ರೋಹಿತ್ ವೇಮುಲ ಆತ್ಮಹತ್ಯೆ ಕುರಿತು-ದೇವನೂರ ಮಹಾದೇವ

rohithದೇಶದಲ್ಲಿರುವ ಕುಹಕದ ವಾತಾವರಣಕ್ಕೆ ವೇಮುಲ ಬಲಿಯಾಗಿದ್ದಾನೆ. ಸಂವೇದನಾಶೀಲತೆ ಹೊಂದಿದ್ದ ರೋಹಿತ್ ಜಾತಿ,ಭೇದ ಮಾಡುವವರಿಂದ ನೊಂದು ಸಾವಿಗೆ ಶರಣಾಗಿದ್ದಾನೆ. ಡೆತ್ ನೋಟ್ ನಲ್ಲಿ ಆತನ ಸಂವೇದನಾಶೀಲತೆಯನ್ನು ಗ್ರಹಿಸಬಹುದು. ದೇಶದಲ್ಲಿ ಸಾಕಷ್ಟು ಜನ ಒಳ್ಳೆಯ ಮಾತುಗಳನ್ನಾಡುತ್ತಾರೆ. ಆದರೆ ವತಱನೆಯಲ್ಲಿ ಮಾತ್ರ ಕುಹಕವನ್ನು ತೋರುತ್ತಾರೆ. ಅಂಬೇಡ್ಕರ್ ಪಟ್ಟಷ್ಟು ಅವಮಾನ, ಕಷ್ಟದಲ್ಲಿ ಶೇ 10ರಷ್ಟನ್ನು ನಾವು ಯಾರೂ ಅನುಭವಿಸಿಲ್ಲ. ಅದನ್ನು ದೇಶದ ಸಂವೇದನಾಶೀಲ ಯುವಕರು ಅರಿತು ಸಹನೆಯಿಂದ ಬದುಕಬೇಕು.”

-ದೇವನೂರ ಮಹಾದೇವ