ಮೈಸೂರಿನ ಚಿಣ್ಣರ ಮೇಳದ ಮಕ್ಕಳ ಜಾಗೃತಿ ಜಾಥಾಕ್ಕೆ ಚಾಲನೆಯ ಚಿತ್ರಗಳು

4.5.2015 ರಂದು ಮೈಸೂರಿನ ರಂಗಾಯಣದ ಚಿಣ್ಣರ ಮೇಳದ ಮಕ್ಕಳು ನಡೆಸಿದ ಜಾಗೃತಿ  ಜಾಥಾಕ್ಕೆ  ದೇವನೂರ ಮಹಾದೇವ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಮರನಾಥ್, ರಂಗಾಯಣ ನಿರ್ದೇಶಕ ಹೆಚ್. ಜನಾರ್ಧನ್, ಡಾ. ಮಿತಾ ದೇವನೂರು, ಮೊಮ್ಮಗಳು ರುಹಾನಿ ಮತ್ತು ಚಿಣ್ಣರ ಮೇಳದ ಮಕ್ಕಳಿರುವ ಚಿತ್ರಗಳು ಮತ್ತು ಆ ಸಂಧರ್ಭದಲ್ಲಿ ದೇವನೂರರು ಆಡಿದ ಮಾತುಗಳು.

”ನೊಂದವರಿಗಾಗಿ ಪುಟ್ಟ ಪಾದಗಳ ನಡಿಗೆ” 
”ನೇಪಾಳ ದುರಂತಕ್ಕೆ ಅತ್ಯಂತ ಮಾನವೀಯ ಸ್ಪಂದನೆಯ ಜೀವಂತ ಪ್ರತಿಕ್ರಿಯೆ ಈ ಎಳೆಯ ಮಕ್ಕಳ ಜಾಥಾ. ಸಾರ್ವಜನಿಕರು ಈ ಮಕ್ಕಳ ಮನದ ಆಶಯಕ್ಕೆ ಪೂರಕವಾಗಿ ನೇಪಾಳಕ್ಕೆ ಸಹಾಯ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ. ಪುಟ್ಟ ಪಾದಗಳು ನೊಂದವರ ನೋವನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ನಡಿಗೆ ಹೊರಟಿದ್ದಾರೆ. ಇದು ಎಲ್ಲರಿಗೂ ಪ್ರೇರಣೆಯಾಗಲಿ. ಕರ್ನಾಟಕಕ್ಕೂ ಕಟ್ಮಂಡುವಿಗೂ ಕರುಳಬಳ್ಳಿಯ ಸಂಬಂಧವಿದೆ. ಅದು ಸಹಾಯ ನೀಡಲು ಉತ್ತೇಜನವಾಗಬೇಕಿದೆ.”

ಆಂದೋಲನ ವರದಿ  5.5.2015