ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತ ವಿಶೇಷ ಸಂಚಿಕೆ “ಯಾರ ಜಪ್ತಿಗೂ ಸಿಗದ ನವಿಲುಗಳು”

ಅಭಿನವ ಪ್ರಕಾಶನದಿಂದ 1999ರಲ್ಲಿ ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತ ವಿಶೇಷ ಸಂಚಿಕೆ “ಯಾರ ಜಪ್ತಿಗೂ ಸಿಗದ ನವಿಲುಗಳು” ಪ್ರಕಟವಾಗಿದೆ. ಅದರ ಪರಿಷ್ಕೃತ ಮುದ್ರಣ 2013ರಲ್ಲಿ ಪ್ರಕಟವಾಗಿದ್ದು ಇದರಲ್ಲಿ ಮಹಾದೇವರ ಸಾಹಿತ್ಯ ಕೃತಿಗಳ ಕುರಿತು ವಿಭಿನ್ನ ಬರಹಗಾರರು ಹಂಚಿಕೊಂಡ ಬರಹಗಳಿವೆ. ಸಂಚಿಕೆ ಬೇಕಿದ್ದವರು… ಅಭಿನವ, 7/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040 ಸಂಪರ್ಕಿಸಬಹುದು.