ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • ಪ್ರೊ. ಸುಮಿತ್ರಾಬಾಯಿಯವರು ಬರೆಯುತ್ತಿರುವ, ‘ಕಂಡುಂಡ ತುಣುಕು’ಗಳೆಂಬ ಪುಸ್ತಕದಲ್ಲಿ ಈ ಪ್ರಕಟಿತ ಭಾಗವೂ ಬರುತ್ತದೆ. ವರ್ಷದ ಹಿಂದೆಯೇ ಇದನ್ನು ಅವರು ಬರೆದಿದ್ದರು. ಈಗ ಆಂದೋಲನ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ನಿಧನರಾದ ನಂತರ ಅವರ ನೆನಪಿನಲ್ಲಿ 26.11.2017ರ ಆಂದೋಲನ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.


  ಮುಂದೆ ನೋಡಿ
 • ಲೇಖಕ ವಿಕಾಸ್ ಆರ್. ಮೌರ್ಯ ಅವರು 10 ಮತ್ತು 11 ನವೆಂಬರ್ 2017 ರಂದು ವಾರ್ತಾಭಾರತಿ ಪತ್ರಿಕೆಗೆ ಬರೆದ ‘ಕಪ್ಪು ಆರ್ಥಿಕತೆ ಎಂದರೆ ಕೇವಲ ನೋಟುಗಳಲ್ಲ’ ಎಂಬ ಬರಹ ಅತ್ಯಂತ ಸರಳವಾಗಿ ಕಪ್ಪು ಆರ್ಥಿಕತೆಯ ಒಳ ಹೊರಗನ್ನು ಬಿಚ್ಚಿಡುತ್ತದೆ.


  ಮುಂದೆ ನೋಡಿ
 • ಗಾಂಧಿ ಒಂದಲ್ಲ ಒಂದು ರೀತಿ ನಮ್ಮನ್ನು ಕಾಡುತ್ತಲೇ ಇರುವ ಪ್ರೇರಕ ಶಕ್ತಿ. ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡಬಹುದು, ಕಾಣಬಹುದಷ್ಟೆ. ಈ ಕಾಡುವಿಕೆಯ ಮಾದರಿಗಳನ್ನು ಕೆ.ಪಿ.ಸುರೇಶ ಅವರು ತಮ್ಮ 3.10.17ರ ವಿಜಯಕರ್ನಾಟಕದ ‘ಅಗೇಡಿ’ ಅಂಕಣ ಬರಹದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.


  ಮುಂದೆ ನೋಡಿ
 • ವಿರೋಧಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ, ಬೆದರಿಕೆಗೆ ಮಣಿಯಲಿಲ್ಲ, ಮಳೆ ಬಂದರೂ ಜಗ್ಗಲಿಲ್ಲ; ಮದ್ಯ ನಿಷೇಧಕ್ಕೆ ಓಂಕಾರ ಬರೆಯಿತು ಈ ವಿಶೇಷ ಗ್ರಾಮಸಭೆ. ಹೌದು, ಇದಕ್ಕೆ ಕಾರಣರಾದ ಮಹಿಳೆಯರ ಮೊಗದಲ್ಲಿ ಆಗ ಜಗತ್ತನ್ನೇ ಗೆದ್ದ ಸಂಭ್ರಮ.-ಇದೊಂದು ವಿಶೇಷ ಗ್ರಾಮಸಭೆ ವರದಿಯಷ್ಟೇ ಅಲ್ಲ…. 12.9.2017 ರ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಸಾಮಾಜಿಕಕಾರ್ಯಕರ್ತೆ ಶಾರದಾ ಗೋಪಾಲ್ ಅವರು ಕಟ್ಟಿಕೊಟ್ಟ ಗ್ರಾಮೀಣ ಹೆಣ್ಣುಮಕ್ಕಳ ಒಂದು ದಿಟ್ಟ ಪ್ರತಿರೋಧದ ಆಪ್ತ ಚಿತ್ರಣ.


