ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • ದಕ್ಷಿಣಾಯಣ ಕರ್ನಾಟಕದ ಪರವಾಗಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರ ಆಹ್ವಾನ ಮತ್ತು ದಕ್ಷಿಣಾಯಣದ ರಾಷ್ಟ್ರೀಯ ಕನ್ವಿನರ್ ಪ್ರೊ.ಗಣೇಶ್ ಎನ್. ದೇವಿಯವರು ಈ ಕುರಿತು ಬರೆದಿರುವ ಕಿರು ಟಿಪ್ಪಣಿ.. ಇದರೊಂದಿಗೆ ನಮ್ಮ ಸಹಪಯಣ …


  ಮುಂದೆ ನೋಡಿ
 • ‘ಅರುಹು ಕುರುಹು’ ತ್ರೈ ಮಾಸಿಕದ ಮಹಿಳಾ ವಿಶೇಷ ಸಂಚಿಕೆ ಜನವರಿ-ಮಾರ್ಚ್-2017 ‘ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ’ದಲ್ಲಿ ರೂಪ ಹಾಸನ ಅವರೊಂದಿಗೆ ಒಂದು ಸಂವಾದ. ಸಂವಾದಕರು -ಭಾರತಿ ಬಿಜಾಪುರ, ಕೆಂಚಪ್ಪ. ಸಂಚಿಕೆಯ ಅತಿಥಿ ಸಂಪಾದಕರು -ಡಾ. ಎಚ್.ಡಿ.ಪ್ರಶಾಂತ್ ಮತ್ತು ಡಾ. ಎಸ್. ಜಯಶ್ರೀ.
  ‘ಅರುಹು ಕುರುಹು’ ಸಂಚಿಕೆ ಬೇಕಿದ್ದವರು ಸಂಪಾದಕರ ದೂರವಾಣಿ ಸಂಖ್ಯೆ 9449972117, 9008798406 ಸಂಪರ್ಕಿಸಬಹುದು.


  ಮುಂದೆ ಓದಿ
 • ರಾಜಸ್ತಾನದ ಆಲ್ವರ್ ಶಹರದಿಂದ 65 ಕಿ.ಮೀ. ದೂರದಲ್ಲಿರುವ ಸಾಧಾರಣ ಗ್ರಾಮ ನಾಂಡೂ. ಪಶುಸಂಗೋಪನೆ ಮತ್ತು ಕೃಷಿಯೇ ಪ್ರಧಾನ ಜೀವನಾಧಾರ. ಇಂತಹ ಗ್ರಾಮದ ಜನ ದಶಕಗಳ ಹಿಂದೆ ಬತ್ತಿ ಹೋದ ನದಿಯೊಂದನ್ನು ಸದ್ದುಗದ್ದಲವಿಲ್ಲದೆ ಪುನರುಜ್ಜೀವಿತಗೊಳಿಸಿದ ಯಶಸ್ಸಿನ ಕತೆಯಿದು. ಇದನ್ನು ಪ್ರಜಾವಾಣಿ ವಿಶ್ವ ಜಲದಿನವಾದ 22.3.2017 ರಂದು ರೂಪಿಸಿದ ‘ನೀರ ನೆಮ್ಮದಿಯ ನಾಳೆ’ ಸಂಚಿಕೆಗಾಗಿ ಹಿರಿಯ ಪತ್ರಕರ್ತ ಡಿ.ಉಮಾಪತಿಯವರು ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ.


  ಮುಂದೆ ಓದಿ
 • ಕೊಪ್ಪಳದಲ್ಲಿ 8.3.2017 ರಂದು ನಡೆದ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಅಂತರಾಷ್ಟ್ರೀಯ ಮಹಿಳಾ ದಿನದ ಉದ್ಘಾಟನೆಯಲ್ಲಿ, ಮಹಿಳಾ ಹೋರಾಟಗಾರ್ತಿ,ರಂಜನಾ ಪಾಡಿ ಅವರು ಆಡಿದ ಮಾತುಗಳು.


  ಮುಂದೆ ಓದಿ
 • ‘ಹೆಣ್ಣಾಗುವ’ ಅಪೂರ್ವ ರೂಪಾಂತರದ ಪ್ರಕ್ರಿಯೆ ಕುರಿತಂತೆ ಹಿರಿಯ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಅವರ ಅನುಭವದ ನಿರೂಪಣೆಯನ್ನು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರು 19.3.2017ರ ಪ್ರಜಾವಾಣಿಯ ಮುಕ್ತಛಂದ ಪುರವಣಿಯಲ್ಲಿ ಮಾಡಿದ್ದಾರೆ. . ‘ನಮ್ಮ ಮಕ್ಕಳಿಗೆ ನಾವು ಹೆಣ್ಣಾಗುವುದನ್ನು ಕಲಿಸದೇ ಇದ್ದರೆ ಅವರು ಹೆಣ್ಣೂ ಆಗುವುದಿಲ್ಲ. ಗಂಡೂ ಆಗುವುದಿಲ್ಲ’ ಎನ್ನುವ ಉಪಾಧ್ಯರ ಅನಿಸಿಕೆ, ಎಲ್ಲ ಪೋಷಕರನ್ನು ಉದ್ದೇಶಿಸಿ ಹೇಳಿದ ಕಿವಿಮಾತಿನಂತಿದೆ. ನಮ್ಮ ಓದಿಗಾಗಿ…


