ಹೆಜ್ಜೆಗುರುತು

ದೇವನೂರ ಮಹಾದೇವ ಅವರ ಬದುಕು-ಬರಹದ ಕುರಿತು ಕಿರು ಪರಿಚಯ ಹಾಗೂ ಮುಖ್ಯ ಘಟ್ಟಗಳ ದಾಖಲೀಕರಣ ಈ ಹೆಜ್ಜೆಗುರುತು.

ಮೈಲಿಗಲ್ಲುಗಳು

ಹುಟ್ಟಿದ್ದು-1948ರ ಏಪ್ರಿಲ್ ತಿಂಗಳಿನ ಯಾವುದೋ ಒಂದು ಸೋಮವಾರ, [ಶಾಲಾ ದಾಖಲಾತಿಗಳಲ್ಲಿ 10 ಜೂನ್ 1948] ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ.
ಹೆತ್ತವರು-ನಂಜಮ್ಮ ಮತ್ತು ನಂಜಯ್ಯ
ಕುಟುಂಬ– ಪತ್ನಿ ಸುಮಿತ್ರಾಬಾಯಿ
ಹಿರಿಯ ಮಗಳು ಉಜ್ವಲ, ಅಳಿಯ ವೆಂಕಟೇಶ್, ಮೊಮ್ಮಗ ಅರವಿಂದ
ಕಿರಿಯ ಮಗಳು ಮಿತಾ, ಅಳಿಯ ಅವಿನಾಶ್, ಮೊಮ್ಮಗಳು ರುಹಾನಿ

ಪ್ರೀತಿಯ ಕೃಷಿ ಭೂಮಿ-ಬನವಾಸಿ

ಸಮುದಾಯದೊಂದಿಗೆ-ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ, 3ದಶಕಗಳಿಂದ ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳೊಡಗೂಡಿ 2005ರಲ್ಲಿ ಹುಟ್ಟಿಕೊಂಡ ಪರ್ಯಾಯ ರಾಜಕಾರಣದ ಪ್ರಯೋಗವಾದ ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ. 2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ ಯಲ್ಲಿ ಮುಖ್ಯರು.

ಮೊದಲಕತೆ- “ಕತ್ತಲ ತಿರುವು” ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದು-1967
ಕನ್ನಡ ಎಂ.ಎ-1973-74
ದ್ಯಾವನೂರು-1973
ಸಿಐಐಎಲ್‌ನಲ್ಲಿ ಕೆಲಸ-1975
ಒಡಲಾಳ-1979
ಕುಸುಮಬಾಲೆ-1984
ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ಸಹಜ ಕೃಷಿಯಲ್ಲಿ ತೊಡಗಿದ್ದು -1989
ಸಮಗ್ರ ಕೃತಿ ಪ್ರಕಟಣೆ-1992 [ಲಂಕೇಶ್ ಪ್ರಕಾಶನ]
ಮಹಾದೇವರ ಸಾಹಿತ್ಯ ಕುರಿತು ಅಭಿನವ ವಿಶೇಷ ಸಂಚಿಕೆ-ಯಾರ ಜಪ್ತಿಗೂ ಸಿಗದ ನವಿಲುಗಳು-1999 [ಪರಿಷ್ಕೃತ ಮುದ್ರಣ 2013]
ಎದೆಗೆ ಬಿದ್ದ ಅಕ್ಷರ-2012 [ಇದುವರೆಗೆ 12 ಮುದ್ರಣ ಕಂಡಿದೆ]

ಪ್ರಶಸ್ತಿ-ಗೌರವಗಳು

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-1984

ಒಡಲಾಳಕ್ಕೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ-1984

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿರಾಕರಣೆ -1984

ಅಮೇರಿಕಾದ ಅಯೋವಾದಲ್ಲಿ ಅಂತರಾಷ್ಟ್ರೀಯ ಬರಹಗಾರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು-1989

ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1990 [ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕನ್ನಡಿಗ] [14.11.2015 ರಂದು ಹಿಂದಿರುಗಿಸಲಾಗಿದೆ. ]

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-1995

ಕರ್ನಾಟಕ ರಾಜ್ಯ ಅಂಬೇಡ್ಕರ್ ಪ್ರಶಸ್ತಿ

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸಾಹಿತ್ಯ ಸಾಧನೆಗಾಗಿ-2011 [14.11.2015 ರಂದು ಹಿಂದಿರುಗಿಸಲಾಗಿದೆ.]

ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ನಿರಾಕರಣೆ-2012

ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -14.4.2012

ಅವಧಿ ವೆಬ್ ವತಿಯಿಂದ ಮಹಾದೇವರ ಕುರಿತ ವಿಶೇಷ ಸಂಚಿಕೆ-11.12.2012

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ-2012

ಅಲ್ಲಮಪ್ರಭುವಿನ ಹೆಸರಿನಲ್ಲಿ ನೀಡುವ ದಾವಣಗೆರೆಯ ಶಿವಯೋಗಾಶ್ರಮ ವಿರಕ್ತಮಠದ ಶೂನ್ಯಪೀಠ ಪ್ರಶಸ್ತಿ-2012

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್-2013

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವಿ.ಎಮ್.ಇನಾಂದಾರ್ ಪ್ರಶಸ್ತಿ-2013

ಬೆಂಗಳೂರು ಸ್ಪೂರ್ತಿಧಾಮದ ಬೋಧಿವೃಕ್ಷ ಪ್ರಶಸ್ತಿ-2013

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ನಿರಾಕರಣೆ-2014

ಕುವೆಂಪು ರಾಷ್ಟ್ರೀಯ ಪುರಸ್ಕಾರ 2016-29.12.2016

ಅನುವಾದಗಳು
ಕುಸುಮಬಾಲೆ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಇಂಗ್ಲಿಷ್‌ಗೆ ಸೂಸಾನ್
ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ.
ಮರಾಠಿಗೆ  ರಾಜಶ್ರೀ ಜಯರಾಮ ಅವರಿಂದ,
ಬೆಂಗಾಲಿಗೆ ಮೀರಾ ಚಕ್ರವರ್ತಿಯವರಿಂದ,
ಮಲೆಯಾಳಿಗೆ ಸಿ.ಕಮಲಾದೇವಿಯವರಿಂದ ತರ್ಜುಮೆಗೊಂಡಿದೆ.
ಒಡಲಾಳ ಮತ್ತು ಕೆಲ ಸಣ್ಣ ಕಥೆಗಳು-
ಇಂಗ್ಲಿಷ್‌ಗೆ ಎ.ಕೆ.ರಾಮಾನುಜನ್ ಮತ್ತು ಮನುಶೆಟ್ಟಿ
ಒಡಲಾಳ ತೆಲುಗಿಗೆ ವೆಂಕಟಸುಬ್ಬಯ್ಯ
ಒಡಲಾಳ ತಮಿಳಿಗೆ ಪವನನ್- ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಣೆ