ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • 8 ಮಾರ್ಚ್ 2018ರಂದು ಶಿವಮೊಗ್ಗೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮೊದಲ ವಿಚಾರಸಂಕಿರಣದಲ್ಲಿ, ಫ್ಲೇವಿಯಾ ಆಗ್ನೇಸ್ ಮತ್ತು ಮನಿಷಾ ಗುಪ್ತೆಯವರ ಸಮ್ಮುಖದಲ್ಲಿ ಕವಯಿತ್ರಿ ಪ್ರೊ.ಸ.ಉಷಾ ಅವರು ಉದ್ಘಾಟನಾ ಭಾಷಣದಲ್ಲಿ ಆಡಿದ ಮಾತುಗಳ ಪೂರ್ಣಪಾಠ


  ಮುಂದೆ ನೋಡಿ
 • ಮಾರ್ಚ್ 5, 2018ರ ತಮ್ಮ ಪ್ರಜಾವಾಣಿಯ ದೆಹಲಿ ನೋಟ ಅಂಕಣದಲ್ಲಿ -ಡಿ.ಉಮಾಪತಿಯವರು ಬಿಹಾರದ ಮುಜಫರ್ ಜಿಲ್ಲೆಯ ಚತುರ್ಭುಜಸ್ತಾನ ಎಂಬಲ್ಲಿನ ವೇಶ್ಯಾವಾಟಿಕೆಯ ಕುರಿತು ಬರೆಯುತ್ತ ಆ ಪ್ರವಾಹಕ್ಕೆ ಎದುರಾಗಿ ಈಜಿ ‘ಪರ್ಛಮ್’ ಮತ್ತು ‘ಜುಗ್ನು’ವನ್ನು ಹುಟ್ಟು ಹಾಕಿದ್ದ ನಸೀಮಾ ಖಾತೂನ್ ಎಂಬ ದಿಟ್ಟ ಯುವತಿಯ ಕಥೆಯನ್ನು ಮನಮುಟ್ಟುವಂತೆ ಬರೆದಿದ್ದಾರೆ. ನಮ್ಮ ಮರು ಓದಿಗಾಗಿ …


  ಮುಂದೆ ನೋಡಿ
 • ಕಾಡಿನ ಜೀವಗಳಿಗಾಗಿ, ಸಾಕು ಪ್ರಾಣಿಗಳಿಗಾಗಿ ಈ ಅಜ್ಜ ಏಳು ಕೆರೆಗಳನ್ನು ಕಟ್ಟಿಸಿದ್ದಾರೆ; ಸ್ವಂತ ಕುರಿಗಳನ್ನೇ ಮಾರಿ! ಕಾಮೇಗೌಡರ ಈ ಕೆರೆ ಪುರಾಣವನ್ನು 6.3.2018ರ ಪ್ರಜಾವಾಣಿ ಕರ್ನಾಟಕ ದರ್ಶನ ಪುರವಣಿಯಲ್ಲಿ ಅಶೋಕ ಉಚ್ಛಂಗಿಯವರು ಮನ ಮುಟ್ಟುವಂತೆ ಬರೆದಿದ್ದಾರೆ.

  6 Mar, 2018


  ಮುಂದೆ ನೋಡಿ
 • ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳಾಗಿ ನೇಮಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲಾಗುತ್ತದೆ ಎನ್ನುವುದು ಸರ್ಕಾರದ ಘೋಷಣೆ. ಆದರೆ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎಂಬುದು ವಾಸ್ತವ. ಈ ಕುರಿತು 8, ಮಾರ್ಚ್ 2018 ರಂದು ಪ್ರಜಾವಾಣಿಯ ‘ನಾರೀಪಥ’ ವಿಶೇಷ ಪುರವಣಿಯಲ್ಲಿ ರಾಜೇಶ್ ರೈ ಚಟ್ಲ ಅವರು ವಿವರವಾದ ಲೇಖನವನ್ನು ಬರೆದಿದ್ದಾರೆ. ಅದು ನಮ್ಮ ಮರು ಓದಿಗಾಗಿ …


  ಮುಂದೆ ನೋಡಿ
 • 18.2.2018 ರಂದು ಪುಟ್ಟಣ್ಣಯ್ಯ ಅವರು ನಿಧನರಾದ ಸಂದರ್ಭದಲ್ಲಿ ಚುಕ್ಕಿ ನಂಜುಂಡಸ್ವಾಮಿಯವರು ಬರೆದ ಆಪ್ತ ಬರಹ thestate.news ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಮ್ಮ ಮರು ಓದಿಗಾಗಿ….


  ಮುಂದೆ ನೋಡಿ
 • 23.2.2018ರಂದು ಖ್ಯಾತ ಚಿಂತಕಿ, ಸಾಹಿತಿ,ಮಹಿಳಾಪರ ಹೋರಾಟಗಾರ್ತಿ ವಿಜಯಾದಬ್ಬೆಯವರ ನಿಧನರಾದರು. ಆ ಸಂದರ್ಭದಲ್ಲಿ thestate.news ಆನ್ ಲೈನ್ ಪತ್ರಿಕೆಯಲ್ಲಿ ರೂಪ ಹಾಸನ ಅವರು ಬರೆದ ಲೇಖನ.


