ಡಾ.ಜೋಗನ್ ಶಂಕರ್ ಅವರ ಗ್ರಾಮ ಸಮಾಜ ಕೃತಿಗೆ ದೇವನೂರರ ಬೆನ್ನುಡಿ

gramaswaraj1                                                                                gramaswaraj2

 

 

 

ಸಮಾಜಶಾಸ್ತ್ರಜ್ಞರಾದ ಡಾ.ಜೋಗನ್ ಶಂಕರ್ ಅವರು ತಮ್ಮ ಬೆಚ್ಚಗಿನ ಅಂತಃಕರಣದಿಂದಾಗಿ ನಮ್ಮನ್ನೂ ಸಮಾಜವನ್ನೂ ಕರುಳಬಳ್ಳಿ ಸಂಬಂಧದೋಪಾದಿಯಲ್ಲಿ ಮುಟ್ಟುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಗೊಡ್ಡಾಗಿರುವ ಶಾಸ್ತ್ರವಿಜ್ಞಾನ ಕಳಕಳಿ ಅಂತಃಕರಣವನ್ನೂ ಬರೇ ಸ್ಪೋಟವಾಗಬಹುದಾದ ಕಳಕಳಿ ಅಂತಃಕರಣಗಳಿಗೆ ಶಾಸ್ತ್ರೀಯ ಚೌಕಟ್ಟನ್ನು ಏಕೀಭವಿಸಿ ನೀಡುವ ಸಾಮರ್ಥ್ಯಕ್ಕೆ ಅವರ ಕೃತಿಗಳು ಉದಾಹರಣೆಯಾಗಿವೆ.