ದೇಮ ತಾತನೂ ಮೊಮ್ಮಗಳು ರುಹಾನಿಯೂ…

ದೇವನೂರ ಮಹಾದೇವ ಅವರ ಮೊಮ್ಮಗಳು ಪುಟಾಣಿ ರುಹಾನಿಗೆ ತಾತನೆಂದರೆ ಅಚ್ಚುಮೆಚ್ಚು! ಹಾಗೇ ತಾತನಿಗೂ ಇವಳೆಂದರೆ ಪ್ರಿಯ. ಅವರೊಡನೆ ಅಕ್ಕರೆಯಿಂದ ಒಡನಾಡುತ್ತಲೇ, ಅರಿವಿಲ್ಲದೇ ಅವರನ್ನೇ ಅನುಸರಿಸುತ್ತಾ, ಅನುಕರಿಸುತ್ತಿರುತ್ತಾಳೆ ರುಹಾನಿ. ಈ ಬಾರಿ, ನಮ್ಮ ಬನವಾಸಿಯ ಆರನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ ತಾತನೊಡನೆ ರುಹಾನಿಯ ಆಪ್ತ ಕ್ಷಣಗಳು, ಅವಳು ಸೆರೆ ಹಿಡಿದ ತಾತನ ಆಪ್ತ ಚಿತ್ರಗಳು, ತಾತನ ಕುರಿತ ಅಭಿಮಾನದ ಅವಳದೇ ಮುದ್ದು ವಿವರಣೆಯೊಂದಿಗೆ ಕೊಲಾಜ್ ರೂಪದಲ್ಲಿ ನಮ್ಮ ಮುಂದಿದೆ. ಹೀಗಿದನ್ನು ನಮಗೆ ಆಕರ್ಷಕವಾಗಿ ಸಮ್ಮಿಲನಗೊಳಿಸಿಕೊಟ್ಟಿದ್ದು ಏಳನೆ ತರಗತಿ ಓದುತ್ತಿರುವ ಮತ್ತೋರ್ವ ಪುಟಾಣಿ ಚಿಕ್ಕಮಗಳೂರಿನ ಶ್ರಾವಣಿ! ನಮ್ಮ ಬನವಾಸಿ ತಂಡದ ಮನವಿಯ ಮೇರೆಗೆ ಪ್ರೀತಿಯಿಂದ, ಆದರೆ ಸಂಕೋಚದಿಂದಲೇ ಈ ಕೆಲಸಕ್ಕೆ ಬೆಂಬಲ ನೀಡಿದ್ದು ಮಹಾದೇವರ ಎರಡನೆಯ ಮಗಳು ಡಾ.ಮಿತಾ ಮತ್ತು ಅಳಿಯ ಅವಿನಾಶ್.  ಹೀಗೆ ನಮ್ಮ ಬನವಾಸಿ ತಾಣವನ್ನು ಚೆಂದಗೊಳಿಸಲು ಸಹಕರಿಸುತ್ತಿರುವ ಎಲ್ಲ ಆಪ್ತ ಜೀವಗಳಿಗೂ ತಂಡದ ನನ್ನಿ. – ಬನವಾಸಿಗರು