  ಮುಂದೆ ನೋಡಿ
 • ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂಬ ಹೆಸರಿನ ವಾಣಿಜ್ಯ ತೆರಿಗೆ ವ್ಯವಸ್ಥೆಯು ತೆರಿಗೆ ಕೊಡಲಾರದ ಹಾಗೂ ಪಡೆಯಲಾಗದ ಅತಿಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಉದ್ಯಮಿಗಳನ್ನು ವಿನಾಶದ ಅಂಚಿಗೆ ತಳ್ಳಿವೆ ಎಂಬುದನ್ನು ಖ್ಯಾತ ಚಿಂತಕ ಪ್ರಸನ್ನ ಅವರು ತಮ್ಮ 14.9.2017 ರ ತಮ್ಮ ಪ್ರಜಾವಾಣಿ ಅಂಕಣ ‘ಸಂಭಾಷಣೆ’ಯಲ್ಲಿ ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • 5.9.2017ರಂದು ನಡೆದ ಪತ್ರಕರ್ತೆ, ವಿಚಾರವಾದಿ, ಲೇಖಕಿ ಗೌರಿ ಲಂಕೇಶ್ ಅವರ ಭೀಕರ ಹತ್ಯೆ ಮನುಷ್ಯತ್ವದ ಬಗ್ಗೆ ನಂಬಿಕೆ ಇಟ್ಟಿರುವ ಎಲ್ಲ ಪ್ರಜಾಪ್ರಭುತ್ವವಾದಿಗಳಿಗೂ ದಿಗ್ಬ್ರಮೆ ಮೂಡಿಸಿದೆ. ಈ ಕಗ್ಗೊಲೆಯನ್ನು ನಮ್ಮಬನವಾಸಿ ತಂಡ ತೀವ್ರವಾಗಿ ಖಂಡಿಸುತ್ತದೆ. ಗೌರಿ ಅವರ ವ್ಯಕ್ತಿತ್ವ, ಸ್ವಭಾವಗಳ ಎರಡು ಬಗೆಯ ಅತಿರೇಕದ ವರ್ಣನೆಗಳು ಎಲ್ಲೆಡೆ ಬಿತ್ತರಗೊಳ್ಳುತ್ತಿವೆ. ಈ ಹೊತ್ತಿನಲ್ಲಿ ಅವರನ್ನು ಕುರಿತು ನಿರ್ಲಿಪ್ತವಾಗಿ, ಸಮತೂಕ ಮತ್ತು ಸಮಚಿತ್ತದಿಂದ ಬರಬಹುದಾದ ಲೇಖನಕ್ಕಾಗಿ ಹುಡುಕಾಡುತ್ತಿದ್ದಾಗ ನಮಗೆ ಸಿಕ್ಕ ಈ ಲೇಖನ ಗೌರಿ ಅವರನ್ನ ಹತ್ತಿರದಿಂದ ಕಂಡು ಅಷ್ಟೇ ದೂರದಿಂದ ಮತ್ತು ಆಪ್ತವಾಗಿ 10.9.2017ರ ವಾರ್ತಾಭಾರತಿ ಪತ್ರಿಕೆಗಾಗಿ ಬಸು ಮೇಗಲಕೇರಿ ಅವರು ಬರೆದಿದ್ದಾರೆ. ಇಲ್ಲಿ ಬಳಸಲು ಅನುಮತಿ ನೀಡಿದ ಲೇಖಕರಿಗೆ ನಮ್ಮ ಬನವಾಸಿಯ ಪರವಾಗಿ ಹಾರ್ದಿಕ ವಂದನೆಗಳು.


  ಮುಂದೆ ನೋಡಿ
 • ನಾವೀಗ ನೈತಿಕ ಮೌಲ್ಯಗಳ ಅಧಪತನದ ಕಾಲಘಟ್ಟದಲ್ಲಿ ನಿಂತಿದ್ದೇವೆ. ಸೂಕ್ಷ್ಮತೆ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸಾವನ್ನೂ ವಿಜೃಂಭಿಸುವ, ಅದಕ್ಕಾಗಿ ಸಂತೋಷಿಸುವ ಮನಸ್ಥಿತಿಯ ಕಡೆಗೆ ಸಾಗುತ್ತಿರುವುದು ನಿಜಕ್ಕೂ ದುರಂತ ಸೂಚಕ. ಇದನ್ನು ಗೌರಿ ಲಂಕೇಶ್ ಅವರ ಸಾವಿನ ಹಿನ್ನಲೆಯಲ್ಲಿ, ಅತ್ಯಂತ ಮಾರ್ಮಿಕವಾಗಿ ಎ.ನಾರಾಯಣ ಅವರು ತಮ್ಮ 11.9.2017ರ ಪ್ರಜಾವಾಣಿ ಅಂಕಣ ‘ಅನುರಣನ’ ದಲ್ಲಿ ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • 16.7.2017ರ ಪ್ರಜಾವಾಣಿಯ ಈ ಭಾನುವಾರ ವಿಶೇಷ ಪುರವಣಿಯಲ್ಲಿ ಜಲ ಸಂರಕ್ಷಣೆಯ ಮಾದರಿಗಳು ಮತ್ತು ಬಿಕ್ಕಟ್ಟುಗಳನ್ನು ಕುರಿತು ಜಲತಜ್ಞ ಎನ್.ಜೆ.ದೇವರಾಜ ರೆಡ್ಡಿ ಅವರನ್ನು ಪತ್ರಕರ್ತರಾದ ಗಾಣಧಾಳು ಶ್ರೀಕಂಠ ಅವರು ಸಂದರ್ಶಿಸಿದ್ದಾರೆ.


