ಕುಸುಮಬಾಲೆ: ದಲಿತರ ನೇಣುಗಂಬ-ಮುಳ್ಳೂರು ನಾಗರಾಜ

kusumabale_cover

 

ಕರ್ನಾಟಕದಲ್ಲಿ ಯಾರಿಗೂ ಅರ್ಥವಾಗದ ‘ಕುಸಮಬಾಲೆ’ ನನಗೆ ಅರ್ಥವಾಗಿದೆ. ಕಾವ್ಯಾತ್ಮಕ ಲಾಲಿತ್ಯದಿಂದ ಕೂಡಿದ ಆ ಕಾದಂಬರಿ ದಲಿತ ಮತ್ತು ದಲಿತ  ಸಂಸ್ಕೃತಿಯ ವಿರೋಧಿಯಾಗಿದೆ. ಇತಿಹಾಸದ ಇತರ ಕತೆಯಾಗಬಹುದಾಗಿದ್ದ ‘ಕುಸುಮಬಾಲೆ’ ಸದ್ಯಕ್ಕೆ ಉಳ್ಳವರ ಮೇಲುವರ್ಗದವರ ಆತ್ಮಚರಿತ್ರೆಯಾಗಿದೆ. ಆ ಕತೆಯ ಒಡಲಿನಂತ ಆ ಕಲಾತ್ಮಕ ಚೆಲುವಿನ ಭಾಷೆಯನ್ನು ತೆಗೆದುಬಿಟ್ಟರೆ ಅದು ದಲಿತರ ನೇಣುಗಂಬದಂತೆ ಕಾಣಿಸುತ್ತದೆ.
..ದಲಿತ ವಿರೋಧಿಯಾದ ಸರ್ಕಾರ, ದಲಿತರ ಕೊಲೆಯನ್ನು ಬಯಸುವ ಸರ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ದಲಿತ ವಿರೋಧಿಗಳಾಗಿರುವುದರಿಂದ ದಲಿತ ವಿರೋಧಿಕತೆಯನ್ನು ಪುರಸ್ಕರಿಸಿವೆ. ಈ ಗೌರವ ದಲಿತರಿಗೆ ಗೌರವವಲ್ಲ. ಬದಲಿಗೆ ಅಗೌರವವೆಂದೇ ನನ್ನ ಭಾವನೆ.