ನಾಗತಿಹಳ್ಳಿ ರಮೇಶರ ಸಮುದ್ರ ಮತ್ತು ಮಳೆ ಕವನ ಸಂಕಲನಕ್ಕೆ ದೇವನೂರ ಮಹಾದೇವ ಬೆನ್ನುಡಿ
ನಾಗತಿಹಳ್ಳಿ ರಮೇಶರ ನಡೆ ನುಡಿ ಕವಿತೆ ಕಂಡಾಗಲೆಲ್ಲ ಈತ ವಿಮಾನದಲ್ಲಿ ಹಾರಾಡುವಾಗಲೂ ಕೂಡ ಹೆತ್ತು ಹೊತ್ತವರನ್ನು ಸಾಕಿ ಸಲಹಿದವರನ್ನು ನೊಂದು ಬೆಂದವರನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಸದಾ ಓಡಾಡುತ್ತಿರುವಂತೆ ಕಾಣುತ್ತಿದೆ. ಈ ಒಡಲೊಳಗೆ ಇನ್ನೂ ಜೀವಂತವಿರುವ ಆ ನೋವು -ನಲಿವುಗಳು ಕಾವ್ಯವಾಗಿ ಇಣುಕಿ ನೋಡುವಂತೆ ಇಲ್ಲಿನ ಪದ್ಯಗಳಿವೆ.