ದ್ಯಾವನೂರು ಮಹಾದೇವ- ಎಚ್.ಆರ್.ರಮೇಶ
ದ್ಯಾವನೂರು ಮಹಾದೇವ
“ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯ”
– ಅಲ್ಲಮ ಪ್ರಭು
ಮಾರಿ ಹಬ್ಬದ ಬಾಡು
ನಡು ಮನೆಯ ದೆಬ್ಬೆಯ ಮೇಲೆ
ನಾರುತ, ನೇತಾಡುತ….
ಹಸಿರು ನೊಣಗಳು ಕತ್ತಲಲಿ ಮುಖ
ಮುಖಕೆ ಬಡಿಯುತಿರಲು….
ಕೋಳಿ ಸಾರಿನ ಕೈ
ನವಿಲ ಚಿತ್ರದಲಿ
ದಿಬ್ಬಣದ ಚಿತ್ರಗಳನೂ ಬಿಡಿಸಿ
ಚಪ್ಪರದ ಮೇಲಿನ
ಹೂವುಗಳ ಬಿಡಿಸುವಾಗ….
ಪಕ್ಕದ ಸಂದಿಯಲಿ ಹರೆಯ
ಯುವತಿಯ ಕೈ ಮೇಲೆ
ಏಳು ಸೂಜಿಯಲಿ ಅಜ್ಜಿ ಹೂವುಗಳ
ಅಚ್ಚೆ ಹೊಯ್ಯುತ್ತಿದ್ದಳು.
ಹೂವುಗಳ ಬಿಡುಸುವುದ ಬಿಟ್ಟ
ಮಹಾದೇವ.