ಜೆರಿಮಿ ಸೀಬ್ರೂಕ್ ಅವರು ಓದುತ್ತಿರುವ ಮಹಾದೇವರ ಇಂಗ್ಲಿಷ್ ಅನುವಾದಿತ ”ಕುಸುಮಬಾಲೆ’

ಜೆರಿಮಿ ಸೀಬ್ರೂಕ್ ಲಂಡನ್ ನ ಖ್ಯಾತ ಚಿಂತಕ, ಲೇಖಕ, ಪತ್ರಕರ್ತ ಮತ್ತು ನಾಟಕಕಾರ. ಇವರು ಸಮಾಜ, ಪರಿಸರ ಮತ್ತು ಅಭಿವೃದ್ಧಿಯ ಪರಿಕಲ್ಪನೆಗಳನ್ನು ಏಕಸೂತ್ರದಲ್ಲಿ ಹಿಡಿದು ವಿಶ್ಲೇಷಿಸುವ ಅಪರೂಪದ ಚಿಂತಕ. ಇವರ ಚಿಂತನೆಗಳು ದೇವನೂರ ಮಹಾದೇವ ಅವರಿಗೆ ಪ್ರಿಯವಾದುವು. ಏಪ್ರಿಲ್ 11 ರಂದು ಉತ್ತರ ಲಂಡನ್ ನ musewell hill ನ ಅವರ ಮನೆಯಲ್ಲಿ ಅವರನ್ನು ಭೇಟಿಯಾದ ಸುಗತ ಶ್ರೀನಿವಾಸರಾಜು ಅವರು ಇತ್ತೀಚಿಗೆ ಇಂಗ್ಲಿಷ್ ಗೆ ಅನುವಾದಗೊಂಡಿರುವ ಕುಸುಮಬಾಲೆಯನ್ನು ಅವರಿಗೆ ನೀಡಿದರು. ಜೆರಿಮಿ ಸೀಬ್ರೂಕ್ ಅವರು ಪುಸ್ತಕ ನೋಡಿ ಸಂಭ್ರಮಿಸಿದ ಆ ಕ್ಷಣದ ಛಾಯಾಚಿತ್ರಗಳನ್ನು ಕಳುಹಿಸಿರುವ ಸುಗತ ಶ್ರೀನಿವಾಸರಾಜು ಅವರಿಗೆ ಬನವಾಸಿಗರ ವಂದನೆಗಳು.