ಕವಿ ಕೆ.ಬಿ. ಸಿದ್ಧಯ್ಯ ಅವರ ‘ಬಕಾಲ’ ಕವನ ಸಂಕಲನದ ಬೆನ್ನುಡಿ
ಹೊರಗೆ ಐಲು ಪೈಲಿನಂತೆ ಒಳಗೆ ತುಂಬಾ ಸಂತನಂತೆ ಗೋಚರಿಸುವ ನಮ್ಮ ಕೇಬಿಯ ಆತ್ಮ ಬಕಾಲದ ಮೂಲಕ ನುಡಿಕೊಟ್ಟಿದೆ.
ದಕ್ಕದ ಮಹಾಮುನಿಯನ್ನು ದಕ್ಕಿಸಿಕೊಳ್ಳುವ ಮಹತ್ವಾಕಾಂಕ್ಷೆಗೆ ತಕ್ಕಾಗಿ ಕೇಬಿಯ ಧ್ಯಾನದ ಸ್ತರದಲ್ಲಿ ಪರಿಭಾವಿಸಿ ರೂಪಕದ ಪ್ರತಿಭೆಯೊಡನೆ ಸೆಣೆಸಿದ್ದಾನೆ. ಇದು ಸೋಲೋ ಗೆಲುವೋ ಎಂಥದೋ . ಈ ಪ್ರಯತ್ನವೇ ಅಸಾಧಾರಣವಾದುದಾಗಿದೆ. ಹಾಗೂ ಸತ್ವಯುತ ಸೃಷ್ಟಿಕರ್ತನೊಬ್ಬನ ಹುಟ್ಟನ್ನು ಹೇಳುತ್ತದೆ.