ಎಸ್.ಮಂಜುನಾಥ್ ಅವರ ಕವಿತೆಗಳ ಕುರಿತು ದೇವನೂರ ಮಹಾದೇವ

s manj s manj 2

ಜೀವಯಾನದ ಉದ್ದಕ್ಕೂ ಒಂದೆರಡಲ್ಲ ಅನೇಕ ಸಾಲುಗಳು ನಮ್ಮನ್ನು ನೀರಿನ ಸುಳಿ ಸೆಳೆದುಕೊಳ್ಳುವಂತೆ ಸೆಳೆದುಕೊಳ್ಳುತ್ತವೆ. ಅದರೊಳಗೆ ನಾವು ಇಳೀತೀವಿ. ಅವು ನಮ್ಮೊಳಗೇ ಇಳಿದು ಅಲ್ಲಾಡಿಸುತ್ತವೆ. ಇದು ಕಮ್ಮಿ ಕೃಪೆ ಅಲ್ಲ. ಬಿಡಿಬಿಡಿಯಾದ ಈ ಕವಿತೆಗಳು ಇಡಿಯಾಗಿ ಓದಿ ಮುಗಿಸಿದ ಮೇಲೆ ಜೀವಯಾನದ ಅಂಗಾಂಗಗಳಂತೆ ಆಗಿ ಒಂದೇ ಜೀವ ಆಗುತ್ತದೆ.