  ಮುಂದೆ ನೋಡಿ
 • ಒಂದೂವರೆ ಕಿಲೊಮೀಟರ್ ಆಳದಲ್ಲಿ ಅತಿಶೀತಲ ಸ್ಥಿತಿಯಲ್ಲಿ ಮಂಜಿನ ಗಡ್ಡೆಯಂತೆ ಕೂತಿದ್ದ ಮೀಥೇನ್ ಸ್ಫಟಿಕವನ್ನು ಅವರು ಮೊದಲ ಬಾರಿಗೆ ಹೊರಕ್ಕೆಳೆದರು. ಗಾಳಿಗೆ ಸ್ಪರ್ಶವಾದದ್ದೇ ತಡ, ಸ್ಫಟಿಕ ಒಡೆಯಿತು. ಕಿಡಿಯ ಸ್ಪರ್ಶವಾಗಿದ್ದೇ ತಡ ಬೆಂಕಿ ಸ್ಫೋಟಿಸಿತು. ಹೊರತೆಗೆದ ಆ ವಸ್ತುವಿಗೆ ‘ಹಿಮದಗ್ನಿ’ ಎಂದರು, ‘ಬರ್ಫದಬೆಂಕಿ’ ಎಂದರು, ‘ಬೆಂಕಿಗಟ್ಟಿ’ ಎಂದರು……..ಸಮುದ್ರದಾಳದ ವೈಚಿತ್ರಗಳು ಮತ್ತು ಅದರಾಳದಲ್ಲಿ ಮನುಷ್ಯನ ಪ್ರಯತ್ನಗಳ ಕುರಿತು ನಾಗೇಶ್ ಹೆಗಡೆಯವರು 29.6. 2017ರ ತಮ್ಮ ಪ್ರಜಾವಾಣಿ ಅಂಕಣ ವಿಜ್ಞಾನ ವಿಶೇಷಕ್ಕೆ ಬರೆದ ಬರಹ ನಮ್ಮ ಓದಿಗಾಗಿ….


  ಮುಂದೆ ನೋಡಿ
 • ಕಸಾಯಿಖಾನೆಗೆ ಹೋದ ದನದ ಅರ್ಧಪಾಲು ಮಾತ್ರ ಆಹಾರಕ್ಕೆ, ಇನ್ನರ್ಧ ಭಾಗ ನಮ್ಮನಿಮ್ಮೆಲ್ಲರ ಬಳಕೆಗೆ -ಅದು ನಿಮಗೆ ಗೊತ್ತಿತ್ತೆ? ಈ ದಿನ (ಅಂದರೆ ಜೂನ್ 1) ‘ಅಂತರರಾಷ್ಟ್ರೀಯ ಹಾಲಿನ ದಿನ’ ಎಂದು ಆಚರಿಸಲಾಗುತ್ತಿದೆ. ಹಾಲಿನ ಜೊತೆ ಜೊತೆಗೆ ನಾವು ಬೇರೆ ಏನೇನು ವಿಧದಲ್ಲಿ ಗೋವುಗಳನ್ನು ಬಳಸುತ್ತಿದ್ದೇವೆ ಗೊತ್ತೆ? ಇಲ್ಲಿದೆ ವಿವರಗಳು… ‘ಪ್ರಜಾವಾಣಿ’ 1 ಜೂನ್ 2017ರ ತಮ್ಮ ವಿಜ್ಞಾನ ವಿಶೇಷ ಅಂಕಣದಲ್ಲಿ ನಾಗೇಶ್ ಹೆಗಡೆಯವರು ಅದ್ಭುತವಾಗಿ, ಎಳೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ. ಓದಿ. ಅದರೊಂದಿಗೆ ನಮ್ಮ ಸಹಪಯಣ …..


  ಮುಂದೆ ನೋಡಿ