  ಮುಂದೆ ಓದಿ
 • ಮಹಿಳಾ ಉದ್ದೇಶಿತ ಆಯವ್ಯಯ-ಮಹಿಳೆಗೇನು ಬೇಕು?ಎಂಬ ರೂಪ ಹಾಸನ ಅವರ ಈ ಬರಹ 9.3.2017ರ ಪ್ರಜಾವಾಣಿಯ ‘ಸಂಗತ’ ವಿಭಾಗದಲ್ಲಿ ಪ್ರಕಟವಾಗಿದೆ


  ಮುಂದೆ ಓದಿ
 • ತಳಸಮುದಾಯಗಳಿಗೆ ಸೇರಿದ ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆ ‘ಖಬರ್ ಲಹರಿಯಾ’ ಕುರಿತು ಪತ್ರಕರ್ತ ಡಿ.ಉಮಾಪತಿ ಅವರು 8.3.2017ರ ಪ್ರಜಾವಾಣಿಯ ‘ಸಂಗತ’ದಲ್ಲಿ ವಿವರವಾಗಿ ಬರೆದಿದ್ದಾರೆ.


  ಮುಂದೆ ಓದಿ
 • ದಶಕಗಳಿಂದಲೇ ನೀರಿನ ಸಂಕಷ್ಟ ಪ್ರಾರಂಭವಾಗಿದ್ದು ಈಗ ಹಾಹಾಕಾರವೆದ್ದಿದೆ. ನೀರಿಲ್ಲದೆ ಯಾವ ಕೆಲಸವೂ ಪ್ರಾರಂಭವಾಗುವುದಿಲ್ಲವಾದ್ದರಿಂದ ಅದನ್ನೀಗ ಚಿನ್ನದಂತೆ ಜೋಪಾನ ಮಾಡಬೇಕಿದೆ. ಆ ಕುರಿತು ಮುರು ದಶಕಗಳಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ವೈಜ್ಞಾನಿಕ ಬರಹಗಾರ ಕೆ.ಎಸ್.ರವಿಕುಮಾರ್ ಅವರ ಈ ಲೇಖನ ಏಪ್ರಿಲ್ 2016 ರ ‘ಹೊಸತು’ ಮಾಸಿಕದಲ್ಲಿ ಪ್ರಕಟವಾಗಿದೆ. ನಮ್ಮ ಜಾಗೃತಿಗಾಗಿ ಮರು ಓದಿಗಾಗಿ …


  ಮುಂದೆ ನೋಡಿ
 • ಸರ್ಕಾರಗಳು ಯೋಜಿಸುವ ಮಹಿಳಾ ಉದ್ದೇಶಿತ ಆಯವ್ಯಯ ಎಂಬುದು ಹೇಗೆ ಅರ್ಥಹೀನವೂ ಮತ್ತು ಬಾಯ್ಮಾತಿನ ತಂತ್ರವೂ ಆಗಿ ಉಳಿದುಹೋಗುತ್ತಿದೆ ಎಂಬುದರೆಡೆಗೆ 7.3.2017 ರ ವಿಜಯಕರ್ನಾಟಕದ ತಮ್ಮ ‘ಅಗೇಡಿ’ ಅಂಕಣದ ಮೂಲಕ ಕೆ.ಪಿ.ಸುರೇಶ ಅವರು ವಿಶ್ಲೇಷಿಸಿದ್ದಾರೆ.


  ಮುಂದೆ ಓದಿ
 • 21.2.2017 ರ ವಿಜಯಕರ್ನಾಟಕದ ಕೆ.ಪಿ.ಸುರೇಶ ಅವರ ಅಂಕಣ ‘ಅಗೇಡಿ’ಯಲ್ಲಿ ಈ ಬರಹವಿದೆ. ಕರ್ನಾಟಕದ ಮಹಿಳಾ ಸ್ವಸಹಾಯ ಸಂಘಗಳು ಈಗ ತಲುಪಿರುವ ಹಂತ, ಪಕ್ಕದ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಇದೇ ಮಾದರಿಯ ಸಂಘಗಳು ಇಡೀ ಗ್ರಾಮೀಣಾಭಿವೃದ್ಧಿ, ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಆರೋಗ್ಯಕರ ಮಹಿಳಾ ಬದುಕನ್ನು ಹಾಗೂ ಗ್ರಾಮ ಭಾರತವನ್ನ ಕಟ್ಟುತ್ತಿರುವ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ.


  ಮುಂದೆ ಓದಿ