  ಮುಂದೆ ನೋಡಿ
 • ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯ ಕಣ್ಣಿಂದ ಅಭಿವೃದ್ಧಿಯನ್ನು ನೋಡಿದರೆ ಹೇಗಿರುತ್ತದೆ? ಎಂಬುದನ್ನು 6.3.2018ರ ವಿಜಯಕರ್ನಾಟಕದ ತಮ್ಮ ‘ಅಗೇಡಿ’ ಅಂಕಣದಲ್ಲಿ ಕೆ.ಪಿ.ಸುರೇಶ ಅವರು ತಳಸ್ಪರ್ಶಿಯಾಗಿ ವಿಶ್ಲೇಷಿಸಿದ್ದಾರೆ.


  ಮುಂದೆ ನೋಡಿ
 • ಈಚೆಗೆ ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಹೊಸ ರಾಜಕೀಯ ಸಾಧ್ಯತೆಯೊಂದನ್ನು ತೆರೆದಿಟ್ಟಿರುವವರು ಜಿಗ್ನೇಶ್ ಮೇವಾನಿ. ಕೋಮು ಸೌಹಾರ್ದ ವೇದಿಕೆಯ ‘ಸೌಹಾರ್ದ ಮಂಟಪ’ ಸಮಾವೇಶದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಬಂದಿದ್ದಾಗ ‘ದಿ ಸ್ಟೇಟ್’ಗೆ ನೀಡಿದ ಸಂದರ್ಶನವಿದು. ಸಂದರ್ಶಕರು -ಪಿ.ಓಂಕಾರ್. 31.12.2017ರಂದು ‘ದಿ ಸ್ಟೇಟ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದರ ಕೃಪೆಗೆ ವಂದನೆಗಳು


  ಮುಂದೆ ನೋಡಿ
 • ಲೈಂಗಿಕ ದಮನಿತರ ವರದಿ ಸರಕಾರಕ್ಕೆ ಸಲ್ಲಿಸಿ ಹತ್ತು ತಿಂಗಳೇ ಕಳೆದು ಹೋದರೂ ಸರಕಾರ ಅವರ ಪುನರ್ವಸತಿಗಾಗಿ ಐದು ಪೈಸದಷ್ಟೂ ಕಾಳಜಿ ತೋರಿಸಿಲ್ಲ. ಬದಲಿಗೆ ಮೊದಲೇ ಇದ್ದ ಯೋಜನೆಯಲ್ಲೇ ಕಡಿತ ಮಾಡಿದೆ. ಇದರ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಸರಕಾರದ ಉಚಿತ ಕಾಂಡೊಮ್ ಹಂಚುವ ಜಾಲವೇ ಈ ದಮನಿತರ ಪುನರ್ವಸತಿಗೆ ಮುಳುವಾಗಿರುವುದು ಕಾಣುತ್ತದೆ. ಈ ಕುರಿತು ರೂಪ ಹಾಸನ ಅವರ ವಿವರವಾದ ಲೇಖನ thestate online ಪತ್ರಿಕೆಯಲ್ಲಿ ಡಿಸೆಂಬರ್ 27 ಮತ್ತು 28, 2017 ರಂದು ಎರಡು ಕಂತುಗಳಾಗಿ ಪ್ರಕಟವಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ……


  ಮುಂದೆ ನೋಡಿ
 • ನಾಡು ಕಟ್ಟಲು ದುಡಿದ ಹೋರಾಟಗಾರರು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಪ್ರಗತಿಗಾಗಿ ದುಡಿದು, ಅಸಮಾನತೆ ಅನ್ಯಾಯಗಳನ್ನು ತೊಡೆದು ಹಾಕುವ ಮೂಲಕ ಸ್ವಸ್ಥ ಹಾಗೂ ಉತ್ತಮ ಸಮಾಜ ಕಟ್ಟಲು ಹೋರಾಡಿದವರು ಸಾವಿರಾರು ಮಂದಿ. ಕಳೆದ 62 ವರ್ಷಗಳಲ್ಲಿ ರಾಜ್ಯದಲ್ಲಿ ಅಂತಹ ನೂರಾರು ಹೋರಾಟಗಳ ಮುಂಚೂಣಿಯಲ್ಲಿದ್ದವರನ್ನು ‘ದಿ ಸ್ಟೇಟ್’ [thestate]ಆನ್ಲೈನ್ ಪತ್ರಿಕೆ ಇಲ್ಲಿ ಪಟ್ಟಿ ಮಾಡಿದೆ. ಅದರಲ್ಲಿ ದೇವನೂರ ಮಹಾದೇವ ಅವರೂ ಒಬ್ಬರು.   https://www.thestate.news/specials/62-activists


  ಮುಂದೆ ನೋಡಿ