧಿವೇಶನದಲ್ಲಿ  ಮಂಡಿಸಲಿರುವ ಖಾಸಗಿ ನಿರ್ಣಯಕ್ಕೆ ಎಲ್ಲ ಸದಸ್ಯರು ಬೆಂಬಲ ನೀಡಬೇಕೆಂದು ಜನಾಂದೋಲನಗಳ ಮಹಾಮೈತ್ರಿಯ ಪರವಾಗಿ ಒತ್ತಾಯಿಸಿದರು.

Janandolanagala Mahamaitri seeks special package to tackle drought

[Ministers Kagodu Thimmappa and Ramesh Kumar meeting freedom fighter H.S. Doreswamy at the site of the agitation in Belagavi on Tuesday. They invited him for talks with the Chief Minister.]

                               ‘Waive all crop loans and rehabilitate chronically drought-prone taluks’

Janandolanagala Mahamaitri, an outfit representing several progressive and social organisations in Belagavi, demanded that the government waive all outstanding crop loans and announce a special package on the lines of the Vidarbha package of Maharashtra to rehabilitate chronically drought-prone taluks in the State.

The mahamaitri also demanded that both the ruling and Opposition parties support the private bill on farm issues to be moved by K.S. Puttannaiah, MLA, during the winter session of the legislature here.

The State Cabinet, which is scheduled to meet on Wednesday morning, must take up these demands along with granting ownership rights to tillers cultivating forest land since decades and housing for all homeless families and make a categorical announcement of its stand on these issues before adjourning the session sine die, mahamaitri leaders, including writer Devanur Mahadev, Raghavendra Kushtagi, S.R. Hiremath, Ravi Krishna Reddy and Vasu, said at a press conference here on Tuesday.

Dr. Vasu said that 86 taluks in the State have been facing drought conditions in varying degrees for the past 11 years and they need a permanent rehabilitation package, much better than the Vidarbha package.

Mr. Mahadev also suggested that the government to take a policy decision to ensure that no land acquired from farmers was handed over on ownership basis but only on lease basis so as to restore its ownership with the government once the purpose and period of the term of the lease was over.

“The main reason behind droughts, lack of housing and land for cultivators, groundwater and air pollution, etc., was because of the ever increasing greed of the corporate sector; we need to stop this by ensuring that agricultural and forest land remain for cultivation and for forest purposes only,” he said.

Mr. Mahadev and Mr. Hiremath, quoting a report in a national English newspaper, pointed out that the government had unconditionally written off 1.14 lakh crore of corporate loans.

Further, Mr. Mahadev said, the big corporate houses had accumulated huge non-performing assets (NPA), for instance the Ambanis’ NPA accounted for Rs. 1.04 lakh crore, the Adani group Rs. 96,000 crore and other corporate houses owed around Rs. 1 lakh crore.

When the government was sympathetic with these corporate houses, why not with farmers who are asking for a meagre amount in the form of waiver of their small loans due to successive spells of natural calamities such as droughts and excessive rainfall/floods, they added.

Earlier, the mahamaitri leaders participated in the ongoing agitation led by veteran freedom fighter H.S. Dorewswamy near the Suvarna Vidhana Soudha, where Revenue Minister Kagodu Thimmappa and Health and Family Welfare Minister Ramesh Kumar visited and invited them for talks with Chief Minister Siddaramaiah at the Suvarna Vidhana Soudha later during the day.