ಜೀವತಂತು

ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.

ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ
Devanuru

 

 • ನಾಗತಿಹಳ್ಳಿ ರಮೇಶರ ಸಮುದ್ರ ಮತ್ತು ಮಳೆ ಕವನ ಸಂಕಲನಕ್ಕೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ.


  ಮುಂದೆ ನೋಡಿ
 • ಜಿ.ಎಸ್.ಜಯದೇವ ಅವರ ಪ್ರಜಾವಾಣಿ ಅಂಕಣ ಬರಹಗಳ ಸಂಕಲನ ‘ಹಳ್ಳಿಹಾದಿ’ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ. ಅದಕ್ಕೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ.


  ಮುಂದೆ ಓದಿ
 • 2003ರಲ್ಲಿ ‘ಅಭಿನವ’ ಪ್ರಕಾಶನ ಪ್ರಕಟಿಸಿದ್ದ ರಾಜೇಂದ್ರ ಚೆನ್ನಿ ಅವರ ‘ಅಮೂರ್ತತೆ ಮತ್ತು ಪರಿಸರ’ ಕೃತಿಗೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ..


  ಮುಂದೆ ಓದಿ
 • ದಿನಾಂಕ 6.11.2016 ರಂದು ಮೈಸೂರಿನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾವೇಶದ ಕೆಲವು ಮುಖ್ಯ ಭಾವಚಿತ್ರಗಳು


  ಮುಂದೆ ನೋಡಿ
 • 6.11.2016ರಂದು ಮೈಸೂರಿನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾರಂಭದ ಆಶಯ ನುಡಿಗಳನ್ನಾಡಿದ ದೇವನೂರ ಮಹಾದೇವ ಅವರ ಮಾತುಗಳ ಪೂರ್ಣ ಪಾಠ.


  ಮುಂದೆ ಓದಿ
 • ಕಾವೇರಿ ನದಿ ವಿವಾದ ಕೇವಲ ನದಿ ನೀರಿನ ಹಂಚಿಕೆಯ ವಿಚಾರವನ್ನು ಒಳಗೊಂಡಿಲ್ಲ ಬದಲಾಗಿ ನದಿ ನೀರಿನ ಮೂಲ, ಅದು ಆವರಿಸಿರುವ ಕಾಡು, ಅದು ಹರಿಯುವ ನದಿ ತಟ, ನದಿಯೊಳಗೆ ಚೆಲ್ಲುವ ತ್ಯಾಜ್ಯ, ಅದನ್ನು ಅವಲಂಬಿಸಿ ಬೆಳೆಯುವ ಬೆಳೆ…. ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿರುತ್ತದೆ. ನಾವದನ್ನು ಎಲ್ಲ ಆಯಾಮಗಳಲ್ಲೂ ಸರಿಯಾಗಿ ನಿರ್ವಹಿಸಿದರೆ ಮಾತ್ರ ನದಿಯೊಂದು ತನ್ನ ಪಾತ್ರವನ್ನು ಉತ್ತಮವಾಗಿ ತೂಗಿಸಿ, ಮನುಷ್ಯನನ್ನು ಸಲಹಬಹುದು. ಇಲ್ಲದಿದ್ದರೆ ಈಗಿನಂತೆ ಅದೊಂದು ಅಂಕಿ ಸಂಖ್ಯೆಗಳ ಆಟವಾಗಿಬಿಡಬಹುದಷ್ಟೆ. ಈ ಕುರಿತು ನಮ್ಮ ಕಣ್ಣು ತೆರೆಸುವಂತ ಲೇಖನವನ್ನು 23.10.2016 ರ ಕನ್ನಡಪ್ರಭದಲ್ಲಿ ದೇವನೂರ ಮಹಾದೇವ ಅವರು ಬರೆದಿದ್ದಾರೆ. ಆ ಲೇಖನದ ಪೂರ್ಣ ಪಾಠ ಇಲ್ಲಿದೆ.


  ಮುಂದೆ ಓದಿ
 • ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಭಾಲಚಂದ್ರ ನೇಮಾಡೆ ಅವರ ‘ಹಿಂದೂ’ ಕಾದಂಬರಿಯನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತ ದೇವನೂರ ಮಹಾದೇವ ಅವರ ಅನಿಸಿಕೆ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ 24.9.2016 ರಂದು ಪ್ರಕಟವಾಗಿದೆ.


