ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಚರ್ಚೆಯ ಸಂದರ್ಭದಲ್ಲಿ…….ದೇವನೂರ ಮಹಾದೇವ
ಇಂಥ ಚರ್ಚೆಗಳಲ್ಲಿ ಸತ್ಯ ಮುಂದಿಟ್ಟುಕೊಂಡು ಅದರ ಹಿಂದೆ ನಾವಿರಬೇಕು; ಸತ್ಯ ಬೆನ್ನ ಹಿಂದೆ ಬಿಟ್ಟುಕೊಂಡು ನಾವು ವಿಜೃಂಭಿಸುವುದು ಬೇಡ. ಎದುರಿಗಿರುವವನು ಎಂಥ ತಪ್ಪೇ ಮಾಡಿದ್ದರೂ ಆತನೆಡೆಗೊಂದು ಸಹಾನುಭೂತಿ ಇರಲಿ.
[ದೇಶಕಾಲ’ ತ್ರೈಮಾಸಿಕದ ವಿಶೇಷಾಂಕ ಕುರಿತು ‘ಗೌರಿ ಲಂಕೇಶ್’ ಪತ್ರಿಕೆಯಲ್ಲಿ, 2011ರಲ್ಲಿ ನಡೆದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಚರ್ಚೆಯ ಸಂದರ್ಭದಲ್ಲಿ ಇವು ದೇವನೂರ ಮಹಾದೇವ ಅವರು ಆಡಿದ ಮಾತುಗಳು. ಇದು ಮಂಜುನಾಥ್ ಲತಾ, ಚಂದ್ರಶೇಖರ ಐಜೂರ್ ಅವರು ಸಂಪಾದಿಸಿರುವ”ದೇಶವಿದೇನಹಾ! ಕಾಲ ವಿದೇನಹಾ!!” ಎಂಬ ಕೃತಿಯಲ್ಲಿ ದಾಖಲಾಗಿದೆ. ]