  ಮುಂದೆ ಓದಿ
 • ಚಿಂತಕ ಜೆರೆಮಿ ಸೀಬ್ರೂಕ್ ಅವರ ಆಯ್ದ ಬರಹಗಳನ್ನು ಕವಯಿತ್ರಿ ರೋಸಿ ಡಿಸೋಜ ಹಾಗು ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಅನುವಾದಿಸಿ, ಸಂಪಾದಿಸಿದ್ದಾರೆ. ‘ಸ್ವರ್ಗಕ್ಕೆ ಮೂರೇ ಮೈಲಿ’ ಎಂಬ ಈ ಕೃತಿಯ ಬರಹಗಳು ಅಭಿವೃದ್ಧಿಯ ಆಗುಹೋಗು, ಜಾಗತೀಕರಣದ ಆಳ -ಹರಿವು, ಮನುಷ್ಯನ ಆಶೆ-ಹತಾಶೆಗಳ ಕುರಿತು ಚಿಂತಿಸುತ್ತದೆ. ಈ ಪುಸ್ತಕವನ್ನು ಅಹರ್ನಿಶಿ ಪ್ರಕಾಶನವು ಹೊರತರುತ್ತಿದ್ದು, ದೇವನೂರ ಮಹಾದೇವ ಅವರು ತಮ್ಮ ನೆಚ್ಚಿನ ಚಿಂತಕನ ಕೃತಿಗೆ ಪುಟ್ಟ ಬೆನ್ನುಡಿ ಬರೆದಿದ್ದಾರೆ. ಅದು ಇಲ್ಲಿದೆ.


  ಮುಂದೆ ನೋಡಿ
 • ಮೂರನೆಯ ಮಹಾಯುದ್ಧ ಈಗ ಜರುಗುತ್ತಿದೆ, ಆದರೆ ಅಗೋಚರವಾಗಿ. ಒಟ್ಟಿನಲ್ಲಿ ನಾವು ಸೇವಿಸುವ ಗಾಳಿ. ಕುಡಿಯುವ ನೀರು, ತಿನ್ನುವ ಅನ್ನ ಅಷ್ಟೇ ಅಲ್ಲ, ಈ ಭೂಮಿ ವಿಷಮಯವಾಗುತ್ತಾ ಜೊತೆಗೆ ಬೇಯುತ್ತಿದೆ. ಆದರೂ ಪರಿಸ್ಥಿತಿಗೆ ನಾವು ಹೊಂದಿಕೊಂಡು ಹೋಗುತ್ತಾ ಚಡಪಡಿಸುತ್ತಾ ಜೀವಿಸುತ್ತಿದ್ದೇವೆ, ಅಂಗಾತ ಬಿದ್ದಿಲ್ಲ ಅಷ್ಟೆ. ಹಿಂದಿನ ಯುದ್ಧಗಳಲ್ಲಿ ಒಲೆ ಹತ್ತಿ ಉರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುತ್ತಿತ್ತು. ವ್ಯತ್ಯಾಸವೆಂದರೆ ಇಂದಿನ ಯುದ್ಧ ಧರೆ ಹತ್ತಿ ಉರಿದಂತೆ. ಜಾಗತೀಕರಣದ ಅಭಿವೃದ್ಧಿ ಜಾಡಿನಲ್ಲಿ ಹೆಜ್ಜೆಯಿಡುತ್ತಿರುವ ಭಾರತಕ್ಕೆ ಮುಂದೆ ಸಂಭವಿಸಬಹುದಾದುದು ಹೆಚ್ಚುಕಮ್ಮಿ ಗ್ರೀಸ್‌ನಲ್ಲಿ ಈಗ ಜರುಗುತ್ತಿದೆ ಅನ್ನಿಸಿಬಿಟ್ಟಿತು. ಮುಂದುವರಿದ ಗ್ರೀಸ್‌ಗೆ ಆದದ್ದು ಅದೇ ಜಾಡಿನಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ಆಗುವುದಿಲ್ಲವೆ? ಈ ಪ್ರಶ್ನೆಗಳೊಡನೆ ನಮ್ಮ ಆತ್ಮಾಭಿಮಾನವನ್ನು, ನಿಷ್ಕ್ರಿಯತೆಯನ್ನು ಬಡಿದೆಬ್ಬಿಸುವ ದೇವನೂರ ಮಹಾದೇವ ಅವರ ಲೇಖನ ಪ್ರಜಾವಾಣಿ 17.7.2016 ರ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾಗಿದೆ.


  ಮುಂದೆ ಓದಿ
 • ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ [ರಿ] ವತಿಯಿಂದ ದಿನಾಂಕ 11.6.2016ರಂದು ನಡೆದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2015 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.


  ಮುಂದೆ ನೋಡಿ